ತರಕಾರಿ ಮಾರಾಟಗಾರನ ಜೊತೆಗೆ ರಾಹುಲ್ ಭೋಜನದ ಚಿತ್ರ 
ದೇಶ

ತರಕಾರಿ ಮಾರಾಟಗಾರನ ಜೊತೆಗೆ ಊಟ ಸವಿದ ರಾಹುಲ್ ಗಾಂಧಿ!

ಇತ್ತೀಚಿಗೆ ಸಾಮಾಜಿಕ ಮಾಧ್ಯಮದ ವೀಡಿಯೊವೊಂದರಲ್ಲಿ ಹಣದುಬ್ಬರದಿಂದ ಎದುರಿಸುತ್ತಿರುವ ಸಂಕಷ್ಟಗಳನ್ನು ಹೇಳಿಕೊಳ್ಳುವಾಗ ಕಣ್ಣೀರು ಹಾಕಿದ್ದ ತರಕಾರಿ ಮಾರಾಟಗಾರ ರಾಮೇಶ್ವರನ್  ಜೊತೆಗೆ ರಾಹುಲ್ ಗಾಂಧಿ ಊಟ ಮಾಡಿದ್ದಾರೆ.

ನವದೆಹಲಿ: ಇತ್ತೀಚಿಗೆ ಸಾಮಾಜಿಕ ಮಾಧ್ಯಮದ ವೀಡಿಯೊವೊಂದರಲ್ಲಿ ಹಣದುಬ್ಬರದಿಂದ ಎದುರಿಸುತ್ತಿರುವ ಸಂಕಷ್ಟಗಳನ್ನು ಹೇಳಿಕೊಳ್ಳುವಾಗ ಕಣ್ಣೀರು ಹಾಕಿದ್ದ ತರಕಾರಿ ಮಾರಾಟಗಾರ ರಾಮೇಶ್ವರನ್  ಜೊತೆಗೆ ರಾಹುಲ್ ಗಾಂಧಿ ಊಟ ಮಾಡಿದ್ದಾರೆ.

ಟ್ವಿಟರ್ ನಲ್ಲಿ  ಈ ಚಿತ್ರವನ್ನು ಹಂಚಿಕೊಂಡಿರುವ ರಾಹುಲ್ ಗಾಂಧಿ, ರಾಮೇಶ್ವರ್ ಜಿ ಅವರು ಉತ್ಸಾಹಭರಿತ ವ್ಯಕ್ತಿ! ಅವರಲ್ಲಿ ಕೋಟಿಗಟ್ಟಲೆ ಭಾರತೀಯರ ಸೌಹಾರ್ದಯುತ ಸ್ವಭಾವದ ನೋಟವನ್ನು ಕಾಣಬಹುದು. ಪ್ರತಿಕೂಲ ಪರಿಸ್ಥಿತಿಗಳಲ್ಲಿಯೂ ನಗುಮುಖದಿಂದ ಮುನ್ನಡೆಯುವವರು ನಿಜವಾಗಿಯೂ 'ಭಾರತ ಭಾಗ್ಯ ವಿಧಾತ (ಭಾರತದ ಹಣೆಬರಹ ತಯಾರಕರು) ಎಂದು ಹೇಳಿದ್ದಾರೆ. 

ಕಾಂಗ್ರೆಸ್  ಕೂಡಾ ಈ ಚಿತ್ರವನ್ನು X ನಲ್ಲಿ ಹಂಚಿಕೊಂಡಿದ್ದು, ರಾಹುಲ್ ಗಾಂಧಿ ಅವರನ್ನು ಭೇಟಿಯಾಗಲು ರಾಮೇಶ್ವರ್ ಬಯಸಿದ್ದರಿಂದ ಅವರಿಬ್ಬರೂ ಭೇಟಿಯಾಗಿರುವುದಾಗಿ ತಿಳಿಸಿದೆ. ಚಿತ್ರದಲ್ಲಿ ರಾಹುಲ್ ಗಾಂಧಿ ಮತ್ತು ರಾಮೇಶ್ವರ್ ಅವರು ಊಟ ಮಾಡುವುದನ್ನು ಕಾಣಬಹುದು

ವೈರಲ್ ಆದ  ವಿಡಿಯೋದಲ್ಲಿ  ತಮ್ಮ ಖಾಲಿ ಬಂಡಿಯೊಂದಿಗೆ ಕಾಣಿಸಿಕೊಂಡಿದ್ದ ರಾಮೇಶ್ವರ್, ಟೊಮೆಟೊ ಬೆಲೆ ತುಂಬಾ ಹೆಚ್ಚಿರುವುದರಿಂದ ಖರೀದಿಸಲು ಸಾಧ್ಯವಿಲ್ಲ ಎಂದಿದ್ದರು. ಬೇರೆ ತರಕಾರಿ ಕೊಳ್ಳುತ್ತೀರಾ ಎಂದು ಕೇಳಿದರೆ ಪೈಸೆ ನಹೀಂ ಎಂದು ಹೇಳಿ ಕಣ್ಣೀರು ಹಾಕಿದ್ದರು.  ಈ ವಿಡಿಯೋ ವೈರಲ್ ಆಗಿದ್ದು, ಬೆಲೆ ಏರಿಕೆಯ ಬಗ್ಗೆ ರಾಹುಲ್ ಗಾಂಧಿ ಮತ್ತಿತರ ನಾಯಕರು  ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Operation Sindoor; Kirana Hills ಪರಮಾಣು ನೆಲೆಗೆ ಅಪ್ಪಳಿಸಿದ ಭಾರತದ ಡ್ರೋನ್? ಬೆಚ್ಚಿಬಿದ್ದ ಪಾಕಿಸ್ತಾನ..! Indian Army ಹೇಳಿದ್ದೇನು?

ನೀಟ್ ಪ್ರತಿಭಟನಾಕಾರರ ಮೇಲೆ ಪೊಲೀಸ್ ದೌರ್ಜನ್ಯ ಆರೋಪ: ಚರ್ಚೆಗೆ ವಿಪಕ್ಷಗಳ ಪಟ್ಟು, ಸಂಸದೀಯ ಸಮಿತಿ ಸಭೆಯಲ್ಲಿ ತೀವ್ರ ವಾಗ್ವಾದ!

‘ಪ್ರಸಿದ್ಧ್ ಕೃಷ್ಣ ವಿಶ್ವದರ್ಜೆಯ ಬೌಲರ್ ಆಗಿ ಮಾರ್ಪಟ್ಟಿದ್ದಾರೆ’: ಕನ್ನಡಿಗನ ಶ್ಲಾಘಿಸಿದ ದಕ್ಷಿಣ ಆಫ್ರಿಕಾ ಮಾಜಿ ವೇಗಿ Morne Morkel

ಮಂಡ್ಯ ಜೈಲಿನ ಕರ್ಮಕಾಂಡ ಬಯಲು: ಆಸ್ಪತ್ರೆ​​ ವಾರ್ಡ್​​​ನಲ್ಲಿ ಮಹಿಳೆ​​ ಜೊತೆ ಸಿಕ್ಕಿಬಿದ್ದ ವಿಚಾರಣಾಧೀನ ಸರ್ಕಾರಿ ಅಧಿಕಾರಿ!

ಕೊಡಗಿನಲ್ಲಿ ಭಾರಿ ಮಳೆ: ಹಾರಂಗಿ ಜಲಾಶಯಕ್ಕೆ ಹೆಚ್ಚಿದ ಒಳಹರಿವು, ತಲಕಾವೇರಿಯಲ್ಲೂ ದಾಖಲೆಯ ವರ್ಷಧಾರೆ!