ಸಾಂದರ್ಭಿಕ ಚಿತ್ರ 
ದೇಶ

ಆಗಸ್ಟ್ 20ರಿಂದ ಟೊಮೆಟೊ ಪ್ರತಿ ಕೆ.ಜಿ 40 ರೂಪಾಯಿಗೆ ಮಾರಾಟ ಮಾಡಲು ಕೇಂದ್ರ ಸರ್ಕಾರ ನಿರ್ಧಾರ

ರಾಷ್ಟ್ರೀಯ ಸಹಕಾರಿ ಗ್ರಾಹಕರ ಭಾರತೀಯ ಫೆಡರೇಷನ್ ಲಿಮಿಟೆಡ್ (NCCF) ಮತ್ತು ರಾಷ್ಟ್ರೀಯ ಕೃಷಿ ಸಹಕಾರಿ ಮಾರುಕಟ್ಟೆ ಭಾರತೀಯ ಫೆಡರೇಷನ್ ಲಿಮಿಟೆಡ್ (NAFED) ನಾಳೆ ಅಂದರೆ ಆಗಸ್ಟ್ 20 ರಿಂದ ಪ್ರತಿ ಕಿಲೋಗೆ 40 ರೂಪಾಯಿ ಚಿಲ್ಲರೆ ದರದಲ್ಲಿ ಟೊಮೆಟೊವನ್ನು ಮಾರಾಟ ಮಾಡಲು ಪ್ರಾರಂಭಿಸುವುದಾಗಿ ಘೋಷಿಸಿವೆ. 

ನವದೆಹಲಿ: ರಾಷ್ಟ್ರೀಯ ಸಹಕಾರಿ ಗ್ರಾಹಕರ ಭಾರತೀಯ ಫೆಡರೇಷನ್ ಲಿಮಿಟೆಡ್ (NCCF) ಮತ್ತು ರಾಷ್ಟ್ರೀಯ ಕೃಷಿ ಸಹಕಾರಿ ಮಾರುಕಟ್ಟೆ ಭಾರತೀಯ ಫೆಡರೇಷನ್ ಲಿಮಿಟೆಡ್ (NAFED) ನಾಳೆ ಅಂದರೆ ಆಗಸ್ಟ್ 20 ರಿಂದ ಪ್ರತಿ ಕಿಲೋಗೆ 40 ರೂಪಾಯಿ ಚಿಲ್ಲರೆ ದರದಲ್ಲಿ ಟೊಮೆಟೊವನ್ನು ಮಾರಾಟ ಮಾಡಲು ಪ್ರಾರಂಭಿಸುವುದಾಗಿ ಘೋಷಿಸಿವೆ. 

ಮೊನ್ನೆ ಆಗಸ್ಟ್ 15 ರಂದು ಸರ್ಕಾರವು ಟೊಮೆಟೊ ಬೆಲೆಯನ್ನು 50 ರೂಪಾಯಿಗೆ ಇಳಿಸಿದ ನಂತರ ಇತ್ತೀಚಿನ ನಿರ್ದೇಶನದ ಪ್ರಕಾರ 40 ರೂಪಾಯಿಗೆ ಇಳಿಸಲಾಗಿದೆ. ಕಳೆದ ತಿಂಗಳಿನಿಂದ, NCCF ಮತ್ತು NAFED ಬೆಲೆ ಏರಿಕೆಯನ್ನು ತಡೆಯಲು ಗ್ರಾಹಕ ವ್ಯವಹಾರಗಳ ಸಚಿವಾಲಯದ ಪರವಾಗಿ ರಿಯಾಯಿತಿ ದರದಲ್ಲಿ ಟೊಮೆಟೊಗಳನ್ನು ಮಾರಾಟ ಮಾಡುತ್ತಿದೆ.

