ಗೌರವ್ ಗೊಗೊಯ್ 
ದೇಶ

ಲೂಟಿ ಮಾಡಿದ 6,000 ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಳ್ಳುವವರೆಗೆ ಮಣಿಪುರದಲ್ಲಿ ಶಾಂತಿ ನೆಲೆಸುವುದಿಲ್ಲ: ಗೊಗೊಯ್

ಲೂಟಿ ಮಾಡಿದ 6,000 ಅತ್ಯಾಧುನಿಕ ಶಸ್ತ್ರಾಸ್ತ್ರಗಳು ಮತ್ತು 6 ಲಕ್ಷ ಮದ್ದುಗುಂಡುಗಳನ್ನು ವಶಪಡಿಸಿಕೊಳ್ಳುವವರೆಗೆ ಮಣಿಪುರದಲ್ಲಿ ಶಾಂತಿ ನೆಲೆಸುವುದಿಲ್ಲ ಎಂದು ಲೋಕಸಭೆಯ ಕಾಂಗ್ರೆಸ್‌ ಉಪ ನಾಯಕ ಗೌರವ್ ಗೊಗೊಯ್ ಅವರು ಬುಧವಾರ...

ಗುವಾಹಟಿ: ಲೂಟಿ ಮಾಡಿದ 6,000 ಅತ್ಯಾಧುನಿಕ ಶಸ್ತ್ರಾಸ್ತ್ರಗಳು ಮತ್ತು 6 ಲಕ್ಷ ಮದ್ದುಗುಂಡುಗಳನ್ನು ವಶಪಡಿಸಿಕೊಳ್ಳುವವರೆಗೆ ಮಣಿಪುರದಲ್ಲಿ ಶಾಂತಿ ನೆಲೆಸುವುದಿಲ್ಲ ಎಂದು ಲೋಕಸಭೆಯ ಕಾಂಗ್ರೆಸ್‌ ಉಪ ನಾಯಕ ಗೌರವ್ ಗೊಗೊಯ್ ಅವರು ಬುಧವಾರ ಹೇಳಿದ್ದಾರೆ.

ಇಂದು ಪತ್ರಕರ್ತರೊಂದಿಗೆ ಮಾತನಾಡಿದ ಗೊಗೊಯ್, ಭದ್ರತಾ ಪಡೆಗಳಿಂದ ಲೂಟಿ ಮಾಡಿದ ಈ ಶಸ್ತ್ರಾಸ್ತ್ರಗಳು ಮತ್ತು ಮದ್ದುಗುಂಡುಗಳನ್ನು ಮೇ 3 ರಿಂದ ಹಿಂಸಾಚಾರಕ್ಕೆ ಸಾಕ್ಷಿಯಾಗಿರುವ ರಾಜ್ಯದ ಸಾಮಾನ್ಯ ಜನರ ವಿರುದ್ಧ ಬಳಸಲಾಗುತ್ತಿದೆ ಎಂದಿದ್ದಾರೆ.

ಎರಡು ಕಡೆಯಿಂದ ಸಾಮರಸ್ಯದ ಬಗ್ಗೆ ಮಾತುಕತೆ ನಡೆಯದಿರುವಾಗ ಶಾಂತಿ ಮತ್ತು ಸಹಜತೆ ಹೇಗೆ ಬರುತ್ತದೆ ಎಂದು ಕಾಂಗ್ರೆಸ್ ನಾಯಕ ಪ್ರಶ್ನಿಸಿದ್ದಾರೆ.

"ಮುಖ್ಯಮಂತ್ರಿ ಎನ್ ಬಿರೇನ್ ಸಿಂಗ್ ಅವರ ಕಾರ್ಯನಿರ್ವಹಣೆಯಿಂದ ಮೈಟೈಸ್ ಮತ್ತು ಕುಕಿಸ್ ಸಮುದಾಯ ಇಬ್ಬರೂ ಅತೃಪ್ತರಾಗಿದ್ದಾರೆ" ಎಂದು ಅವರು ಹೇಳಿದ್ದಾರೆ.

ಗೃಹ ಸಚಿವ ಅಮಿತ್ ಶಾ ಅವರು ಸಂಸತ್ತಿನಲ್ಲಿ ಮುಖ್ಯಮಂತ್ರಿಯನ್ನು ಸಂಪೂರ್ಣವಾಗಿ ಬೆಂಬಲಿಸಿರುವುದು ದುರದೃಷ್ಟಕರ ಎಂದ ಗೊಗೊಯ್, ಶಾಂತಿ ಸಮಿತಿಗಳಲ್ಲಿ ಸಿಎಂ ಉಪಸ್ಥಿತಿಯು ಶಾಂತಿ ಮಾತುಕತೆ ವಿಫಲವಾಗಲು ಕಾರಣ ಎಂದು ಆರೋಪಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಕುಸಿದ ಅಮೆರಿಕ; ಬದಲಾಗ್ತಿದೆ ವಿಶ್ವದ ದೊಡ್ಡಣ್ಣನ ಸ್ಥಾನ: ಇನ್ನು ಮುಂದೆ EMPs ಪ್ರಬಲ- EAM Jaishankar

'ನನಗೆ ಆಗ 20 ವರ್ಷ': ನಾನು ನಿನ್ನನ್ನ ಹ.. ಮಾಡಬೇಕು; ಕುಡಿದ ಮತ್ತಿನಲ್ಲಿ ನಿರ್ದೇಶಕನೊಬ್ಬ ಬಾಗಿಲು ಬಡಿದಿದ್ದ - ನಟಿ ಸ್ವರಾ ಭಾಸ್ಕರ್

ನನಗೆ ಸಾವಿನ ಭಯವಿರಲಿಲ್ಲ: ವಿಮಾನವನ್ನು ಪತನಗೊಳಿಸುವುದೇ ಉದ್ದೇಶವಾಗಿತ್ತು! ತನಿಖಾಧಿಕಾರಿಗಳ ಮುಂದೆ ಸತ್ಯ ಕಕ್ಕಿದ ಸಹ-ಪೈಲಟ್ ಹಮ್ಮಾಮಿ

SIR Row: ನೋಟಿಸ್ ನೀಡದೆ, ವಿಚಾರಣೆಯಿಲ್ಲದೆ ಮತದಾರರ ಹೆಸರು ತೆಗೆದುಹಾಕುವಂತಿಲ್ಲ: ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಉಜ್ಜಲ್ ಭುಯಾನ್!

ಚುನಾವಣಾ ಪ್ರಚಾರದಲ್ಲಿ ಮಗು ಬಳಕೆ ಆರೋಪ: DMK ಶಾಸಕ ಉದಯನಿಧಿ ಸ್ಟಾಲಿನ್ ವಿರುದ್ಧ ಕೇಸ್ ದಾಖಲು!