ದೇಶ

ಮಹಾರಾಷ್ಟ್ರದಲ್ಲಿ ಪ್ರಸ್ತಾವಿತ ಸಂಸ್ಕರಣಾಗಾರದ ವಿರುದ್ಧ ಪ್ರತಿಭಟನೆ ನಡೆಸುತ್ತಿರುವವರಿಂದ ಶರದ್ ಪವಾರ್ ಭೇಟಿ

Srinivas Rao BV

ಮುಂಬೈ: ಮಹಾರಾಷ್ಟ್ರದಲ್ಲಿ ಪ್ರಸ್ತಾವಿತ ತೈಲ ಸಂಸ್ಕರಣಾಗಾರದ ವಿರುದ್ಧ ರತ್ನಗಿರಿ ಜಿಲ್ಲೆಯಲ್ಲಿ ಪ್ರತಿಭಟನೆ ತೀವ್ರಗೊಂಡಿದೆ.

ಸಂಸ್ಕರಾಗಾರ ನಿರ್ಮಿಸಿರುವುದಕ್ಕೆ ಆಯ್ಕೆ ಮಾಡಲಾಗಿರುವ ಪ್ರದೇಶ ಸರಿ ಇಲ್ಲ ಎಂದು ಆರೋಪಿಸಿ ಪ್ರತಿಭಟನೆ ಭುಗಿಲೆದ್ದಿದ್ದು, ಕೈಗಾರಿಕಾ ಸಚಿವರು ಈ ಸ್ಥಳವನ್ನು ಆಯ್ಕೆ ಮಾಡಿದ್ದು ಈ ಹಿಂದಿನ ಸಿಎಂ ಉದ್ಧವ್ ಠಾಕ್ರೆ ಎಂದು ಹೇಳಿದ್ದಾರೆ.
 
ಆದರೆ ಪ್ರತಿಪಕ್ಷಗಳು ಮಣ್ಣು ಸಮೀಕ್ಷೆ ಕಾರ್ಯವನ್ನು ನಿಲ್ಲಿಸಬೇಕು ಮತ್ತು ಆಂದೋಲನದಿಂದ ಉಂಟಾಗುವ ಪರಿಸ್ಥಿತಿಯನ್ನು ನಿಭಾಯಿಸುವಲ್ಲಿ ಸಂವೇದನಾಶೀಲವಾಗಿರಬೇಕು ಎಂದು ಸರ್ಕಾರವನ್ನು ಒತ್ತಾಯಿಸಿವೆ. ಯೋಜನೆಯನ್ನು ವಿರೋಧಿಸುತ್ತಿರುವ ಪ್ರತಿಭಟನಾ ನಿರತರು ಇಂದು ಎನ್ ಸಿಪಿ ನಾಯಕ ಶರದ್ ಪವಾರ್ ಅವರನ್ನು ಭೇಟಿ ಮಾಡಿದ್ದಾರೆ.

ಬಾರ್ಸು ಮತ್ತು ಸುತ್ತಮುತ್ತಲಿನ ನಿವಾಸಿಗಳ ಒಂದು ವಿಭಾಗ ಪ್ರಸ್ತಾವಿತ ಸಂಸ್ಕರಣಾಗಾರದ ಬೃಹತ್ ಯೋಜನೆಯು ಕರಾವಳಿ ಕೊಂಕಣ ಪ್ರದೇಶದ ದುರ್ಬಲವಾದ ಜೈವಿಕ ವೈವಿಧ್ಯತೆಯ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತದೆ ಮತ್ತು ಅವರ ಜೀವನೋಪಾಯಕ್ಕೂ ಹೊಡೆತ ನೀಡುತ್ತದೆ ಎಂಬ ಕಾರಣದಿಂದ ಯೋಜನೆಯನ್ನು ವಿರೋಧಿಸುತ್ತಿದೆ ಸತ್ಯಜಿತ್ ಚವಾಣ್ ನೇತೃತ್ವದ ನಿಯೋಗವು ಇಲ್ಲಿನ ವೈಬಿ ಚವಾಣ್ ಸೆಂಟರ್‌ನಲ್ಲಿ ಶರದ್ ಪವಾರ್ ಅವರನ್ನು ಭೇಟಿ ಮಾಡಿದೆ ಎಂದು ಪವಾರ್ ಟ್ವೀಟ್ ಮಾಡಿದ್ದಾರೆ. ಸಭೆಯಲ್ಲಿ ಎನ್‌ಸಿಪಿ ನಾಯಕ ಮತ್ತು ಮಾಜಿ ರಾಜ್ಯ ಸಚಿವ ಜಿತೇಂದ್ರ ಅವ್ಹಾದ್ ಕೂಡ ಉಪಸ್ಥಿತರಿದ್ದರು.

SCROLL FOR NEXT