ಭಾರತೀಯರ ರವಾನೆ 
ದೇಶ

ಆಪರೇಷನ್ ಕಾವೇರಿ: ಸಂಘರ್ಷ ಪೀಡಿತ ಸುಡಾನ್ ನಿಂದ ಬೆಂಗಳೂರಿಗೆ ಮತ್ತೆ 229 ಭಾರತೀಯರ ರವಾನೆ

ಹಿಂಸಾಚಾರ ಪೀಡಿತ ಸುಡಾನ್‌ನಲ್ಲಿ ಸಿಲುಕಿರುವ ಭಾರತೀಯರನ್ನು ಸ್ಥಳಾಂತರಿಸುವ  ತನ್ನ ಕಾರ್ಯಾಚರಣೆಯಡಿಯಲ್ಲಿ ಭಾರತವು ಭಾನುವಾರ ಮತ್ತೆ 229 ಜನರ ಮತ್ತೊಂದು ಬ್ಯಾಚ್ ಅನ್ನು ದೆಹಲಿಗೆ ಕರೆತಂದಿದೆ.

ನವದೆಹಲಿ: ಹಿಂಸಾಚಾರ ಪೀಡಿತ ಸುಡಾನ್‌ನಲ್ಲಿ ಸಿಲುಕಿರುವ ಭಾರತೀಯರನ್ನು ಸ್ಥಳಾಂತರಿಸುವ  ತನ್ನ ಕಾರ್ಯಾಚರಣೆಯಡಿಯಲ್ಲಿ ಭಾರತವು ಭಾನುವಾರ ಮತ್ತೆ 229 ಜನರ ಮತ್ತೊಂದು ಬ್ಯಾಚ್ ಅನ್ನು ಬೆಂಗಳೂರಿಗೆ ಕರೆತಂದಿದೆ.

365 ಜನರು ಆಫ್ರಿಕನ್ ದೇಶ ಸುಡಾನ್ ನಿಂದ ದೆಹಲಿಗೆ ಮರಳಿದ ಒಂದು ದಿನದ ನಂತರ, ಮತ್ತೊಂದು ಬ್ಯಾಚ್ ನಲ್ಲಿ ಇಂದು 229 ಭಾರತೀಯರನ್ನು ಸುರಕ್ಷಿತವಾಗಿ ಭಾರತಕ್ಕೆ ರವಾನೆ ಮಾಡಲಾಗಿದೆ.

ಈ ಬಗ್ಗೆ ಟ್ವೀಟ್ ಮೂಲಕ ಮಾಹಿತಿ ನೀಡಿರುವ ವಿದೇಶಾಂಗ ವ್ಯವಹಾರಗಳ ಸಚಿವ ಎಸ್ ಜೈಶಂಕರ್, #OperationKaveri ಮತ್ತೊಂದು ವಿಮಾನವು 229 ಪ್ರಯಾಣಿಕರನ್ನು ಬೆಂಗಳೂರಿಗೆ ಕರೆತರುತ್ತದೆ ಎಂದು ಟ್ವೀಟ್ ಮಾಡಿದ್ದಾರೆ.

ಆಪರೇಷನ್ ಕಾವೇರಿ ಹೆಸರಿನ ಸ್ಥಳಾಂತರಿಸುವ ಕಾರ್ಯಾಚರಣೆಯ ಅಡಿಯಲ್ಲಿ, ಶುಕ್ರವಾರ ಎರಡು ಬ್ಯಾಚ್‌ಗಳಲ್ಲಿ 754 ಜನರು ಭಾರತಕ್ಕೆ ಆಗಮಿಸಿದ್ದಾರೆ.

ಅಧಿಕೃತ ಅಂಕಿಅಂಶಗಳ ಪ್ರಕಾರ, ಸುಡಾನ್‌ನಿಂದ ಮನೆಗೆ ಮರಳಿದ ಒಟ್ಟು ಭಾರತೀಯರ ಸಂಖ್ಯೆ ಈಗ 1,954 ಆಗಿದೆ. ಸೌದಿ ಅರೇಬಿಯಾದ ಜೆಡ್ಡಾ ನಗರದಿಂದ ಭಾರತೀಯರನ್ನು ಮರಳಿ ಕರೆತರಲಾಯಿತು, ಅಲ್ಲಿ ಭಾರತವು ಸ್ಥಳಾಂತರಿಸುವವರಿಗೆ ಶಿಬಿರವನ್ನು ಸ್ಥಾಪಿಸಿದೆ.
 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಅಮೆರಿಕದ ಸುಂಕ: ಜವಳಿ ವಲಯದ ಒತ್ತಡ ಕಡಿಮೆ ಮಾಡಲು 40 ಪ್ರಮುಖ ಆಮದು ದೇಶ ಗುರುತು

ಭೀಕರ ಮಳೆಗೆ ಜಮ್ಮು-ಕಾಶ್ಮೀರ ತತ್ತರ: ಸಾವಿನ ಸಂಖ್ಯೆ 41ಕ್ಕೆ ಏರಿಕೆ; ಕೇಂದ್ರದಿಂದ ನೆರವಿನ ಭರವಸೆ; ಮುಂದುವರೆದ ರಕ್ಷಣಾ ಕಾರ್ಯಾಚರಣೆ

ಭಾರತದ ಮೇಲೆ ಅಮೆರಿಕಾ ಸುಂಕಾಸ್ತ್ರ: ದೇಶ ರಕ್ಷಿಸುವಲ್ಲಿ ಪ್ರಧಾನಿ ಮೋದಿ ವಿಫಲ; AICC ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ವಾಗ್ದಾಳಿ

ಜಮ್ಮು-ಕಾಶ್ಮೀರದ ಬಂಡಿಪೋರಾದಲ್ಲಿ ಗುಂಡಿನ ಚಕಮಕಿ: ಇಬ್ಬರು ಉಗ್ರರ ಹತ್ಯೆ

RSS Song Controversy: ಡಿಕೆಶಿ ಆರ್‌ಎಸ್‌ಎಸ್‌ ಗೀತೆ ಹಾಡಿದ್ದು ತಪ್ಪು, ಕ್ಷಮೆ ಕೇಳಿದ್ದರಿಂದ ಎಲ್ಲವೂ ಮುಗಿದಿದೆ; ಮಲ್ಲಿಕಾರ್ಜುನ ಖರ್ಗೆ

SCROLL FOR NEXT