ಜಿ ಸ್ಕ್ವೇರ್ ರಿಯಲ್ಟರ್ಸ್ 
ದೇಶ

ತಮಿಳು ನಾಡು: ರಿಯಲ್ ಎಸ್ಟೇಟ್ ಸಂಸ್ಥೆ ಜಿ ಸ್ಕ್ವೇರ್ ರಿಯಲ್ಟರ್ಸ್ ಮೇಲೆ ಐಟಿ ದಾಳಿ

ತಮಿಳು ನಾಡಿನಲ್ಲಿ ಡಿಎಂಕೆ ಕುಟುಂಬದ ಸದಸ್ಯರ ಆಸ್ತಿಗಳ ವಿವರಗಳನ್ನು ಒಳಗೊಂಡಿರುವ ಡಿಎಂಕೆ ಕಡತಗಳನ್ನು ತಮಿಳುನಾಡು ಬಿಜೆಪಿ ಅಧ್ಯಕ್ಷ ಕೆ.ಅಣ್ಣಾಮಲೈ ಅವರು  ಬಿಡುಗಡೆ ಮಾಡಿದ ಒಂದು ವಾರದ ನಂತರ ಆದಾಯ ತೆರಿಗೆ ಇಲಾಖೆ ಇಂದು ಸೋಮವಾರ ರಿಯಲ್ ಎಸ್ಟೇಟ್ ಸಂಸ್ಥೆ ಜಿ ಸ್ಕ್ವೇರ್ ರಿಯಲ್ಟರ್ಸ್ ಪ್ರೈವೇಟ್ ಲಿಮಿಟೆಡ್‌ಗೆ 

ಚೆನ್ನೈ: ತಮಿಳು ನಾಡಿನಲ್ಲಿ ಡಿಎಂಕೆ ಕುಟುಂಬದ ಸದಸ್ಯರ ಆಸ್ತಿಗಳ ವಿವರಗಳನ್ನು ಒಳಗೊಂಡಿರುವ ಡಿಎಂಕೆ ಕಡತಗಳನ್ನು ತಮಿಳುನಾಡು ಬಿಜೆಪಿ ಅಧ್ಯಕ್ಷ ಕೆ.ಅಣ್ಣಾಮಲೈ ಅವರು  ಬಿಡುಗಡೆ ಮಾಡಿದ ಒಂದು ವಾರದ ನಂತರ ಆದಾಯ ತೆರಿಗೆ ಇಲಾಖೆ ಇಂದು ಸೋಮವಾರ ರಿಯಲ್ ಎಸ್ಟೇಟ್ ಸಂಸ್ಥೆ ಜಿ ಸ್ಕ್ವೇರ್ ರಿಯಲ್ಟರ್ಸ್ ಪ್ರೈವೇಟ್ ಲಿಮಿಟೆಡ್‌ಗೆ ಸಂಬಂಧಿಸಿ ತಮಿಳು ನಾಡು ಮತ್ತು ಕರ್ನಾಟಕಗಳಲ್ಲಿ ಸುಮಾರು 50 ಸ್ಥಳಗಳಲ್ಲಿ ಶೋಧ ನಡೆಸಿತು.

ಅಣ್ಣಾಮಲೈ ಮಾಡಿದ ಆರೋಪಗಳನ್ನು ಜಿ-ಸ್ಕ್ವೇರ್ ನಿರಾಕರಿಸಿದ್ದು, ಕಂಪನಿಯು 'ಡಿಎಂಕೆಯ ಪಕ್ಷದ ಮೊದಲ ಕುಟುಂಬ'ದ ಮಾಲೀಕತ್ವ ಅಥವಾ ನಿಯಂತ್ರಣದಲ್ಲಿಲ್ಲ. ಇದಕ್ಕೆ ಸಂಬಂಧಪಟ್ಟಂತೆ ಎಲ್ಲಾ ಆರೋಪಗಳು ಸಂಪೂರ್ಣವಾಗಿ ಸುಳ್ಳು ಮತ್ತು ಆಧಾರರಹಿತವಾಗಿವೆ ಎಂದು ಹೇಳಿದ್ದು, ಇದರ ಬೆನ್ನಲ್ಲೇ ದಾಳಿ ನಡೆದಿರುವುದು ವಿಶೇಷ ಮಹತ್ವ ಪಡೆದಿದೆ. 

