ದೇಶ

ನುಹ್ ನಲ್ಲಿ ಬುಲ್ಡೋಜರ್ ಗಳಿಗೆ ಬ್ರೇಕ್ ಹಾಕಿದ ಹೈಕೋರ್ಟ್ ಆದೇಶ

Srinivas Rao BV

ನುಹ್: ಹರ್ಯಾಣದಲ್ಲಿ ಗಲಭೆಗಳನ್ನು ನಿಯಂತ್ರಿಸಲು ಬುಲ್ಡೋಜರ್ ಗಳ ಮೂಲಕ ಅಕ್ರಮ ಕಟ್ಟಡಗಳ ತೆರವು ಕಾರ್ಯಾಚರಣೆಗೆ ಪಂಜಾಬ್-ಹರ್ಯಾಣ ಹೈಕೋರ್ಟ್ ತಡೆ ನೀಡಿದೆ. 

ಹರ್ಯಾಣದ ನುಹ್ ನಲ್ಲಿ ಕೋಮು ಗಲಭೆಗಳ ಹಿನ್ನೆಲೆಯಲ್ಲಿ ಅಕ್ರಮ ಕಟ್ಟಡಗಳ ಮೇಲೆ ತೆರವು ಕಾರ್ಯಾಚರಣೆಯನ್ನು ಕೈಗೊಳ್ಳಲಾಗಿತ್ತು. ಇದರ ಭಾಗವಾಗಿ ಗಲಭೆ ವೇಳೆ ಕಲ್ಲು ತೂರಾಟ ಮಾಡಲು ಬಳಕೆ ಮಾಡಿಕೊಳ್ಳಲಾಗಿದ್ದ ಹೊಟೇಲ್ ಒಂದನ್ನೂ ನೆನ್ನೆ (ಭಾನುವಾರ.06.08.2023) ರಂದು ನೆಲಸಮಗೊಳಿಸಲಾಗಿತ್ತು.

ಹರ್ಯಾಣದಲ್ಲಿ ಕೋಮುಗಲಭೆಯಲ್ಲಿ 6 ಮಂದಿ ಸಾವನ್ನಪ್ಪಿದ್ದ ಹಿನ್ನೆಲೆಯಲ್ಲಿ ಕೋರ್ಟ್ ಸ್ವಯಂ ಪ್ರೇರಿತ ದೂರು ದಾಖಲಿಸಿಕೊಂಡಿತ್ತು. ಈಗ ಹೈಕೋರ್ಟ್ ಆದೇಶದ ಹಿನ್ನೆಲೆಯಲ್ಲಿ ಡಿಸಿ ಧೀರೇಂದ್ರ ಖಡ್ಗತ ಬುಲ್ಡೋಜರ್ ಕ್ರಮವನ್ನು ಸ್ಥಗಿತಗೊಳಿಸುವಂತೆ ಅಧಿಕಾರಿಗಳಿಹೆ ಸೂಚನೆ ನೀಡಿದ್ದಾರೆ.

ಈ ತೆರವು ಕಾರ್ಯಾಚರಣೆಗೆ ರಾಜಕಾರಣಿಗಳಿಂದ ತೀವ್ರ ವಿರೋಧ ವ್ಯಕ್ತವಾಗಿತ್ತು. ಮುಸ್ಲಿಮರನ್ನು ಈ ಕಾರ್ಯಾಚರಣೆ ಮೂಲಕ ಟಾರ್ಗೆಟ್ ಮಾಡಲಾಗುತ್ತಿದೆ ಎಂದು ಆರೋಪಿಸಲಾಗಿತ್ತು. ಈ ಕಾರ್ಯಾಚರಣೆಯಲ್ಲಿ ನೆಲಸಮಗೊಳಿಸಲಾದ ಮನೆ, ಆಸ್ತಿಗಳ ಮಾಲಿಕರು ತಮಗೆ ನೋಟಿಸ್ ನೀಡಲಾಗಿಲ್ಲ ಎಂಬ ಆರೋಪ ಮಾಡಿದ್ದರು. 
 

SCROLL FOR NEXT