ದೇಶ

ಸಂಸತ್ ಸದಸ್ಯತ್ವ ಮರುಸ್ಥಾಪನೆಗೆ ವಿಳಂಬ: ಕೇಂದ್ರ ಸರ್ಕಾರಕ್ಕೆ ರಾಹುಲ್‌ ಗಾಂಧಿ ಕಂಡರೆ ಭಯ: ಸಂಜಯ್ ರಾವುತ್

Ramyashree GN

ಮುಂಬೈ: ಕೇಂದ್ರ ಸರ್ಕಾರವು ರಾಹುಲ್ ಗಾಂಧಿಗೆ ಹೆದರುತ್ತಿದೆ ಎಂದು ಶಿವಸೇನಾ (ಯುಬಿಟಿ) ನಾಯಕ ಸಂಜಯ್ ರಾವುತ್ ಭಾನುವಾರ ಪ್ರತಿಪಾದಿಸಿದ್ದಾರೆ ಮತ್ತು 2019ರ ಮಾನನಷ್ಟ ಮೊಕದ್ದಮೆಯಲ್ಲಿ ಕಾಂಗ್ರೆಸ್ ನಾಯಕನಿಗೆ ನೀಡಲಾಗಿದ್ದ ಶಿಕ್ಷೆಗೆ ಸುಪ್ರೀಂ ಕೋರ್ಟ್ ತಡೆ ನೀಡಿದ್ದರೂ ಅವರ ಸಂಸತ್ ಸದಸ್ಯತ್ವವನ್ನು ಮರುಸ್ಥಾಪಿಸಿಲ್ಲ ಏಕೆ ಎಂದು ಪ್ರಶ್ನಿಸಿದ್ದಾರೆ.

'ಮೋದಿ ಉಪನಾಮ' ಟೀಕೆಗೆ ಸಂಬಂಧಿಸಿದ ಮಾನನಷ್ಟ ಪ್ರಕರಣದಲ್ಲಿ ರಾಹುಲ್ ಗಾಂಧಿಗೆ ನೀಡಲಾಗಿದ್ದ ಶಿಕ್ಷೆಗೆ ಆಗಸ್ಟ್ 4 ರಂದು ಸುಪ್ರೀಂ ಕೋರ್ಟ್ ತಡೆ ನೀಡಿತ್ತು. ಕೇರಳದ ವಯನಾಡ್‌ನಿಂದ ಲೋಕಸಭೆಯ ಸಂಸದರಾಗಿ ಅವರ ಸದಸ್ಯತ್ವವನ್ನು ಮರುಸ್ಥಾಪಿಸಲು ದಾರಿ ಮಾಡಿಕೊಟ್ಟಿತು.

'ರಾಹುಲ್ ಗಾಂಧಿಯನ್ನು ಸಂಸದ ಸ್ಥಾನದಿಂದ ಅನರ್ಹಗೊಳಿಸಿದ ವೇಗ, ಅವರಿಗೆ ವಿಧಿಸಿದ್ದ ಶಿಕ್ಷೆಗೆ ಸುಪ್ರೀಂ ಕೋರ್ಟ್ ತಡೆ ನೀಡಿದ ನಂತರ ಕಾಣುತ್ತಿಲ್ಲ. ಮೂರು ದಿನಗಳು ಕಳೆದರೂ ಲೋಕಸಭೆ ಸ್ಪೀಕರ್ ಅವರ ಲೋಕಸಭಾ ಸದಸ್ಯತ್ವವನ್ನು ಇನ್ನೂ ಮರುಸ್ಥಾಪಿಸಿಲ್ಲ' ಎಂದು ರಾವುತ್ ಸುದ್ದಿಗಾರರಿಗೆ ತಿಳಿಸಿದರು.

'ಕೇಂದ್ರ ಸರ್ಕಾರವು ರಾಹುಲ್ ಗಾಂಧಿಯ ಬಗ್ಗೆ ಹೆದರುತ್ತಿದೆ. ಇದರಿಂದಾಗಿ ಅವರನ್ನು ಸಂಸದ ಸ್ಥಾನವನ್ನು ಇನ್ನೂ ಮರುಸ್ಥಾಪಿಲಿಲ್ಲ' ಎಂದು ಹೇಳಿದ್ದಾರೆ.

ಲೋಕಸಭಾ ಸದಸ್ಯತ್ವವನ್ನು ಮರುಸ್ಥಾಪಿಸುವಲ್ಲಿ ವಿಳಂಬ ಮತ್ತು ಸುಪ್ರೀಂ ಕೋರ್ಟ್ ಆದೇಶವನ್ನು ಅಧ್ಯಯನ ಮಾಡಬೇಕಾಗಿದೆ ಎಂಬ ಸ್ಪೀಕರ್ ಹೇಳಿಕೆಯನ್ನು ಖಂಡಿಸಿದ ರಾವುತ್, 'ನಾವು (ವಿರೋಧ ಪಕ್ಷಗಳ ಒಕ್ಕೂಟ) INDIA ಪಕ್ಷಗಳು ನಮ್ಮ ಕಾರ್ಯತಂತ್ರದ ಕುರಿತು ಚರ್ಚಿಸಲು ನಾಳೆ ಸಭೆ ನಡೆಸುತ್ತಿದ್ದೇವೆ' ಎಂದರು.

ಗುಜರಾತ್‌ನ ಸೂರತ್‌ನ ಮೆಟ್ರೋಪಾಲಿಟನ್ ನ್ಯಾಯಾಲಯವು ಮಾನನಷ್ಟ ಪ್ರಕರಣದಲ್ಲಿ ಎರಡು ವರ್ಷಗಳ ಜೈಲು ಶಿಕ್ಷೆಯನ್ನು ವಿಧಿಸಿದ ಒಂದು ದಿನದ ನಂತರ ಮಾರ್ಚ್ 24 ರಂದು ರಾಹುಲ್ ಗಾಂಧಿ ಅವರನ್ನು ಲೋಕಸಭೆಯ ಸದಸ್ಯ ಸ್ಥಾನದಿಂದ ಅನರ್ಹಗೊಳಿಸಲಾಯಿತು. 

ತಮ್ಮ ವಿರುದ್ಧದ ಶಿಕ್ಷೆಗೆ ತಡೆ ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಗುಜರಾತ್ ಹೈಕೋರ್ಟ್ ಜುಲೈ 7 ರಂದು ವಜಾಗೊಳಿಸಿತು. ನಂತರ ರಾಹುಲ್ ಗಾಂಧಿ ಜುಲೈ 15 ರಂದು ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದರು.

SCROLL FOR NEXT