ದೇಶ

ಮಧ್ಯಪ್ರದೇಶ: ನೈರ್ಮಲ್ಯ ಕಾರ್ಮಿಕರ ಬಗ್ಗೆ ಆಕ್ಷೇಪಾರ್ಹ ಹೇಳಿಕೆ ನೀಡಿದ್ದ ವ್ಯಕ್ತಿ ಬಂಧನ

Srinivas Rao BV

ಇಂದೋರ್: ನೈರ್ಮಲ್ಯ ಕಾರ್ಮಿಕರ ಬಗ್ಗೆ ಆಕ್ಷೇಪಾರ್ಹ ಹೇಳಿಕೆ ನೀಡಿದ್ದ ವ್ಯಕ್ತಿಯೋರ್ವನನ್ನು ಮಧ್ಯಪ್ರದೇಶದ ಪೊಲೀಸರು ಬಂಧಿಸಿದ್ದಾರೆ.

ಬಂಧಿತ ವ್ಯಕ್ತಿ ಹಫೀಜ್ ಆಗಿದ್ದು ಆತನನ್ನು ಶದಬ್ ಖಾನ್ ಎಂದು ಗುರಿತಿಸಲಾಗಿದೆ. ಸಿಆರ್ ಪಿಸಿ  ಸೆಕ್ಷನ್ 151 ರ ಅಡಿಯಲ್ಲಿ ವ್ಯಕ್ತಿಯನ್ನು ಬಂಧಿಸಲಾಗಿದೆ ಎಂದು ಚಂದನ್ ನಗರ್ ಪೊಲೀಸ್ ಠಾಣೆಯ ಇನ್ಸ್ ಪೆಕ್ಟರ್ ಮನೀಷ್ ಮಿಶ್ರಾ ಹೇಳಿದ್ದಾರೆ.

ಇದು ಮುನ್ನೆಚ್ಚರಿಕೆ ಕ್ರಮದ ಬಂಧನವಾಗಿದ್ದು, ದೇಶದ ಅತ್ಯಂತ ಸ್ವಚ್ಛ ನಗರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಇಂದೋರ್ ನಲ್ಲಿ ಧಾರ್ಮಿಕ ಉಪನ್ಯಾಸವನ್ನು ಆಯೋಜಿಸಲಾಗಿದ್ದಾಗ ನೈರ್ಮಲ್ಯ ಕಾರ್ಮಿಕರ ಬಗ್ಗೆ ಈ ವ್ಯಕ್ತಿ ಆಕ್ಷೇಪಾರ್ಹ ಹೇಳಿಕೆ ನೀಡಿರುವ ಆರೋಪ ಕೇಳಿಬಂದಿದೆ.
 
ಈ ವ್ಯಕ್ತಿಯ ಹೇಳಿಕೆಯ ವೀಡಿಯೋ ವೈರಲ್ ಆಗತೊಡಗಿದ್ದು, ಎಸ್ ಸಿ/ಎಸ್ ಟಿ ದೌರ್ಜನ್ಯ ತಡೆ ಕಾಯ್ದೆಯಡಿ ಇಂದೋರ್ ಮಹಾನಗರ ಪಾಲಿಕೆಯ ವಾಲ್ಮೀಕಿ ಸಮಾಜ ಸಫಾಯಿ ಕರಮಚಾರಿ ಸಂಘದ ಉಪಾಧ್ಯಕ್ಷ ಸುಭಾಷ್ ಧೌಲಪುರೆ ಅವರ ದೂರಿನ ಆಧಾರದಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

ಬಂಧನಕ್ಕೊಳಗಾಗಿರುವ ವ್ಯಕ್ತಿ ಖಾನ್ ಕ್ಷಮೆ ಕೋರಿದ್ದು, ವೈರಲ್ ಆಗಿರುವ ವೀಡಿಯೋ ಕಳೆದ ವರ್ಷ ಮೊಹರಂ ಅವಧಿಯಲ್ಲಿ ಚಿತ್ರೀಕರಣವಾಗಿದ್ದು ಎಂದು ಹೇಳಿದ್ದಾರೆ.

SCROLL FOR NEXT