ದೇಶ

ಗುರುಗ್ರಾಮದಲ್ಲಿ ಮಾಜಾರ್ ಗೆ ಬೆಂಕಿ, ಸ್ಥಳದಲ್ಲಿದ್ದ ಹಿಂದೂ ಉಸ್ತುವಾರಿಯಿಂದ ಎಫ್ಐಆರ್

Srinivas Rao BV

ಗುರುಗ್ರಾಮ: ಗುರುಗ್ರಾಮದಲ್ಲಿರುವ ಮಾಜಾರ್ ಒಂದಕ್ಕೆ ಸೋಮವಾರ ಬೆಳಿಗ್ಗೆ ಅನಾಮಿಕ ವ್ಯಕ್ತಿಗಳು ಬೆಂಕಿ ಹಚ್ಚಿದ್ದಾರೆ. 

ಸ್ಥಳದ ಉಸ್ತುವಾರಿಯಾಗಿದ್ದ ಘಾಸಿತೆ ರಾಮ್, ಈ ಬಗ್ಗೆ ಮಾತನಾಡಿದ್ದು,  ಖಂಡ್ಸಾ ಗ್ರಾಮದಲ್ಲಿನ ಮಾಜಾರ್ ನಲ್ಲಿ ತಾನು ಭಾನುವಾರ ರಾತ್ರಿ 8:30 ಕ್ಕೆ ಮನೆಗೆ ಹೊರಡುವಾಗ ಎಲ್ಲವೂ ಸಹಜವಾಗಿತ್ತು.  ಘಾಸಿತೆ ರಾಮ್ ಉತ್ತರ ಪ್ರದೇಶದ ಬಾರಾಬಂಕಿ ಜಿಲ್ಲೆಯ ನಿವಾಸಿಯಾಗಿದ್ದಾನೆ. 

ಮಧ್ಯರಾತ್ರಿ 1:30 ವೇಳೆಗೆ ಮಾಜಾರ್ ಬಳಿ ವಾಸಿಸುವ ವ್ಯಕ್ತಿಯೋರ್ವರು ಕರೆ ಮಾಡಿ, ಗುರುತು ಹಿಡಿಯಲಾಗದ ವ್ಯಕ್ತಿಗಳು ಮಜಾರ್ ಗೆ ಬೆಂಕಿ ಹಾಕಿದ್ದಾರೆ ಎಂಬ ಮಾಹಿತಿ ನೀಡಿದರು. ತಕ್ಷಣವೇ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾಗಿ ಘಾಸಿತೆ ರಾಮ್ ತಿಳಿಸಿದ್ದಾರೆ.

ಸ್ಥಳೀಯರ ಸಹಕಾರದಿಂದ ಬೆಂಕಿಯನ್ನು ತಹಬದಿಗೆ ತರಲು ಸಾಧ್ಯವಾಯಿತು ಎಂದು ಘಾಸಿತೆ ರಾಮ್ ಮಾಹಿತಿ ನೀಡಿದ್ದಾರೆ. "ನಾನು ಅಲ್ಲಿಗೆ ಹೋಗಿ ನೋಡಿದಾಗ, ಮಜಾರ್‌ನ ಬಾಗಿಲಿನೊಳಗೆ ಇಟ್ಟಿದ್ದ ಕಾಣಿಕೆಗಳು ಸುಟ್ಟುಹೋಗಿವೆ. ಈ ಘಟನೆಯಿಂದಾಗಿ ಜನರ ನಂಬಿಕೆಗಳಿಗೆ ಘಾಸಿ ಉಂಟಾಗಿದ್ದು, ಸಮಾಜದಲ್ಲಿ ಗಲಭೆಗೆ ಕಾರಣವಾಗಬಹುದು, ಆರೋಪಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಹೇಳಿದ್ದಾರೆ. ಇದು ಪೀರ್ ಬಾಬಾರ ದಶಕಗಳ ಹಿಂದಿನ ಮಾಜರ್ ಆಗಿದ್ದು, ಗ್ರಾಮಸ್ಥರು ಇಲ್ಲಿಗೆ ಬಂದು ಪೂಜೆ ಸಲ್ಲಿಸುವ ಪದ್ಧತಿ ಹೊಂದಿದ್ದರು.

SCROLL FOR NEXT