ಆರಂಭದಲ್ಲಿ, ಸಬ್ಸಿಡಿ ದರವನ್ನು ಪ್ರತಿ ಕಿಲೋಗ್ರಾಂಗೆ 90 ರೂಪಾಯಿಗೆ ನಿಗದಿಪಡಿಸಲಾಯಿತು, ಇದು ಗ್ರಾಹಕರಿಗೆ ಪ್ರಯೋಜನಗಳನ್ನು ಖಾತರಿಪಡಿಸುವ ಸಲುವಾಗಿ ಬೆಲೆಗಳಲ್ಲಿನ ಇಳಿಕೆಗೆ ಅನುಗುಣವಾಗಿ ಸತತವಾಗಿ ಕಡಿಮೆಯಾಯಿತು.

ಆಗಸ್ಟ್ 15 ರಂದು ಪ್ರತಿ ಕೆಜಿಗೆ 50 ರೂಪಾಯಿ ಚಿಲ್ಲರೆ ಬೆಲೆಯ ಕೊನೆಯ ಇಳಿಕೆಯ ಪರಿಷ್ಕರಣೆಯಾಗಿದೆ, ಇದು ಈಗ ಪ್ರತಿ ಕೆಜಿಗೆ 40 ರೂಪಾಯಿ ಆಗಿದ್ದು ನಾಳೆಯಿಂದ ಜಾರಿಗೆ ಬರಲಿದೆ. ಇಲ್ಲಿಯವರೆಗೆ, ಎರಡು ಏಜೆನ್ಸಿಗಳಿಂದ 15 ಲಕ್ಷ ಕಿಲೋಗ್ರಾಂಗಳಷ್ಟು ಟೊಮೆಟೊಗಳನ್ನು ಸಂಗ್ರಹಿಸಲಾಗಿದೆ. 

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಇತಿಹಾಸ ಕಲಿಯಬೇಕಿದ್ದರೆ ಕಾಲೇಜಿಗೆ ಹೋಗುತ್ತಾರೆ, ನಿಮ್ಮ ಬೋಧನೆಯ ಅಗತ್ಯವಿಲ್ಲ: ಪ್ರಧಾನಿ ಮೋದಿ ವಿರುದ್ಧ ಪ್ರಿಯಾಂಕ್ ಖರ್ಗೆ ವಾಗ್ದಾಳಿ

MGNREGA Row: ಯಾವಾಗ-ಎಲ್ಲಿ ಬೇಕಾದರೂ ಚರ್ಚೆಗೆ ಸಿದ್ಧ, ಡೈಲಾಗ್‌ ವೀರ HDK ಬಂದರೆ ಒಳ್ಳೆಯದು; ಡಿ.ಕೆ.ಶಿವಕುಮಾರ್

Positive Vibes ಗಾಗಿ ಮನೆಯಲ್ಲಿ ಯಾವ ಗಿಡ ಬೆಳಸಬೇಕು: ಮುಳ್ಳಿನ ಗಿಡಗಳಲ್ಲಿದೆಯೇ ನಕರಾತ್ಮಕ ಶಕ್ತಿ; ಮಲ್ಲಿಗೆ ಮತ್ತು ತುಳಸಿಗೆ ಸೂಕ್ತ ಸ್ಥಳ ಯಾವುದು?

ಮಹಿಳಾ ಟೆಕ್ಕಿ ಸಾವಿನ ಕೇಸ್ ಗೆ ಬಿಗ್ ಟ್ವಿಸ್ಟ್: ಹತ್ಯೆಗೂ ಮುನ್ನ PU ವಿದ್ಯಾರ್ಥಿಯಿಂದ ರೇಪ್; ಸಾಕ್ಷಿ ನಾಶಕ್ಕೆ ಬೆಂಕಿ ಹಚ್ಚಿದ ಕರ್ನಲ್ ಕುರೈ!

1st ODI: ಕೊಹ್ಲಿ ಅರ್ಧಶತಕ: ನ್ಯೂಜಿಲ್ಯಾಂಡ್ ವಿರುದ್ಧದ ಪಂದ್ಯದಲ್ಲಿ ಭಾರತಕ್ಕೆ ರೋಚಕ ಜಯ!

SCROLL FOR NEXT