ದೇಶ

ಮುಂಬೈ ಸಭೆಯಲ್ಲಿ ಇಂಡಿಯಾ ಮೈತ್ರಿಕೂಟದ ಲೋಗೋ ಅನಾವರಣ ಸಾಧ್ಯತೆ

Srinivas Rao BV

ನವದೆಹಲಿ: ಬಿಜೆಪಿಯನ್ನು ಲೋಕಸಭಾ ಚುನಾವಣೆಯಲ್ಲಿ ಮಣಿಸುವ ಉದ್ದೇಶದಿಂದ ಅಸ್ತಿತ್ವಕ್ಕೆ ಬಂದಿರುವ ಇಂಡಿಯಾ ಮೈತ್ರಿಕೂಟದ ಸಭೆ ಆ.31- ಸೆ.1 ರಂದು ನಡೆಯಲಿದೆ. 

ಈ ಅವಧಿಯಲ್ಲಿ ಮೈತ್ರಿಕೂಟದ ಲೋಗೋ ಬಿಡುಗಡೆಯಾಗುವ ಸಾಧ್ಯತೆ ಇದೆ ಎಂದು ವಿಶ್ಲೇಷಿಸಲಾಗುತ್ತಿದೆ. ಎಲ್ಲಾ 26 ಪಕ್ಷಗಳಿಂದ 80 ನಾಯಕರು ಈ ಇಂಡಿಯಾ ಮೈತ್ರಿಕೂಟದ 3 ನೇ ಸಭೆಯಲ್ಲಿ ಭಾಗಿಯಾಗುವ ನಿರೀಕ್ಷೆ ಇದೆ. ಈಗ 26 ಪಕ್ಷಗಳು ಮೈತ್ರಿಕೂಟದಲ್ಲಿದ್ದು ಇನ್ನೂ ಕೆಲವು ಪಕ್ಷಗಳು ಸೇರ್ಪಡೆಯಾಗಲಿವೆ.

ಸೆ.1 ರಂದು ನಡೆಯಲಿರುವ ಸಭೆಯಲ್ಲಿ ಇಂಡಿಯಾ ಮೈತ್ರಿಕೂಟದ ಲೋಗೋ ಬಿಡುಗಡೆಯಾಗುವ ಸಾಧ್ಯತೆ ಇದೆ. ಪ್ರತಿಪಕ್ಷಗಳ ಮೈತ್ರಿಕೂಟದ ಮೊದಲ ಸಭೆ ಪಾಟ್ನಾದಲ್ಲಿ ಜೂನ್ ನಲ್ಲಿ ನಡೆದಿದ್ದರೆ, ಎರಡನೆಯ ಸಭೆ ಬೆಂಗಳೂರಿನಲ್ಲಿ ಕಳೆದ ತಿಂಗಳು ನಡೆದಿತ್ತು. 

ಶಿವಸೇನೆ ಉದ್ಧವ್ ಠಾಕ್ರೆ ಬಣದ ಮುಖ್ಯಸ್ಥರಾದ ಉದ್ಧವ್ ಠಾಕ್ರೆ ಈ ಸಭೆಯಲ್ಲಿ ಆ.31 ರಂದು ನಾಯಕರುಗಳಿಗೆ ಔತಣ ಕೂಟ ಏರ್ಪಡಿಸಲಿದ್ದಾರೆ. ಮರುದಿನ ಇದೇ ಸ್ಥಳದಲ್ಲಿ ಸಭೆ ನಡೆಸಿ ನಂತರ ಪತ್ರಿಕಾಗೋಷ್ಠಿ ನಡೆಸಲಾಗುತ್ತದೆ.

SCROLL FOR NEXT