ದೇಶ

ಆರ್ ಪಿಎಫ್ ನಿಂದ ಫೈರಿಂಗ್: ದೇಶದಲ್ಲಿರುವುದು ಸುರಕ್ಷಿತ ಎನಿಸುತ್ತಿಲ್ಲ- ಸಂತ್ರಸ್ತ ವ್ಯಕ್ತಿಯ ಪುತ್ರ

Srinivas Rao BV

ನವದೆಹಲಿ: ಈ ದೇಶದಲ್ಲಿರುವುದು ಸುರಕ್ಷಿತ ಎನಿಸುತ್ತಿಲ್ಲ ಎಂದು ಕಳೆದ ತಿಂಗಳು ಆರ್ ಪಿಎಫ್ ಕಾನ್ಸ್ಟೇಬಲ್ ನಿಂದ ಫೈರಿಂಗ್ ಗೆ ಒಳಗಾಗಿ ಮೃತಪಟ್ಟ ವ್ಯಕ್ತಿಯ ಪುತ್ರ ಹೇಳಿದ್ದಾರೆ. 

ಜೈಪುರ- ಮುಂಬೈ ಸೆಂಟ್ರಲ್ ಸೂಪರ್ ಫಾಸ್ಟ್ ಎಕ್ಸ್ ಪ್ರೆಸ್ ನಲ್ಲಿ ಆರ್ ಪಿಎಫ್ ಕಾನ್ಸ್ಟೇಬಲ್ ಚೇತನ್ ಸಿಂಗ್ ಕಳೆದ ತಿಂಗಳು ನಾಲ್ವರು ವ್ಯಕ್ತಿಗಳ ಮೇಲೆ ಗುಂಡು ಹಾರಿಸಿದ್ದರು. 

ಗುಂಡು ಹಾರಿಸಿದ್ದ ಕಾನ್ಸ್ಟೇಬಲ್ ಚೇತನ್ ಸಿಂಗ್ ನ ಪೊಲೀಸ್ ಕಸ್ಟಡಿ ಮುಕ್ತಾಯಗೊಂಡ ಹಿನ್ನೆಲೆಯಲ್ಲಿ ಆತನನ್ನು ನ್ಯಾಯಾಲಯದ ಎದುರು ಹಾಜರುಪಡಿಸಲಾಗಿತ್ತು. ಆ ನಂತರ ಆರ್ ಪಿಎಫ್ ಪೇದೆಯನ್ನು ನ್ಯಾಯಾಂಗ ಬಂಧನಕ್ಕೆ ಕೋರ್ಟ್ ಒಪ್ಪಿಸಿದೆ. ಆದರೆ ಮುಂಬೈ ಕೋರ್ಟ್ ಶುಕ್ರವಾರದಂದು ಸಂತ್ರಸ್ತನ ಪುತ್ರನಿಗೆ ರಿಮಾಂಡ್ ಪ್ರಕ್ರಿಯೆಗಳಲ್ಲಿ ಹಾಜರಾಗಲು ಅನುಮತಿ ನೀಡಲಿಲ್ಲ.  

ಸಂತ್ರಸ್ತ ವ್ಯಕ್ತಿಯ ಪುತ್ರ ದುಬೈ ನಲ್ಲಿ ಕೆಲಸ ಮಾಡುತ್ತಿದ್ದು, ಇತ್ತೀಚೆಗೆ ಭಾರತಕ್ಕೆ ಆಗಮಿಸಿದ್ದಾರೆ. ಆದರೆ ಪ್ರಕರಣಕ್ಕೆ ಸಂಬಂಧಿಸಿದಂತೆ ಯಾವುದೇ ವಿಧದಲ್ಲೂ ತಮಗೆ ನೆರವು ಸಿಗುತ್ತಿಲ್ಲ ಎಂದು ಅಸಧಾನವ್ಯಕ್ತಪಡಿಸಿದ್ದು, ನಮಗೆ ಇಲ್ಲಿ ಸುರಕ್ಷತೆಯ ಭಾವನೆ ಮೂಡುತ್ತಿಲ್ಲ. ನಾವು ಬೇರೆ ದೇಶಕ್ಕೆ ಹೋಗಲು ಯೋಚಿಸುತ್ತಿದ್ದೇವೆ. ಆದರೆ ನಮ್ಮ ಮನೆ ಇಲ್ಲೇ ಇರಲಿದ್ದು ಕೆಲವು ದಿನಗಳಿಗಾಗಿ ಇಲ್ಲಿಗೆ ಬರಲಿದ್ದೇವೆ ಎಂದು ಹೇಳಿದ್ದಾರೆ.

SCROLL FOR NEXT