ನಾಯಿ ಮೇಲೆ ಆ್ಯಸಿಡ್ ಎರಚಿದ ಮಹಿಳೆ 
ದೇಶ

ತನ್ನ ಸಾಕು ಬೆಕ್ಕಿನೊಂದು ಆಟವಾಡುತ್ತಿದ್ದ ನಾಯಿ ಮೇಲೆ ಆ್ಯಸಿಡ್ ಎರಚಿದ ಮಹಿಳೆ!!

ತನ್ನ ಸಾಕು ಬೆಕ್ಕಿನೊಂದು ಆಟವಾಡುತ್ತಿದ್ದ ನಾಯಿ ಮೇಲೆ 35 ವರ್ಷದ ಮಹಿಳೆಯೊಬ್ಬರು ಆ್ಯಸಿಡ್ ಎರಚಿದ ಧಾರುಣ ಘಟನೆ ಮುಂಬೈನಲ್ಲಿ ವರದಿಯಾಗಿದೆ.

ಮುಂಬೈ: ತನ್ನ ಸಾಕು ಬೆಕ್ಕಿನೊಂದು ಆಟವಾಡುತ್ತಿದ್ದ ನಾಯಿ ಮೇಲೆ 35 ವರ್ಷದ ಮಹಿಳೆಯೊಬ್ಬರು ಆ್ಯಸಿಡ್ ಎರಚಿದ ಧಾರುಣ ಘಟನೆ ಮುಂಬೈನಲ್ಲಿ ವರದಿಯಾಗಿದೆ.

ಮುಂಬೈನ ಮಾಳವಣಿ ಪ್ರದೇಶದಲ್ಲಿ ನಡೆದಿದ್ದು, ಶಬಿಸ್ತಾ ಸುಹೇಲ್ ಅನ್ಸಾರಿ ಎಂಬ ಮಹಿಳೆಯನ್ನು ನಾಯಿ ಮೇಲೆ ಆ್ಯಸಿಡ್ ಎರಚಿದ ಆರೋಪದ ಮೇಲೆ ಪೊಲೀಸರು ಬಂಧಿಸಿದ್ದಾರೆ. ತಾನು ವಾಸಿಸುವ ಕಟ್ಟಡದಲ್ಲಿಯೇ ಇರುವ ಕುಟುಂಬಕ್ಕೆ ಸೇರಿದ ನಾಯಿಯ ಮೇಲೆ ಶಬಿಸ್ತಾ ಸುಹೇಲ್ ಅನ್ಸಾರಿ ಎಂಬ ಮಹಿಳೆ ಆಸಿಡ್ ಎರಚಿದ್ದಾರೆ.

ಪೊಲೀಸರ ಪ್ರಕಾರ, ಮಹಿಳೆಯ ಮೇಲೆ ಐಪಿಸಿಯ ಹಲವಾರು ಸೆಕ್ಷನ್‌ಗಳ ಅಡಿಯಲ್ಲಿ ಪ್ರಾಣಿಗಳಿಗೆ ಕ್ರೌರ್ಯ ಆರೋಪವಿದೆ. ದಾಳಿಯಲ್ಲಿ ನಾಯಿಗೆ ತೀವ್ರ ಗಾಯಗಳಾಗಿದ್ದು, ಚಿಕಿತ್ಸೆಗಾಗಿ ಪಶು ಆಸ್ಪತ್ರೆಗೆ ಸಾಗಿಸಲಾಗಿದೆ. ಇಡೀ ಘಟನೆ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ ಎಂದು ತಿಳಿಸಿದ್ದಾರೆ.

ಬ್ರೌನಿ ಎಂಬ ನಾಯಿ ತನ್ನ ಬೆಕ್ಕಿನೊಂದಿಗೆ ಆಟವಾಡುತ್ತಿದ್ದರಿಂದ ಮಹಿಳೆ ಅಸಮಾಧಾನಗೊಂಡಿದ್ದಳು. ಅವಳು ತನ್ನ ಬೆಕ್ಕಿನಿಂದ ನಾಯಿಯನ್ನು ದೂರವಿಡುವಂತೆ ನಾಯಿಯ ಮಾಲೀಕರಿಗೆ ಎಚ್ಚರಿಕೆ ಕೂಡ ನೀಡಿದ್ದಳು. ಅದಾಗ್ಯೂ ನಾಯಿ ತನ್ನ ಬೆಕ್ಕಿನೊಂದಿಗೆ ಆಟವಾಡುತ್ತಿದ್ದನ್ನು ಅರಗಿಸಿಕೊಳ್ಳಲಾಗದ ಶಬಿಸ್ತಾ ಸುಹೇಲ್ ಅನ್ಸಾರಿ ನಾಯಿ ಮೇಲೆ ಆ್ಯಸಿಡ್ ಎರಚಿದ್ದಾಳೆ. 

ಈ ಇಡೀ ಘಟನೆ ಕಟ್ಟಡದ ಭದ್ರತಾ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ದೃಶ್ಯಾವಳಿಗಳಲ್ಲಿ ಮಹಿಳೆ ನಾಯಿಯ ಬಳಿಗೆ ಬಂದು ಆಸಿಡ್ ಸುರಿಯುವುದನ್ನು ತೋರಿಸಿದೆ. ನಾಯಿ ನೋವಿನಿಂದ ಗೋಳಾಡುವುದು ಮತ್ತು ಓಡಿಹೋಗುವುದು ಕೂಡ ಕ್ಯಾಮೆರಾದಲ್ಲಿ ದಾಖಲಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಸರ್ಕಾರದ 200 ಅಧಿಕಾರಿಗಳು ವಿರೋಧ ಪಕ್ಷದ ಸಂಪರ್ಕದಲ್ಲಿ: ಪ್ರತಿಭಟನಾ ಜಾಥಾಕ್ಕೂ ಮುನ್ನ ರಾಹುಲ್ ಗಾಂಧಿ ಹೊಸಬಾಂಬ್!

'ಸುಪ್ರೀಂ ಕೋರ್ಟ್‌ಗೆ ಅಲೆದು, ಅಲೆದು ಸಾಕಾಗಿ ಹೋಗಿದೆ'; ಹಿರಿಯ ವಕೀಲ ಕಪಿಲ್ ಸಿಬಲ್ ಅಚ್ಚರಿ ಹೇಳಿಕೆ, ನ್ಯಾಯಾಲಯ ಹೇಳಿದ್ದೇನು?

ಭಾರತೀಯ ನೌಕಾಪಡೆಗೆ ಮತ್ತಷ್ಟು ಬಲ: 3ನೇ ಜಲಾಂತರ್ಗಾಮಿ ನಿಗ್ರಹ ಯುದ್ಧನೌಕೆ 'INS ಮಂಗ್ರೋಲ್' ಸೇರ್ಪಡೆ-Video

ಪ್ರತಿಭಟನಾಕಾರರಿಗೆ ಬಿಗ್ ಶಾಕ್; ಇನ್ಮುಂದೆ ದೆಹಲಿ Jantar Mantarನಲ್ಲಿ ಧರಣಿ ನಡೆಸುವಂತಿಲ್ಲ..!

'ಹೃದಯದ ಪ್ರಮುಖ ರಕ್ತನಾಳದಲ್ಲಿ ರಕ್ತದ ಹೆಪ್ಪುಗಟ್ಟುವಿಕೆ'; ಮರಣೋತ್ತರ ಪರೀಕ್ಷೆಯಲ್ಲಿ ನಟ ನಾನಾ ಪಟೇಕರ್ ಸಾವಿನ ಕಾರಣ ಬಹಿರಂಗ!