ಪಾಟ್ನಾ: ಪಾಟ್ನಾ-ಕೋಟಾ ಎಕ್ಸ್ ಪ್ರೆಸ್ ರೈಲಿನಲ್ಲಿ ಪ್ರಯಾಣಿಸುತ್ತಿದ್ದ ಪ್ರಯಾಣಿಕರ ಪೈಕಿ ಇಬ್ಬರು ಪ್ರಯಾಣಿಕರು ಸಾವನ್ನಪ್ಪಿದ್ದು 6 ಮಂದಿ ಅಸ್ವಸ್ಥಗೊಂಡಿದ್ದಾರೆ.
ಈ ಸಾವುಗಳಿಗೆ ಕಾರಣ ಏನು ಎಂಬುದು ಈ ವರೆಗೂ ತಿಳಿದುಬಂದಿಲ್ಲ. ಚತ್ತೀಸ್ ಗಢದ ರಾಯ್ ಪುರದಿಂದ ಹೊರಟಿದ್ದ 90 ಪ್ರಯಾಣಿಕರ ಪೈಕಿ ಈ 8 ಮಂದಿ ಇದ್ದರು.
ಅಸ್ವಸ್ಥಗೊಂಡ 6 ಮಂದಿಯ ಪೈಕಿ 5 ಮಂದಿಯನ್ನು ಆಗ್ರಾದಲ್ಲಿರುವ ರೈಲ್ವೆ ಆಸ್ಪತ್ರೆಗೆ ದಾಖಲಿಸಲಾಗಿದ್ದರೆ, ಮತ್ತೋರ್ವ ವ್ಯಕ್ತಿಯನ್ನು ಎಸ್ ಎನ್ ವೈದ್ಯಕೀಯ ಕಾಲೇಜಿಗೆ ದಾಖಲಿಸಲಾಗಿದೆ.
"ಪ್ರಯಾಣಿಕರು ಅಸ್ವಸ್ಥರಾಗಿರುವ ಬಗ್ಗೆ ರೈಲ್ವೆ ಸಹಾಯವಾಣಿ ಸಂಖ್ಯೆಗೆ ಕರೆ ಬಂದಿದೆ. ಅವರು ಎಸಿ ಕೋಚ್‌ನಲ್ಲಿ ಪ್ರಯಾಣಿಸುತ್ತಿದ್ದರು. ಸುಮಾರು 62 ವರ್ಷ ವಯಸ್ಸಿನ ಮಹಿಳೆ ಮತ್ತು ಸುಮಾರು 65 ವಯಸ್ಸಿನ ಪುರುಷ ಆಗ್ರಾ ಕ್ಯಾಂಟ್ ರೈಲ್ವೇ ನಿಲ್ದಾಣದಲ್ಲಿ ಮಂದಿ ಮೃತಪಟ್ಟಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ. ಒಂದೇ ಗುಂಪಿನ ಐದು ಪ್ರಯಾಣಿಕರು (ಆಸ್ಪತ್ರೆಗಳಲ್ಲಿ) ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಆಗ್ರಾ ವಿಭಾಗದ ಉತ್ತರ ಮಧ್ಯ ರೈಲ್ವೆ ಪಿಆರ್‌ಒ ಪ್ರಶಸ್ತಿ ಶ್ರೀವಾಸ್ತವ ಅವರು ಪಿಟಿಐಗೆ ತಿಳಿಸಿದ್ದಾರೆ.