ಸಾಂದರ್ಭಿಕ ಚಿತ್ರ 
ದೇಶ

ರೆಸ್ಟೋರೆಂಟ್ ನ ಚಿಕನ್ ಆಹಾರದಲ್ಲಿ ಸತ್ತ ಇಲಿ ಪತ್ತೆ; ಮೂವರ ಬಂಧನ

ರೆಸ್ಟೋರೆಂಟ್ ಒಂದರಲ್ಲಿ ಚಿಕನ್ ಆಹಾರದಲ್ಲಿ ಸತ್ತ ಇಲಿ ಪತ್ತೆಯಾಗಿದ್ದು, ಈ ಘಟನೆ ಸಂಬಂಧ ಮೂವರನ್ನು ಬಂಧಿಸಲಾಗಿದೆ.

ಮುಂಬೈ: ರೆಸ್ಟೋರೆಂಟ್ ಒಂದರಲ್ಲಿ ಚಿಕನ್ ಆಹಾರದಲ್ಲಿ ಸತ್ತ ಇಲಿ ಪತ್ತೆಯಾಗಿದ್ದು, ಈ ಘಟನೆ ಸಂಬಂಧ ಮೂವರನ್ನು ಬಂಧಿಸಲಾಗಿದೆ.

ವ್ಯಕ್ತಿಯೋರ್ವರು ಈ ಬಗ್ಗೆ ದೂರು ನೀಡಿದ್ದು, ಪೊಲೀಸರು ಈಟರಿಯ ವ್ಯವಸ್ಥಾಪಕ ಹಾಗೂ ಇಬ್ಬರು ಅಡುಗೆಯವರನ್ನು ಬಂಧಿಸಲಾಗಿದೆ. ಬಾಂದ್ರಾದಲ್ಲಿರುವ ಉಪಕನರದಲ್ಲಿನ ರೆಸ್ಟೋರೆಂಟ್ ಗೆ ಗ್ರಾಹಕ ಭೇಟಿ ನೀಡಿದ್ದಾಗ ಆರ್ಡರ್ ಮಾಡಿದ ಚಿಕನ್ ಆಹಾರದಲ್ಲಿ ಸತ್ತ ಇಲಿ ಪತ್ತೆಯಾಗಿತ್ತು. ಗ್ರಾಹಕರಿಗೆ ಆರಂಭದಲ್ಲಿ ಇದು ತಿಳಿದಿರಲಿಲ್ಲ, ಅದೂ ಸಹ ಚಿಕನ್ ನ ಭಾಗ ಎಂದೇ ಭಾವಿಸಿ ಸೇವಿಸಿದರು.

ಆದರೆ ಮಾಂಸದ ಬಗ್ಗೆ ಆ ನಂತರ ಅನುಮಾನ ಮೂಡಿ ಪರಿಶೀಲಿಸಿದಾಗ ಅದು ಇಲಿ ಮರಿ ಎಂದು ತಿಳಿಯಿತು. ಈ ಬಗ್ಗೆ ರೆಸ್ಟೋರೆಂಟ್ ಸಿಬ್ಬಂದಿಗೆ ದೂರು ನೀಡಿದಾಗ ಅವರು ಗ್ರಾಹಕನಲ್ಲಿ ಕ್ಷಮೆ ಕೋರಿದ್ದಾರೆ. ಆದರೆ ಈ ಬಳಿಕ ಗ್ರಾಹಕನಿಗೆ ಅನಾರೋಗ್ಯ ಉಂಟಾಗಿದ್ದು ವೈದ್ಯರ ಬಳಿ ತೆರಳಿದ್ದಾರೆ. ಗ್ರಾಹಕನ ದೂರಿನ ಆಧಾರದಲ್ಲಿ ಸೆಕ್ಷನ್ 272 (ಕಲಬೆರಕೆ ಆಹಾರ) ಸೆಕ್ಷನ್ 336 (ಇತರರ ಜೀವನ ಅಥವಾ ವೈಯಕ್ತಿಕ ಸುರಕ್ಷತೆಗೆ ಅಪಾಯವನ್ನುಂಟುಮಾಡುವುದು) ಆರೋಪದಡಿ ಪ್ರಕರಣ ದಾಖಲಿಸಲಾಗಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

IPL 2026: ಗುಜರಾತ್ ವಿರುದ್ಧ ಭರ್ಜರಿ ಗೆಲುವು; ಸತತ 2ನೇ ಬಾರಿ ಫೈನಲ್ಸ್ ಪ್ರವೇಶಿಸಿದ RCB

IPL 2026: 33 ಎಸೆತ, 9 ಸಿಕ್ಸರ್, ಒಂದೇ ಒಂದು ಡಾಟ್.. Rajat Patidar ಸ್ಫೋಟಕ ಬ್ಯಾಟಿಂಗ್ ಗೆ ಕೊಹ್ಲಿ ಸೇರಿ ಕ್ರೀಡಾಂಗಣವೇ ದಂಗು!

ಈ ವಾರವೇ ಸಿದ್ದರಾಮಯ್ಯ ರಾಜೀನಾಮೆ ಸಾಧ್ಯತೆ; ಆಪ್ತರ ಬಳಿ CM ಹೇಳಿದ್ದೇನು?: ಮೇ.27 ರಂದು ರಾಜ್ಯಕ್ಕೆ ಹೈಕಮಾಂಡ್ ನಾಯಕರು

IPL 2026 Qualifier 1: GT ವಿರುದ್ದ ಸ್ಫೋಟಕ ಬ್ಯಾಟಿಂಗ್, ಇತಿಹಾಸ ಬರೆದ RCB

IPL 2026 Qualifier 1: ಐಪಿಎಲ್ ಅಷ್ಟೇ ಅಲ್ಲ.. ಜಾಗತಿಕ ಟಿ20 ಕ್ರಿಕೆಟ್ ನಲ್ಲೂ RCB ಐತಿಹಾಸಿಕ ದಾಖಲೆ, ರೆಕಾರ್ಡ್ ಗಳ ಪಟ್ಟಿ!

SCROLL FOR NEXT