ದೇಶ

ಬಂಧಿತ ಅಮೃತ್ ಪಾಲ್ ಸಿಂಗ್ ಅಸ್ಸಾಂ ನ ದಿಬ್ರುಘರ್ ಜೈಲಿಗೆ ರವಾನೆ, ರಾಜ್ಯದಲ್ಲಿ ಭದ್ರತೆ ಹೆಚ್ಚಳ

Srinivas Rao BV

ಗುವಾಹಟಿ: ವಾರಿಸ್ ಪಂಜಾಬ್ ದೆ ಮುಖ್ಯಸ್ಥ ಅಮೃತ್ ಪಾಲ್ ಸಿಂಗ್ ನ್ನು ಅಸ್ಸಾಮ್ ನ ದುಬ್ರುಘರ್ ಜೈಲಿಗೆ ಬಿಗಿ ಭದ್ರತೆ ನಡುವೆ ರವಾನಿಸಲಾಗಿದೆ.  

ಪಂಜಾಬ್ ನಿಂದ ಆತನನ್ನು ಅಸ್ಸಾಂ ಗೆ ವಿಶೇಷ ವಿಮಾನದಲ್ಲಿ ಕರೆತರಲಾಗಿತ್ತು. ಪಂಜಾಬ್ ನ ಮೊಗಾ ಜಿಲ್ಲೆಯಲ್ಲಿ ಅಮೃತ್ ಪಾಲ್ ಸಿಂಗ್ ನ್ನು ಭಾನುವಾರ ಮುಂಜಾನೆ ಬಂಧಿಸಲಾಗಿತ್ತು.  ಮಧ್ಯಾಹ್ನದ ವೇಳೆಗೆ ಆತನನ್ನು ದಿಬ್ರುಘರ್ ನ ವಿಮಾನ ನಿಲ್ದಾಣಕ್ಕೆ ಕರೆ ತರಲಾಗಿದೆ. ಅಸ್ಸಾಂ ನಲ್ಲಿಯೂ ಭದ್ರತೆಯನ್ನು ಹೆಚ್ಚಳಗೊಳಿಸಲಾಗಿದೆ. ಮಾ.18 ರಿಂದಲೂ ಅಮೃತ್ ಪಾಲ್ ಸಿಂಗ್ ನ ಬಂಧನಕ್ಕಾಗಿ ಪೊಲೀಸರು ಕಾರ್ಯಾಚರಣೆ ಕೈಗೊಂಡಿದ್ದರು. 

ಮಾರ್ಚ್ 18ರಂದು ಪೊಲೀಸರು ಅಮೃತ್ ಪಾಲ್ ಸಿಂಗ್ ನನ್ನು ಬಂಧಿಸಲು ತೆರಳಿದ್ದರು. ಈ ವೇಳೆ ಖಲಿಸ್ತಾನ್ ಸಹಾನುಭೂತಿಯು ಜಲಂಧರ್ ಜಿಲ್ಲೆಯಲ್ಲಿ ಪೊಲೀಸರ ಬಲೆಯಿಂದ ತಪ್ಪಿಸಿಕೊಂಡು, ವಾಹನಗಳನ್ನು ಬದಲಿಸಿ ಸಿನಿಮೀಯ ರೂಪದಲ್ಲಿ ಅಮೃತ್ ಪಾಲ್ ಎಸ್ಕೇಪ್ ಆಗಿದ್ದ. ಅಂದಿನಿಂದಲೂ ಈತನಿಗಾಗಿ ದೇಶದಲ್ಲಿ ಹುಡುಕಾಟ ನಡೆಯುತ್ತಲೇ ಇತ್ತು. ನೇಪಾಳಕ್ಕೆ ಪರಾರಿಯಾಗಿದ್ದಾರೆ ಎಂದೂ ಹೇಳಲಾಗಿತ್ತು. ಕೊನೆಗೂ ಈತನನ್ನು ಬಂಧಿಸುವಲ್ಲಿ ಪಂಜಾಬ್ ಪೊಲೀಸರು ಯಶಸ್ವಿಯಾಗಿದ್ದಾರೆ.

SCROLL FOR NEXT