ದೇಶ

ಜಮ್ಮು-ಕಾಶ್ಮೀರ ಮಾಜಿ ರಾಜ್ಯಪಾಲ ಮಲೀಕ್ ಸ್ವತಃ ಠಾಣೆಗೆ ಬಂದಿದ್ದರು, ಬಂಧಿಸಿಲ್ಲ: ದೆಹಲಿ ಪೊಲೀಸ್

Srinivas Rao BV

ನವದೆಹಲಿ: ಜಮ್ಮು-ಕಾಶ್ಮೀರದ ಮಾಜಿ ರಾಜ್ಯಪಾಲ ಸತ್ಯಪಾಲ್ ಮಲೀಕ್ ಅವರನ್ನು ವಶಕ್ಕೆ ಪಡೆಯಲಾಗಿದೆ ಎಂಬ ಮಾಹಿತಿಯನ್ನು ದೆಹಲಿ ಪೊಲೀಸರು ತಳ್ಳಿಹಾಕಿದ್ದಾರೆ.
 
ಈ ಬಗ್ಗೆ ಸ್ಪಷ್ಟನೆ ನೀಡಿರುವ ದೆಹಲಿ ಪೊಲೀಸರು, ಸತ್ಯಪಾಲ್ ಮಲೀಕ್ ಸ್ವತಃ ಆರ್ ಕೆ ಪುರಂ ಪೊಲೀಸ್ ಠಾಣೆಗೆ ಅವರ ಬೆಂಬಲಿಗರೊಂದಿಗೆ ಆಗಮಿಸಿದ್ದರು. ಸತ್ಯಪಾಲ್ ಮಲೀಕ್ ಅವರನ್ನು ವಶಕ್ಕೆ ಪಡೆಯಲಾಗಿದೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ತಪ್ಪಾದ ಮಾಹಿತಿಯನ್ನು ಹರಡಲಾಗುತ್ತಿದೆ.  ಸ್ವ ಇಚ್ಛೆಯಿಂದ ವಾಪಸ್ ತೆರಳುವುದಕ್ಕೆ ಅವರು ಮುಕ್ತರಾಗಿದ್ದಾರೆ ಎಂಬುದನ್ನೂ ತಿಳಿಸಿದ್ದೇವೆ ಎಂದು ಪೊಲೀಸರು ತಿಳಿಸಿದ್ದಾರೆ. 

ಆರ್ ಕೆ ಪುರಂ ಪ್ರದೇಶದಲ್ಲಿನ ಪಾರ್ಕ್ ನಲ್ಲಿ ಪೂರ್ವಾನುಮತಿ ಇಲ್ಲದೇ ಸಭೆ ನಡೆಸಿದ್ದರ ವಿಷಯವಾಗಿ ಮಲೀಕ್ ಅವರನ್ನು ಪೊಲೀಸರು ವಿಚಾರಣೆ ನಡೆಸಿದ್ದಾರೆ.
 
ಇದಕ್ಕೂ ಮುನ್ನ ಶುಕ್ರವಾರದಂದು ಮಲೀಕ್ ಅವರಿಗೆ ಸಿಬಿಐ ಸಮನ್ಸ್ ಜಾರಿಯಾಗಿತ್ತು. ಜಮ್ಮು-ಕಾಶ್ಮೀರದ ರಾಜ್ಯಪಾಲರಾಗಿದ್ದಾಗ ಸರ್ಕಾರಿ ನೌಕರರಿಗೆ ಸಮೂಹ ವಿಮೆ ಮಾಡಿಸುವ ವಿಷಯದಲ್ಲಿ ನಡೆದಿದೆ ಎನ್ನಲಾದ ಅಕ್ರಮಕ್ಕೆ ಸಂಬಂಧಿಸಿದಂತೆ ವಿಚಾರಣೆಗೆ ಹಾಜರಾಗಲು ಸೂಚಿಸಿ ಸಿಬಿಐ ಸಮನ್ಸ್ ಜಾರಿ ಮಾಡಿತ್ತು.

SCROLL FOR NEXT