ದೇಶ

ಮಾದಕವಸ್ತುಗಳನ್ನು ಸಾಗಿಸುತ್ತಿದ್ದ ಪಾಕಿಸ್ತಾನದ ಡ್ರೋನ್ ಹೊಡೆದುರುಳಿಸಿದ ಬಿಎಸ್‌ಎಫ್

Ramyashree GN

ಅಮೃತಸರ: ಗುರುವಾರ ಬೆಳಗ್ಗೆ ಇಲ್ಲಿನ ಭಾರತ-ಪಾಕಿಸ್ತಾನ ಗಡಿಯಲ್ಲಿ ಹೆರಾಯಿನ್ ಮತ್ತು ಅಫೀಮು ಸಾಗಿಸುತ್ತಿದ್ದ ಪಾಕಿಸ್ತಾನದ ಡ್ರೋನ್ ಅನ್ನು ಗಡಿ ಭದ್ರತಾ ಪಡೆ (ಬಿಎಸ್‌ಎಫ್) ಹೊಡೆದುರುಳಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಅಧಿಕೃತ ಹೇಳಿಕೆಯ ಪ್ರಕಾರ, ಇಲ್ಲಿನ ಧನೋ ಕಲನ್ ಗ್ರಾಮದ ಬಳಿ ಡ್ರೋನ್ ಭಾರತದ ಭೂಪ್ರದೇಶಕ್ಕೆ ಪ್ರವೇಶಿಸುತ್ತಿರುವುದನ್ನು ಗಮನಿಸಿದ ಬಿಎಸ್‌ಎಫ್ ಸಿಬ್ಬಂದಿ ಗುಂಡಿನ ದಾಳಿ ನಡೆಸಿದ್ದಾರೆ.

ಆ ಪ್ರದೇಶದಲ್ಲಿ ನಡೆಸಿದ ಶೋಧ ಕಾರ್ಯಾಚರಣೆಯ ಸಮಯದಲ್ಲಿ, ಸಿಬ್ಬಂದಿ ಡಿಜೆಐ ಮ್ಯಾಟ್ರಿಸ್ 300 ಆರ್‌ಟಿಕೆ ಮಾದರಿಯ ಭಾಗಶಃ ಹಾನಿಗೊಳಗಾದ ಕಪ್ಪು ಡ್ರೋನ್ ಅನ್ನು ವಶಪಡಿಸಿಕೊಂಡಿದ್ದಾರೆ ಎಂದಿದೆ.

ಡ್ರೋನ್‌ಗೆ ಕಬ್ಬಿಣದ ರಿಂಗ್, ಹೆರಾಯಿನ್ ಮತ್ತು ಅಫೀಮಿನ ಎರಡು ಸಣ್ಣ ಪ್ಯಾಕೆಟ್‌ಗಳನ್ನು ಒಳಗೊಂಡಿರುವ ಪ್ಯಾಕೇಜ್ ಅನ್ನು ಜೋಡಿಸಲಾಗಿತ್ತು. ಒಟ್ಟು ಎರಡು ಕೆಜಿ ಹೆರಾಯಿನ್ ಮತ್ತು 170 ಗ್ರಾಂ ಅಫೀಮು ವಶಪಡಿಸಿಕೊಳ್ಳಲಾಗಿದೆ ಎಂದು ಹೇಳಿಕೆಯಲ್ಲಿ ಸೇರಿಸಲಾಗಿದೆ.

SCROLL FOR NEXT