ದೇಶ

ಪತ್ರಕರ್ತರೊಂದಿಗೆ, ಸಾಮಾಜಿಕ ಅಭಿಪ್ರಾಯಗಳೊಂದಿಗೆ ವ್ಯವಹರಿಸಲು ಅಧಿಕಾರಿಗಳಿಗೆ NHAI ಮಾರ್ಗಸೂಚಿ ಬಿಡುಗಡೆ

Srinivas Rao BV

ನವದೆಹಲಿ: ಮಾಧ್ಯಮಗಳು, ಅದರ ಪ್ರತಿನಿಧಿಗಳೊಂದಿಗೆ ವ್ಯವಹರಿಸುವುದಕ್ಕೆ ಎನ್ ಹೆಚ್ಎಐ  ತನ್ನ ಅಧಿಕಾರಿಗಳಿಗೆ ಕೆಲವು ಸೂಚನೆ, ಸಲಹಾ ಪಟ್ಟಿಗಳನ್ನು ಬಿಡುಗಡೆ ಮಾಡಿದೆ.

ಗೌಪ್ಯ ಅಥವಾ ಅನಧಿಕೃತ ಮಾಹಿತಿಗಳನ್ನು ಪತ್ರಕರ್ತರೊಂದಿಗೆ ಹಂಚಿಕೊಳ್ಳಬೇಡಿ. ನಿರ್ದಿಷ್ಟ ಲಿಂಗ ಅಥವಾ ಸಮುದಾಯ ಪರ-ವಿರುದ್ಧ ಹೇಳಿಕೆಗಳನ್ನು ನೀಡಬೇಡಿ, ಸಂಬಂಧಪಟ್ಟ ಯಾವುದೇ ವರದಿಗಳನ್ನು ಅಧಿಕಾರಿಗಳ ಹೇಳಿಕೆ ಇಲ್ಲದೆ ಪ್ರಕಟಿಸದಂತೆ ಪತ್ರಕರ್ತರಲ್ಲಿ ಕೇಳಿ" ಎಂಬುದು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ನೀಡಿರುವ ಸಲಹೆಗಳ ಪೈಕಿ ಪ್ರಮುಖವಾಗಿರುವುದಾಗಿದೆ.

'ಮಾಲೀಕತ್ವ ಮತ್ತು ಗೌಪ್ಯ ಮಾಹಿತಿಯನ್ನು ರಕ್ಷಿಸಲು' ಮತ್ತು ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ಪೋಸ್ಟ್ ಮಾಡುವಾಗ ಜಾಗರೂಕರಾಗಿರಿ ಎಂದು ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. 

ಅನಧಿಕೃತವಾಗಿಯೂ ಯಾವುದೇ ಮಾಹಿತಿಯನ್ನು ಪತ್ರಕರ್ತರೊಂದಿಗೆ ಹಂಚಿಕೊಳ್ಳಬೇಡಿ, ನೀವು ಹೇಳಿದ್ದೆಲ್ಲವೂ ಪತ್ರಕರ್ತರಿಗೆ ದಾಖಲೆಯಾಗಲಿದೆ. ನಿಮ್ಮ ಬಳಿ ಸರಿಯಾದ ಮಾಹಿತಿ ಇಲ್ಲದೇ ಇದ್ದಲ್ಲಿ ಮಾಹಿತಿ ಪಡೆದು ಹೇಳುವುದಾಗಿ ತಿಳಿಸಿ ಅಥವಾ ಸರಿಯಾದ ಮಾಹಿತಿ ನೀಡಬಲ್ಲ ವ್ಯಕ್ತಿಯ ಬಳಿ ಅವರನ್ನು ಕಳಿಸಿ, ಯಾವುದೇ ಪತ್ರಕರ್ತರಿಗೆ ಅನವಶ್ಯಕ ಸಹಾಯ, ಉಡುಗೊರೆ ನೀಡುವುದು, ಪರಿಹಾರ ನೀಡುವುದನ್ನು ಮಾಡಬೇಡಿ ಎಂದು ಎನ್ ಹೆಚ್ಎಐ ನ ಸಾರ್ವಜನಿಕ ಸಂಪರ್ಕ ಕೈಪಿಡಿ ತಿಳಿಸಿದೆ. 

ಎಲ್ಲಾ ಪತ್ರಕರ್ತರು "ಯೋಜನೆ/ವಿಷಯದ ಬಗ್ಗೆ ಆಳವಾದ ತಿಳುವಳಿಕೆಯನ್ನು ಹೊಂದಿಲ್ಲದಿರಬಹುದು ಮತ್ತು ಆದ್ದರಿಂದ ಅವರ ಪ್ರಶ್ನೆಗಳಿಗೆ ಉತ್ತರಿಸುವ ಮೊದಲು ಹಿನ್ನೆಲೆಯನ್ನು ವಿವರಿಸಿ" ಎಂದು ಮಾರ್ಗಸೂಚಿಗಳಲ್ಲಿ ತಿಳಿಸಲಾಗಿದೆ. ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡುವಾಗಲೂ ಎಚ್ಚರದಿಂದ ಇರಿ ಎಂದು ಅಧಿಕಾರಿಗಳಿಗೆ ಮಾರ್ಗಸೂಚಗಳ ಮೂಲಕ ತಿಳಿಸಲಾಗಿದೆ. 

SCROLL FOR NEXT