ಅಣ್ಣಾಮಲೈ ಅವರು ‘ಜಿ ಸ್ಕ್ವೇರ್’ ‘ಡಿಎಂಕೆಯ 1ನೇ ಕುಟುಂಬದ’ ಒಡೆತನದಲ್ಲಿದೆ ಎಂಬ ಆರೋಪಗಳನ್ನು ಮಾಡಿದ್ದರು. ಒಟ್ಟು 38,827.70 ಕೋಟಿ ಆದಾಯವನ್ನು ಹೊಂದಿದ್ದು ಇವೆಲ್ಲವೂ ಭ್ರಷ್ಟಾಚಾರದಿಂದ ಬಂದ ಹಣಗಳಾಗಿವೆ ಎಂದು ಕೂಡ ಟೀಕೆ ಮಾಡಿದ್ದರು. 

ಕಂಪನಿಯ ಆದಾಯವು 38,827.70 ಕೋಟಿ ರೂಪಾಯಿಗಳಾಗಿದ್ದು, ಕಂಪನಿಯು ಎಲ್ಲಾ ಜಮೀನುಗಳನ್ನು ಖರೀದಿಸಿ ಅವುಗಳನ್ನು ಉಳಿಸಿಕೊಂಡಿದೆ ಎಂಬ ತಪ್ಪು ಲೆಕ್ಕಾಚಾರ ನೀಡುತ್ತಿದೆ. ಆನ್‌ಲೈನ್‌ನಲ್ಲಿ ಸುಲಭವಾಗಿ ಲಭ್ಯವಿರುವ ಎನ್‌ಕಂಬರೆನ್ಸ್ ಪ್ರಮಾಣಪತ್ರಗಳ ಮೂಲ ಸಂಶೋಧನೆ ಮತ್ತು ಪರಿಶೀಲನೆ ಮಾಡಿದಾಗ ಕಂಪನಿಯು ವಿವಿಧ ಹಂತಗಳಲ್ಲಿ ಯೋಜನೆಗಳನ್ನು ಅಭಿವೃದ್ಧಿಪಡಿಸಿದೆ ಎಂದು ತೋರಿಸುತ್ತದೆ. ಇಷ್ಟು ವರ್ಷಗಳಲ್ಲಿ ಸುಮಾರು 6,000 ಗ್ರಾಹಕರಿಗೆ ಪ್ಲಾಟ್‌ಗಳನ್ನು ಮಾರಾಟ ಮಾಡಿದೆ ಎಂದು ಅಣ್ಣಾಮಲೈ ಅವರ ಆರೋಪಗಳಿಗೆ ಪ್ರತಿಕ್ರಿಯೆಯಾಗಿ ಜಿ-ಸ್ಕ್ವೇರ್ ಹೇಳಿಕೆ ತಿಳಿಸಿದೆ.

