ದೇಶ

ಮಣಿಪುರ: ಮಯನ್ಮಾರ್ ಗೆ ಪಲಾಯನ ಮಾಡಿದ್ದ 200ಕ್ಕೂ ಹೆಚ್ಚು ಮೆಯ್ಟೀ ಸಮುದಾಯದವರು ಮರಳಿ ರಾಜ್ಯಕ್ಕೆ- ಸಿಎಂ ಬಿರೇನ್ ಸಿಂಗ್

Srinivasamurthy VN

ಇಂಫಾಲ: ಮಣಿಪುರ ಜನಾಂಗೀಯ ಹಿಂಸಾಚಾರದಿಂದ ಜೀವ ಉಳಿಸಿಕೊಳ್ಳಲು ನೆರೆಯ ಮಯನ್ಮಾರ್ ದೇಶಕ್ಕೆ ಪಲಾಯನ ಮಾಡಿದ್ದ 200ಕ್ಕೂ ಅಧಿಕ ಮೆಯ್ಟೀ ಸಮುದಾಯದವರು ಮರಳಿ ರಾಜ್ಯಕ್ಕೆ ಸುರಕ್ಷಿತವಾಗಿ ಆಗಮಿಸಿದ್ದಾರೆ ಎಂದು ಸಿಎಂ ಬಿರೇನ್ ಸಿಂಗ್ ಹೇಳಿದ್ದಾರೆ.

ಮಣಿಪುರದಲ್ಲಿ ಜನಾಂಗೀಯ ಹಿಂಸಾಚಾರದಿಂದ ಪಾರಾಗಲು ನೆರೆಯ ಮ್ಯಾನ್ಮಾರ್‌ಗೆ ತೆರಳಿದ್ದ 200 ಕ್ಕೂ ಹೆಚ್ಚು ಮೆಯ್ಟೀ ಸಮುದಾಯದವರ ಮೂರು ತಿಂಗಳ ನಂತರ ಸುರಕ್ಷಿತವಾಗಿ ರಾಜ್ಯಕ್ಕೆ ಮರಳಿದ್ದಾರೆ ಎಂದು ಮುಖ್ಯಮಂತ್ರಿ ಎನ್ ಬಿರೇನ್ ಸಿಂಗ್ ಹೇಳಿದ್ದು, ಅವರನ್ನು ಮರಳಿ ಕರೆತರುವಲ್ಲಿ ಸೇನೆಯ ಪಾತ್ರವನ್ನು ಅವರು ಶ್ಲಾಘಿಸಿದರು.

ಮೇ 3 ರಿಂದ ಮಣಿಪುರದಲ್ಲಿ ಮೆಯ್ಟೀ ಮತ್ತು ಕುಕಿಗಳ ನಡುವಿನ ಘರ್ಷಣೆಯಲ್ಲಿ 160 ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ ಮತ್ತು ನೂರಾರು ಜನರು ಗಾಯಗೊಂಡಿದ್ದಾರೆ.

ಶುಕ್ರವಾರ ರಾತ್ರಿ ಸೇನೆಯ ರಕ್ಷಣೆಯಲ್ಲಿ 200ಕ್ಕೂ ಅಧಿಕ ಮೆಯ್ಟೀ ಸಮುದಾಯದ ಜನರು ಮರಳಿ ಮಣಿಪುರಕ್ಕೆ ಸುರಕ್ಷಿತವಾಗಿ ಆಗಮಿಸಿದ್ದು, ಅವರನ್ನು ಸಿಂ ಬಿರೇನ್ ಸಿಂಗ್ ಸ್ವಾಗತಿಸಿದರು. ಈ ಕುರಿತು ಟ್ವೀಟ್ ಮಾಡಿರುವ ಅವರು, "ಮಣಿಪುರದ ಮೊರೆಹ್ ಪಟ್ಟಣದಲ್ಲಿ ಮೇ 3 ರ ಅಶಾಂತಿಯ ನಂತರ ಮ್ಯಾನ್ಮಾರ್ ಗಡಿಯಲ್ಲಿ ಸುರಕ್ಷತೆಯನ್ನು ಬಯಸಿ ಹೋಗಿದ್ದ 212 ಸಹ ಭಾರತೀಯ ನಾಗರಿಕರು (ಎಲ್ಲರೂ ಮೆಯ್ಟೀಗಳು) ಈಗ ಸುರಕ್ಷಿತವಾಗಿ ಭಾರತದ ನೆಲಕ್ಕೆ ಮರಳಿದ್ದಾರೆ" ಎಂದು ಹೇಳಿದ್ದಾರೆ.

ಅಂತೆಯೇ ಅವರನ್ನು ಭಾರತಕ್ಕೆ ಸುರಕ್ಷಿತವಾಗಿ ಕರೆ ತಂದ ಭಾರತೀಯ ಸೇನೆಯ ಪ್ರಯತ್ನಗಳನ್ನೂ ಶ್ಲಾಘಿಸಿದ ಸಿಎಂ ಬಿರೇನ್ ಸಿಂಗ್, ಅವರನ್ನು ಮನೆಗೆ ಕರೆತರುವಲ್ಲಿ ಭಾರತೀಯ ಸೇನೆಯ ಸಮರ್ಪಣೆಗಾಗಿ ದೊಡ್ಡ ಸಲಾಂ. GOC (ಜನರಲ್ ಆಫೀಸರ್ ಕಮಾಂಡಿಂಗ್) ಈಸ್ಟರ್ನ್ ಕಮಾಂಡ್, ಲೆಫ್ಟಿನೆಂಟ್ ಜನರಲ್ ಆರ್ ಪಿ ಕಲಿತಾ, GOC 3 ಕಾರ್ಪ್ಸ್, ಲೆಫ್ಟಿನೆಂಟ್ ಜನರಲ್ HS ಸಾಹಿ ಮತ್ತು CO (ಕಮಾಂಡಿಂಗ್ ಆಫೀಸರ್) ಎಆರ್, ಕರ್ನಲ್ ರಾಹುಲ್ ಜೈನ್ ಅವರಿಗೆ ಕೃತಜ್ಞತೆಗಳು ಸಲ್ಲಿಸಿದರು.
 

SCROLL FOR NEXT