ದೇಶ

ಅಜಿತ್ ಪವಾರ್ ಬಿಜೆಪಿಯೊಂದಿಗೆ ಹೋಗುವ ಊಹಾಪೋಹಗಳ ಬಗ್ಗೆ ಶರದ್ ಪವಾರ್ ಪ್ರತಿಕ್ರಿಯೆ: ಕಠಿಣ ಸಂದೇಶ ರವಾನೆ

Srinivas Rao BV

ನವದೆಹಲಿ: ಎನ್ ಸಿಪಿಯನ್ನು ಒಡೆಯುವ ತಂತ್ರವನ್ನು ಯಾರಾದರೂ ಹೆಣೆಯುತ್ತಿದ್ದರೆ, ಅಂತಹವರ ವಿರುದ್ಧ ಕಟ್ಟುನಿಟ್ಟಾದ ಕ್ರಮ ಕೈಗೊಳ್ಳಲಾಗುವುದು ಎಂದು ಎನ್ ಸಿಪಿ ಅಧ್ಯಕ್ಷ ಶರದ್ ಪವಾರ್ ಎಚ್ಚರಿಕೆ ನೀಡಿದ್ದಾರೆ. 

ಅಜಿತ್ ಪವಾರ್ ಅವರ ಮುಂದಿನ ರಾಜಕೀಯ ನಡೆಯ ಬಗ್ಗೆ ಊಹಾಪೋಹಗಳು ಬಂದಿರುವ ಬೆನ್ನಲ್ಲೇ, ಶರದ್ ಪವಾರ್ ಈ ಹೇಳಿಕೆ ನೀಡಿರುವುದು ಮಹತ್ವ ಪಡೆದುಕೊಂಡಿದೆ. 

ಬಿಜೆಪಿಗೆ ಅಜಿತ್ ಪವಾರ್ ಹತ್ತಿರವಾಗುತ್ತಿದ್ದಾರೆ ಎಂಬ ವದಂತಿಗಳ ನಡುವೆಯೇ ಅಜಿತ್ ಪವಾರ್ ತಮಗೆ ಸಿಎಂ ಆಗುವ ಆಸೆ ಇದೆ, 2024 ರ ವಿಧಾನಸಭಾ ಚುನಾವಣೆಗೂ ಮುನ್ನ ರಾಜ್ಯದಲ್ಲಿ ಎನ್ ಸಿಪಿ ಸಿಎಂ ಹುದ್ದೆಗೆ ಪ್ರಯತ್ನಿಸಬಹುದು ಎಂಬ ಹೇಳಿಕೆ ನೀಡಿದ್ದರು. 

ಇದಕ್ಕೆ ಪ್ರತಿಕ್ರಿಯೆ ನೀಡಿರುವ ಶರದ್ ಪವಾರ್, ನಾಳೆ ಯಾರಾದರೂ ಎನ್ ಸಿಪಿಯನ್ನು ಒಡೆಯಲು ಯತ್ನಿಸಿದರೆ, ಅದು ಅವರ ಕಾರ್ಯತಂತ್ರವಾಗಿರುತ್ತದೆ. ಅದರ ಬಗ್ಗೆ ಯಾವುದೇ ನಿರ್ಧಾರ ಕೈಗೊಳ್ಳಬೇಕಿದ್ದರೂ ನಾವು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುತ್ತೇವೆ. ಅದರ ಬಗ್ಗೆ ಇಂದು ಮಾತನಾಡುವುದು ಸೂಕ್ತವಲ್ಲ ಎಂದು ಶರದ್ ಪವಾರ್ ಹೇಳಿದ್ದಾರೆ. 

ಸಾಮ್ನಾದಲ್ಲಿನ ವಾರದ ಅಂಕಣದಲ್ಲಿ, ಶಿವಸೇನೆಯ ಉದ್ಧವ್ ಠಾಕ್ರೆ ಬಣದ ನಾಯಕ ಸಂಜಯ್ ರಾವತ್, ಈ ಬೆಳವಣಿಗೆಗಳ ಬಗ್ಗೆ ಉದ್ಧವ್ ಠಾಕ್ರೆ ಜೊತೆ ಮಾತನಾಡಿರುವ ಶರದ್ ಪವಾರ್, ಯಾರೂ ಪಕ್ಷಾಂತರ ಮಾಡಲು ಬಯಸುತ್ತಿಲ್ಲ. ಅದರೆ ತಮ್ಮ ಕುಟುಂಬವನ್ನು ಟಾರ್ಗೆಟ್ ಮಾಡಲಾಗುತ್ತಿದೆ ಎಂದು ಹೇಳಿರುವುದನ್ನು ಉಲ್ಲೇಖಿಸಿದ್ದರು.

SCROLL FOR NEXT