ದೇಶ

ಸ್ವಾತಂತ್ರ್ಯ ದಿನಾಚರಣೆ ಬಹಿಷ್ಕರಿಸಲು ಅಸ್ಸಾಂ ಉಗ್ರಗಾಮಿ ಸಂಘಟನೆಗಳ ಕರೆ

Nagaraja AB

ನವದೆಹಲಿ: ಸ್ವಾತಂತ್ರ್ಯ ದಿನಾಚರಣೆಗೆ ದೇಶಾದ್ಯಂತ ಸಿದ್ಧತೆಗಳು ಆರಂಭವಾಗಿರುವಂತೆಯೇ ಉಗ್ರಗಾಮಿ ಸಂಘಟನೆಗಳಾದ ಯುನೈಟೆಡ್ ಲಿಬರೇಶನ್ ಫ್ರಂಟ್ ಆಫ್ ಅಸ್ಸಾಂ (ಸ್ವತಂತ್ರ) ಮತ್ತು ನ್ಯಾಷನಲ್ ಸೋಷಿಯಲಿಸ್ಟ್ ಕೌನ್ಸಿಲ್ ಆಫ್ ನಾಗಾಲ್ಯಾಂಡ್ (ಎನ್‌ಎಸ್‌ಸಿಎನ್)/ಜಿಪಿಆರ್‌ಎನ್ ಸ್ವಾತಂತ್ರ್ಯ ದಿನಾಚರಣೆ ಬಹಿಷ್ಕರಿಸಲು ಕರೆ ನೀಡಿದ್ದು, ಅಸ್ಸಾಂನಾದ್ಯಂತ ಭದ್ರತೆಯನ್ನು ಹೆಚ್ಚಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ನಾಕಾ ತಪಾಸಣೆ ಸೇರಿದಂತೆ ಎಲ್ಲಾ ನಿಯಮಿತ ಭದ್ರತಾ ಕ್ರಮಗಳನ್ನು ಕೈಗೊಳ್ಳುತ್ತಿದ್ದೇವೆ. ಸ್ವಾತಂತ್ರ್ಯ ದಿನಾಚರಣೆಗೆ ಯಾವುದೇ ಅಡ್ಡಿಯಾಗದಂತೆ ಖಾತ್ರಿಗಾಗಿ ಎಲ್ಲಾ ಮುಂಜಾಗ್ರತಾ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಪಿಟಿಐ ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ. 

ಅಂತಹ ಬಂದ್ ಕರೆ ನೀಡುವುದಕ್ಕೆ ಮಾತ್ರ ಈ ಸಂಘಟನೆಗಳು ಹೆಸರಾಗಿವೆ. ಆದರೆ ನಾವು ಯಾವುದೇ ಅವಕಾಶ ಕೊಡಲ್ಲ, ಯಾವುದೇ ವಿಧ್ವಂಸಕ ಚಟುವಟಿಕೆಗಳನ್ನು ಕೈಗೊಳ್ಳದಂತೆ ನೋಡಿಕೊಳ್ಳುತ್ತೇವೆ.  ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ  ರಾಷ್ಟ್ರಧ್ವಜಾರೋಹಣ ಮಾಡುವ ಗುವಾಹಟಿಯಲ್ಲಿ ಪ್ರಧಾನ ಸಮಾರಂಭ ನಡೆಯಲಿದ್ದು, ಇತರ ಸಚಿವರು ಮತ್ತು ಉನ್ನತ ಅಧಿಕಾರಿಗಳ ಭಾಗವಹಿಸುವಿಕೆಯೊಂದಿಗೆ ರಾಜ್ಯಾದ್ಯಂತ ಇದೇ ರೀತಿಯ ಕಾರ್ಯಕ್ರಮಗಳನ್ನು ನಿಗದಿಪಡಿಸಲಾಗಿದೆ.
ಮೈದಾನದಲ್ಲಿ ಭದ್ರತೆಯನ್ನು ಪರಿಶೀಲಿಸಲಾಗಿದೆ ಮತ್ತು ಶಾಂತಿಯುತ ಆಚರಣೆಯನ್ನು ಖಚಿತಪಡಿಸಿಕೊಳ್ಳಲು ಎಲ್ಲಾ ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತಿದೆ ಎಂದು ಪೊಲೀಸ್ ಅಧಿಕಾರಿ ಹೇಳಿದರು.

 ಅಸ್ಸಾಂ, ನಾಗಾಲ್ಯಾಂಡ್ ಮತ್ತು ಅರುಣಾಚಲ ಪ್ರದೇಶದ ಜನರು ಆಗಸ್ಟ್ 15 ರಂದು ಸ್ವಾತಂತ್ರ್ಯ ದಿನಾಚರಣೆಯನ್ನು 'ಬಹಿಷ್ಕರಿಸುವಂತೆ' ಉಲ್ಫಾ (ಐ) ಇಮೇಲ್ ಮೂಲಕ ಕೇಳಿಕೊಂಡಿದೆ. ಉಲ್ಫಾ(ಐ) ಮತ್ತು ಎನ್‌ಎಸ್‌ಸಿಎನ್/ಜಿಪಿಆರ್‌ಎನ್ ಸಂಘಟನೆಗಳು ಆಗಸ್ಟ್ 15ರ ಮಧ್ಯರಾತ್ರಿಯಿಂದ ಸಂಜೆ 6 ಗಂಟೆಯವರೆಗೆ ತುರ್ತು ಸೇವೆಗಳು, ಮಾಧ್ಯಮ ಸೇವೆಗಳು ಮತ್ತು ಧಾರ್ಮಿಕ ಚಟುವಟಿಕೆಗಳನ್ನು ಸಾರ್ವತ್ರಿಕ ಮುಷ್ಕರದ ವ್ಯಾಪ್ತಿಯಿಂದ ಹೊರಗಿಟ್ಟು ಬಂದ್‌ಗೆ ಕರೆ ನೀಡಿವೆ.

SCROLL FOR NEXT