ದೇಶ

ಪೂಂಚ್ ನಲ್ಲಿ ಭಯೋತ್ಪಾದಕ ದಾಳಿ: ವಿಚಾರಣೆಗಾಗಿ 40 ಮಂದಿ ವಶಕ್ಕೆ

Srinivas Rao BV

ಪೂಂಚ್: ಪೂಂಚ್ ನಲ್ಲಿ ನಡೆದ ಭಯೋತ್ಪಾದಕ ದಾಳಿಯಲ್ಲಿ ಶಾಮೀಲಾದವರ ಹೆಡೆಮುರಿಕಟ್ಟಲು ವಿಚಾರಣೆಗಾಗಿ ಈ ವರೆಗೂ 40 ಮಂದಿಯನ್ನು ವಶಕ್ಕೆ ಪಡೆಯಲಾಗಿದೆ. 

ಭದ್ರತಾ ಪಡೆಗಳಿಂದ ಬೃಹತ್ ಕಾರ್ಯಾಚರಣೆ ನಡೆಸಲಾಗಿದ್ದು, ಭಟ ಧುರಿಯನ್-ತೋಟ ಗಲಿ ಮತ್ತು ನೆರೆಯ ಪ್ರದೇಶಗಳಲ್ಲಿ ಕಾರ್ಡನ್ ಮತ್ತು ಸರ್ಚ್ ಕಾರ್ಯಾಚರಣೆ ಕೈಗೊಳ್ಳಲಾಗಿದೆ. ಇಡೀ ಪ್ರದೇಶವನ್ನು ಸೇನಾ ಪಡೆ ಸುತ್ತುವರೆದಿದೆ.
 
ಗುರುವಾರ ಜಮ್ಮು-ಕಾಶ್ಮೀರದಲ್ಲಿ ನಡೆದ ಭಯೋತ್ಪಾದಕ ದಾಳಿ ನಡೆದಿದ್ದು, ಸೇನಾ ವಾಹನ ಬೆಂಕಿ ಹೊತ್ತುಕೊಂಡು ಐವರು ಯೋಧರು ಸಾವನ್ನಪ್ಪಿದ್ದರು. ಮತ್ತೋರ್ವ ಯೋಧ ತೀವ್ರವಾಗಿ ಗಾಯಗೊಂಡಿದ್ದಾರೆ.

ತನಿಖೆಯ ಪ್ರಕಾರ, ಸೇನಾ ಯೋಧರನ್ನು ಹೊತ್ತೊಯ್ಯುತ್ತಿದ್ದ ಟ್ರಕ್ ಮೇಲೆ ದಾಳಿ ಮಾಡುವ ಮೊದಲು ಭಯೋತ್ಪಾದಕರು ಭಿಂಬರ್ ಗಲಿ-ಪೂಂಚ್ ರಸ್ತೆಯ ಕಲ್ವರ್ಟ್‌ನಲ್ಲಿ ಅಡಗಿಕೊಂಡಿದ್ದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಓರ್ವ ಸ್ನೈಪರ್ ಸೇನೆಯ ಟ್ರಕ್ ಅನ್ನು ಮುಂಭಾಗದಿಂದ ಗುರಿಯಾಗಿಸಿಕೊಂಡಿದ್ದಾನೆ ಎಂದು ತಿಳಿದುಬಂದಿದ್ದು, ಅವನ ಸಹವರ್ತಿಗಳು ವಾಹನದ ಮೇಲೆ ಗುಂಡಿನ ದಾಳಿ ನಡೆಸಿ, ಗ್ರೆನೇಡ್‌ಗಳನ್ನು ಎಸೆದರು, ಸೇನಾ ಪಡೆಗೆ ಪ್ರತಿ ದಾಳಿ ನಡೆಸಲು ಅವಕಾಶವಿಲ್ಲದಂತೆ ದಾಳಿ ನಡೆಸಿದ್ದಾರೆ ಎಂದು ತಿಳಿದುಬಂದಿದೆ.

SCROLL FOR NEXT