ಜಿ ಸ್ಕ್ವೇರ್, ವಿಶೇಷವಾಗಿ ಕೊಯಮತ್ತೂರಿನ ಮೂರು ಯೋಜನೆಗಳು, ಚೆಂಗಲ್ಪಟ್ಟು ಜಿಲ್ಲೆಯ ಎಗತ್ತೂರ್ ಮತ್ತು ಚೆನ್ನೈನ ನೀಲಂಕಾರೈನಲ್ಲಿ ಕಾರ್ಯಗತಗೊಳಿಸಿದ ಯೋಜನೆಗಳಿಗೆ ಭಾರೀ ವೇಗದಲ್ಲಿ ಅನುಮೋದನೆ ನೀಡುತ್ತಿದ್ದಾರೆ ಎಂದು ಅಣ್ಣಾಮಲೈ ಆರೋಪಿಸಿದ್ದರು. ಇದನ್ನು ತಮಿಳುನಾಡು ವಸತಿ ಮತ್ತು ನಗರಾಭಿವೃದ್ಧಿ ಸಚಿವ ಎಸ್ ಮುತ್ತುಸಾಮಿ ಅಲ್ಲಗಳೆದಿದ್ದಾರೆ.

ಜಿ ಸ್ಕ್ವೇರ್ ರಿಯಲ್ಟರ್ಸ್, ಖಾಸಗಿ ಕಂಪನಿಯಾಗಿದ್ದು ಅಕ್ಟೋಬರ್ 12, 2012 ರಂದು ಸಂಘಟಿತವಾಗಿದೆ. ಇದನ್ನು ಸರ್ಕಾರೇತರ ಕಂಪನಿ ಎಂದು ವರ್ಗೀಕರಿಸಲಾಗಿದೆ. ರಿಜಿಸ್ಟ್ರಾರ್ ಆಫ್ ಕಂಪನಿ ಚೆನ್ನೈನಲ್ಲಿ ನೋಂದಾಯಿಸಲಾಗಿದೆ. ಈ ಹಿಂದೆ 2019 ರಲ್ಲಿ ಆದಾಯ ತೆರಿಗೆ ಇಲಾಖೆಯು ಕಂಪನಿಯ ಮೇಲೆ ದಾಳಿ ನಡೆಸಿತ್ತು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಜಮ್ಮುವಿನಲ್ಲಿ ಭೀಕರ ಮಳೆಯಿಂದ ಭಾರೀ ಅನಾಹುತ ಸೃಷ್ಟಿ: ವೈಷ್ಣೋದೇವಿ ಮಾರ್ಗದಲ್ಲಿ ಭೂಕುಸಿತ, ಕನಿಷ್ಠ 30 ಮಂದಿ ಸಾವು

ದೇಶಾದ್ಯಂತ ಗಣೇಶ ಚತುರ್ಥಿ ಸಂಭ್ರಮ: ದೇವಾಲಯಗಳಲ್ಲಿ ವಿಶೇಷ ಪೂಜೆ, ರಾಷ್ಟ್ರಪತಿ, ಪ್ರಧಾನಿ, ಮುಖ್ಯಮಂತ್ರಿಗಳಿಂದ ಶುಭಾಶಯ

ಬೂಕರ್ ಪ್ರಶಸ್ತಿ ಮಹತ್ವ ತಿಳಿದಿದ್ದರೆ ನನ್ನನ್ನು ಟೀಕಿಸುತ್ತಿರಲಿಲ್ಲ, ಸಾಹಿತ್ಯ ಸಮ್ಮೇಳನದ ವಿಡಿಯೋ ತಿರುಚಲಾಗಿದೆ: ಬಾನು ಮುಷ್ತಾಕ್

ಡಿಕೆಶಿ RSS ಗೀತೆ ಹೇಳಿದ್ದೂ ರಾಹುಲ್‌ ಗಾಂಧಿಗೆ ತಲುಪಲಿ: ಶಾಕ್ ಕೊಟ್ಟ ಸತೀಶ್‌ ಜಾರಕಿಹೊಳಿ ಹೇಳಿಕೆ

ಧರ್ಮಸ್ಥಳ ಕೇಸ್: ತನಿಖೆ ಶೀಘ್ರಗತಿ ಪೂರ್ಣಗೊಳಿಸಲು SIT ಪ್ರಯತ್ನ; ಗೃಹ ಸಚಿವ ಡಾ.ಜಿ.ಪರಮೇಶ್ವರ್

SCROLL FOR NEXT