ದೇಶ

ಮೈಸೂರಿಗೆ ಪ್ರಧಾನಿ ಮೋದಿ: ಪ್ರಮುಖ ಸ್ಥಳಗಳಲ್ಲಿ ರಸ್ತೆ ನಿರ್ಬಂಧ, ಸಂಚಾರ ತಿರುವುಗಳಿಂದ ಪ್ರವಾಸಿಗರಿಗೆ ಕಿರಿಕಿರಿ!

Srinivas Rao BV

ಮೈಸೂರು: ಪ್ರಧಾನಿ ನರೇಂದ್ರ ಮೋದಿ ಚುನಾವಣಾ ಪ್ರಚಾರದ ಹಿನ್ನೆಲೆಯಲ್ಲಿ ಮೈಸೂರಿಗೆ ಆಗಮಿಸಿದ್ದು, ವಾರಾಂತ್ಯವಾಗಿರುವ ಹಿನ್ನೆಲೆಯಲ್ಲಿ ಐತಿಹಾಸಿಕ, ಸಾಂಸ್ಕೃತಿಕ ನಗರಕ್ಕೆ ಭೇಟಿ ನೀಡುವ ಪ್ರವಾಸಿಗರಿಗೆ ನಗರದಾದ್ಯಂತ ರಸ್ತೆ ನಿರ್ಬಂಧ, ಸಂಚಾರ ತಿರುವುಗಳು ಎದುರಾಗಿದೆ. 

ಮೈಸೂರಿನಲ್ಲಿ ಪ್ರಧಾನಿ ಮೋದಿ 5 ಕಿ.ಮೀ ರ್ಯಾಲಿಯಲ್ಲಿ ಭಾಗಿಯಾಗಲಿದ್ದು, ಮೈಸೂರು ಅರಮನೆ, ಮೃಗಾಲಯ ಸೇರಿದಂತೆ ವಿವಿಧ ಪ್ರವಾಸಿ ತಾಣಗಳನ್ನು ಸಂಪರ್ಕಿಸುವ ನಗರದ ಹೃದಯಭಾಗ, ಅವರ ರೋಡ್ ಶೋ ಪ್ರವಾಸಿಗರಿಗೆ ಹೆಚ್ಚಿನ ಅನಾನುಕೂಲತೆಯನ್ನು ಉಂಟುಮಾಡಿದೆ.

ಒಂದು ಕಡೆ ಮೈಸೂರು-ನಂಜನಗೂಡು ರಸ್ತೆಯ ಸಂಚಾರವನ್ನು ಬೇರೆ ರಸ್ತೆಗೆ ಬದಲಾವಣೆ ಮಾಡಲಾಗಿತ್ತು. ಕೇರಳ, ಗುಂಡ್ಲುಪೇಟೆ ಮತ್ತು ಊಟಿಯಿಂದ ಬರುವ ಬಹುತೇಕ ವಾಹನಗಳು ಮೈಸೂರು ತಲುಪಲು ಮತ್ತು ಮೈಸೂರು ಅರಮನೆಯನ್ನು ವೀಕ್ಷಿಸಲು ಬೇರೆ ಮಾರ್ಗದಲ್ಲಿ ಹೋಗಬೇಕಾಯಿತು. ರೋಡ್ ಶೋಗೆ ಬರುವವರ ವಾಹನಗಳ ನಿಲುಗಡೆಗೆ ಹೆಚ್ಚಿನ ಪಾರ್ಕಿಂಗ್ ಸ್ಥಳಗಳನ್ನು ಗುರುತಿಸಿದ್ದರಿಂದ ಭಾನುವಾರ ಟ್ರಾಫಿಕ್ ಜಾಮ್ ಉಂಟಾಗಿತ್ತು. 

ಟ್ರಾಫಿಕ್ ವ್ಯತ್ಯಯ ಮತ್ತು ರಸ್ತೆ ತಡೆಗಳಿಂದ ಅನಾನುಕೂಲತೆ ಎದುರಿಸಿದ ಅನೇಕ ಪ್ರವಾಸಿಗರು ಕೊಡಗು ಮತ್ತು ಮಂಡ್ಯ ಜಿಲ್ಲೆಗಳ ಕಡೆಗೆ ತೆರಳಿದರು, ಕೊನೆಯ ಕ್ಷಣದಲ್ಲಿ ತಮ್ಮ ಯೋಜನೆಯನ್ನು ಬದಲಾಯಿಸುವಂತಾಯಿತು. 

SCROLL FOR NEXT