ದೇಶ

ದೇಶದ ಒಟ್ಟು ಟೋಲ್ ಆದಾಯದ ಶೇ. 28 ರಷ್ಟು ಆದಾಯ ದಕ್ಷಿಣ ರಾಜ್ಯಗಳಿಂದ, ತಮಿಳುನಾಡಿಗೆ ಅಗ್ರಸ್ಥಾನ

Lingaraj Badiger

ನವದೆಹಲಿ: ಭಾರತದ ದಕ್ಷಿಣ ರಾಜ್ಯಗಳಾದ ತಮಿಳುನಾಡು, ಕರ್ನಾಟಕ, ಆಂಧ್ರಪ್ರದೇಶ, ತೆಲಂಗಾಣ ಮತ್ತು ಕೇರಳ ದೇಶದ ಒಟ್ಟು ರಾಷ್ಟ್ರೀಯ ಹೆದ್ದಾರಿಗಳ ಪೈಕಿ ಕೇವಲ ಶೇ. 19 ರಷ್ಟು ಹೆದ್ದಾರಿ ಹೊಂದಿವೆ. ಆದರೂ, CAG ಆಡಿಟ್ ವರದಿಯ ಪ್ರಕಾರ, ಈ ರಾಜ್ಯಗಳು ದೇಶದ ಒಟ್ಟು ಟೋಲ್ ಆದಾಯದ ಶೇ. 28 ರಷ್ಟು ಹಣ ಪಾವತಿಸುತ್ತಿವೆ.

2017-18 ರಿಂದ 2020-21 ರವರೆಗಿನ ನಾಲ್ಕು ವರ್ಷಗಳಲ್ಲಿ NHAI ಗಳಿಸಿದ ಟೋಲ್ ಆದಾಯದಲ್ಲಿ ದಕ್ಷಿಣದ ರಾಜ್ಯಗಳು ಒಟ್ಟು 28,523.88 ಕೋಟಿ(ಶೇ 28.75) ರೂಪಾಯಿ ಪಾವತಿಸಿವೆ.

ಟೋಲ್ ಪಾವತಿಸುವುದರಲ್ಲಿ ದಕ್ಷಿಣ ರಾಜ್ಯಗಳ ಪೈಕಿ ತಮಿಳುನಾಡು ಅಗ್ರ ಸ್ಥಾನದಲ್ಲಿದ್ದು, ವರ್ಷಕ್ಕೆ 2,400 ಕೋಟಿ ರೂಪಾಯಿ ಟೋಲ್ ಆದಾಯಕ್ಕೆ ಕೊಡುಗೆ ನೀಡಿದೆ. ನಂತರದ ಸ್ಥಾನದಲ್ಲಿರುವ ಆಂಧ್ರಪ್ರದೇಶ 1,950 ಕೋಟಿ ರೂಪಾಯಿ ಮತ್ತು ಕರ್ನಾಟಕ 1,830 ಕೋಟಿ ರೂಪಾಯಿ ಟೋಲ್ ಪಾವತಿಸಿದೆ.

ಏತನ್ಮಧ್ಯೆ, ತೆಲಂಗಾಣವು 1,040 ಕೋಟಿ ರೂಪಾಯಿ ಮತ್ತು ಕೇರಳ 180 ಕೋಟಿ ರೂಪಾಯಿ ಟೋಲ್ ಸಂಗ್ರಹಿಸಿದೆ.
ಅಚ್ಚರಿ ಎಂದರೆ, ದಕ್ಷಿಣ ಭಾರತದಲ್ಲಿ ಕೋವಿಡ್ -19 ಸಾಂಕ್ರಾಮಿಕ ಸಮಯದಲ್ಲಿಯೂ ಸಹ ಟೋಲ್ ಸಂಗ್ರಹದಲ್ಲಿ ಯಾವುದೇ ತೀವ್ರ ಇಳಿಕೆ ಕಂಡುಬಂದಿಲ್ಲ.

ಸಾಂಕ್ರಾಮಿಕ ಸಮಯದಲ್ಲಿ ರಾಜ್ಯಗಳಲ್ಲಿನ ಟೋಲ್ ಸಂಗ್ರಹ ಕೇವಲ ಶೇ. 2 ರಷ್ಟು ಕುಸಿದಿದ್ದು, 7,455 ಕೋಟಿ ರೂ.ಗೆ ಸಂಗ್ರಹಿಸಿವೆ. ಕೋವಿಡ್ ಸಮಯದಲ್ಲಿ ದೇಶಾದ್ಯಂತ ಟೋಲ್ ಸಂಗ್ರಹದಲ್ಲಿ ಶೇ. 3.1 ರಷ್ಟು ಕುಸಿದಿ, 26,030 ಕೋಟಿ ರೂ. ಸಂಗ್ರಹವಾಗಿತ್ತು.

SCROLL FOR NEXT