ದೇಶ

ಚೆನ್ನೈ: ಸೊಳ್ಳೆ ಬತ್ತಿಯಿಂದ ಹೊತ್ತಿಕೊಂಡ ಬೆಂಕಿ; ಅಜ್ಜಿ, ಮೂವರು ಮೊಮ್ಮಕ್ಕಳು ಸಾವು

Lingaraj Badiger

ಚೆನ್ನೈ: ಮನಾಲಿ ಸಮೀಪದ ಮಾಥುರ್ ಎಂಎಂಡಿಎಯಲ್ಲಿ ಮನೆಯೊಂದರಲ್ಲಿ ಸೊಳ್ಳೆ ಬತ್ತಿಯಿಂದ ಉಂಟಾದ ಆಕಸ್ಮಿಕ ಅಗ್ನಿ ಅವಘಡದಲ್ಲಿ ಉಸಿರುಗಟ್ಟಿ ವೃದ್ಧೆ ಹಾಗೂ ಆಕೆಯ ಮೂವರು ಮೊಮ್ಮಗಳು ಮೃತಪಟ್ಟಿದ್ದಾರೆ ಎಂದು ಪೊಲೀಸರು ಶನಿವಾರ ತಿಳಿಸಿದ್ದಾರೆ.

ಮೃತ ಮಹಿಳೆಯನ್ನು ಸಂತಾನಲಕ್ಷ್ಮಿ(65) ಎಂದು, ಆಕೆಯ ಮೊಮ್ಮಗಳಾದ ಸಂಧ್ಯಾ, ಪ್ರಿಯಾ ರಕ್ಷಿತಾ ಮತ್ತು ಪವಿತ್ರಾ ಎಂದು ಗುರುತಿಸಲಾಗಿದೆ. 8 ರಿಂದ 10 ವರ್ಷದ ಈ ಮೂವರು ಬಾಲಕಿಯರು ಬೆಂಕಿ ಹೊತ್ತಿಕೊಂಡಾಗ ತಮ್ಮ ಮನೆಯಲ್ಲಿ ಮಲಗಿದ್ದರು.

ಇಂದು ಬೆಳಗ್ಗೆ ಮನೆಯಿಂದ ಹೊಗೆ ಬರುತ್ತಿರುವುದನ್ನು ಗಮನಿಸಿದ ನೆರೆಹೊರೆಯವರು ಪೊಲೀಸರಿಗೆ ಮತ್ತು ಅಗ್ನಿಶಾಮಕ ದಳದ ಸಿಬ್ಬಂದಿಗೆ ಮಾಹಿತಿ ನೀಡಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.

ಪೊಲೀಸರು ಸ್ಥಳಕ್ಕೆ ಆಗಮಿಸಿದಾಗ ಎಲ್ಲಾ ನಾಲ್ವರು ಪ್ರಜ್ಞಾಹೀನ ಸ್ಥಿತಿಯಲ್ಲಿದ್ದರು ಮತ್ತು ತಕ್ಷಣ ಅವರನ್ನು ಆಸ್ಪತ್ರೆಗೆ ಸಾಗಿಸಿದರು. ಆದರೆ ವೈದ್ಯರು ಅವರು ಮೃತಪಟ್ಟಿದ್ದಾರೆ" ಎಂದು ಘೋಷಿಸಿದ್ದಾರೆ.

ಕುಟುಂಬ ಸದಸ್ಯರು ಮಲಗಿದ್ದ ಕೊಠಡಿಯಲ್ಲಿ ಇರಿಸಲಾಗಿದ್ದ ಸೊಳ್ಳೆ ಬತ್ತಿ ಕೆಲವು ನೈಲಾನ್ ವಸ್ತುಗಳ ಮೇಲೆ ಬಿದ್ದು ಬೆಂಕಿ ಕಾಣಿಸಿಕೊಂಡಿದೆ ಎಂದು ಪೊಲೀಸರ ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ.

ಕುಟುಂಬ ಸದಸ್ಯರು ನಿದ್ರೆಯಲ್ಲಿ ಹೊಗೆ ಸೇವಿಸಿ ಸಾವನ್ನಪ್ಪಿದ್ದಾರೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

SCROLL FOR NEXT