ದೇಶ

ಆಘಾತಕಾರಿ ಘಟನೆ: ಅಪ್ರಾಪ್ತೆ ಮೇಲೆ ಅತ್ಯಾಚಾರ; ಮೂವರು ಬಾಲಕಿಯರು, ಬಾಲಕನ ಮೇಲೆ ಪ್ರಕರಣ ದಾಖಲು

Ramyashree GN

ಪಿಲಿಭಿತ್: ಆಘಾತಕಾರಿ ಘಟನೆಯೊಂದರಲ್ಲಿ, ಉತ್ತರ ಪ್ರದೇಶದ ಪಿಲಿಭಿತ್ ಜಿಲ್ಲೆಯಲ್ಲಿ 15 ವರ್ಷದ ಬಾಲಕಿ ತಂದೆ ನೀಡಿದ ದೂರಿನ ಮೇರೆಗೆ ಪೊಲೀಸರು ಮೂವರು ಅಪ್ರಾಪ್ತ ಬಾಲಕಿಯರು ಮತ್ತು ಒಬ್ಬ ಬಾಲಕನ ವಿರುದ್ಧ 'ಅತ್ಯಾಚಾರ' ಪ್ರಕರಣ ದಾಖಲಿಸಿದ್ದಾರೆ.

ಜುಲೈ 27ರಂದು ರಾತ್ರಿ ತಮ್ಮ ಮಗಳಿಗೆ ಪರಿಚಯವಿದ್ದ ಮೂವರು ಬಾಲಕಿಯರು ತಮ್ಮೊಂದಿಗೆ ಹೊರಗೆ ಬರುವಂತೆ ಮನವೊಲಿಸಿ ಕರೆದೊಯ್ದಿದ್ದರು ಎಂದು ದೂರುದಾರರು ತಿಳಿಸಿದ್ದಾರೆ.

ನಂತರ ಸಂತ್ರಸ್ತೆಯನ್ನು ಅದೇ ಗ್ರಾಮದ 17 ವರ್ಷದ ಆರೋಪಿ ಬಾಲಕನ ಬಳಿ ಕರೆದುಕೊಂಡು ಹೋಗಿದ್ದಾರೆ. ನಂತರ ಆತ ಅತ್ಯಾಚಾರ ಎಸಗಿದ್ದಾನೆ. ಆಗಸ್ಟ್ 6 ರಂದು ಈ ಘಟನೆ ಬಗ್ಗೆ ತಿಳಿದಿದ್ದು, ಪೊಲೀಸರಿಗೆ ದೂರು ನೀಡಿದ್ದಾರೆ.

ಎಸ್‌ಎಚ್‌ಒ (ಜಹಾನಾಬಾದ್) ಉಮೇಶ್ ಸೋಲಂಕಿ, 'ಎಲ್ಲಾ ನಾಲ್ವರು ಆರೋಪಿಗಳ ವಿರುದ್ಧ ಐಪಿಸಿ ಸೆಕ್ಷನ್ 376 ಮತ್ತು ಪೊಕ್ಸೊ ಕಾಯ್ದೆಯಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಅಪರಾಧದಲ್ಲಿ ಬಾಲಕಿಯರ ಪಾತ್ರದ ಬಗ್ಗೆ ತನಿಖೆ ಆಧಾರದ ಮೇಲೆ ಮುಂದಿನ ನಿರ್ಧಾರಗಳನ್ನು ತೆಗೆದುಕೊಳ್ಳುತ್ತೇವೆ ಮತ್ತು ಅದರಂತೆ ಕ್ರಮ ಕೈಗೊಳ್ಳುತ್ತೇವೆ. ಸಂತ್ರಸ್ತೆಯನ್ನು ವೈದ್ಯಕೀಯ ಪರೀಕ್ಷೆಗಾಗಿ ಜಿಲ್ಲಾ ಆಸ್ಪತ್ರೆಗೆ ಕಳುಹಿಸಲಾಗಿದೆ' ಎಂದು ತಿಳಿಸಿದರು.

ಆರೋಪಿ ಬಾಲಕಿಯರ ಮೇಲೆ ಅತ್ಯಾಚಾರದ ಪ್ರಕರಣವನ್ನು ಏಕೆ ದಾಖಲಿಸಲಾಗಿದೆ ಎಂದು ಕೇಳಿದ್ದಕ್ಕೆ ಉತ್ತರಿಸಿದ ಎಸ್‌ಎಚ್‌ಒ, '376ಕ್ಕಿಂತ ಬೇರೆ ಯಾವ ಸೆಕ್ಷನ್ ಹೆಚ್ಚು ಕಠಿಣವಾಗಿದೆ?' ಎಂದರು.

ಈ ಕುರಿತು ಪ್ರತಿಕ್ರಿಯಿಸಿರುವ ಹಿರಿಯ ಕ್ರಿಮಿನಲ್ ವಕೀಲರಾದ ಅಶ್ವಿನಿ ಅಗ್ನಿಹೋತ್ರಿ, 'ಆರೋಪಿ ಬಾಲಕಿಯರ ವಿರುದ್ಧ ಐಪಿಸಿ ಸೆಕ್ಷನ್ 120 ಬಿ (ಕ್ರಿಮಿನಲ್ ಪಿತೂರಿ) ಅಥವಾ 362 (ಅಪಹರಣ) ಅಡಿಯಲ್ಲಿ ಪ್ರಕರಣ ದಾಖಲಿಸಬಹುದಿತ್ತು ಎಂದಿದ್ದಾರೆ.

SCROLL FOR NEXT