ದೇಶ

ಮಹಾರಾಷ್ಟ್ರ: ಮುಳುಗುತ್ತಿದ್ದ ದೋಣಿಯಿಂದ ಏಳು ಮೀನುಗಾರರ ರಕ್ಷಣೆ!

Nagaraja AB

ರಾಯಗಢ: ಮಹಾರಾಷ್ಟ್ರದ ರಾಯಗಢ ಜಿಲ್ಲೆಯ ಕರಾವಳಿಯಲ್ಲಿ ಅರಬ್ಬಿ ಸಮುದ್ರದಲ್ಲಿ ಮುಳುಗುತ್ತಿದ್ದ ದೋಣಿಯಿಂದ ಏಳು ಮೀನುಗಾರರನ್ನು ರಕ್ಷಿಸಲಾಗಿದೆ ಎಂದು ಭಾರತೀಯ ಕರಾವಳಿ ರಕ್ಷಣಾ ಪಡೆಯ ಅಧಿಕಾರಿಯೊಬ್ಬರು ಭಾನುವಾರ ತಿಳಿಸಿದ್ದಾರೆ.

ಆಗಸ್ಟ್ 17 ರಂದು ನೀರಿನಲ್ಲಿ ಮುಳುಗಿದ ದೋಣಿಯ ಅವಶೇಷಗಳು ಇಂದು ಬೆಳಿಗ್ಗೆ ರಾಯಗಡ ಜಿಲ್ಲೆಯ ದಿವೇಗರ್ ತೀರದಲ್ಲಿ ಪತ್ತೆಯಾಗಿವೆ. ಗುರುವಾರ ಸಂಜೆ 4 ಗಂಟೆ ಸುಮಾರಿಗೆ ದಿಘಿ ಅಡ್ಗಾಂವ್ ಬಳಿ ಈ ಘಟನೆ ಸಂಭವಿಸಿದ್ದು, ಏಳು ಮೀನುಗಾರರ ಸಿಬ್ಬಂದಿ ತಮ್ಮ ಬೋಟ್ "ಬಾನಾ ಸಾಗರ್" ನಲ್ಲಿ ಒಂಬತ್ತು ಮೈಲುಗಳಷ್ಟು ಸಮುದ್ರದೊಳಗೆ ಹೋದಾಗ ಇದಕ್ಕಿದ್ದಂತೆ  ದೋಣಿ ಮುಳುಗಲು ಪ್ರಾರಂಭಿಸಿದ್ದು, ಸಮೀಪದಲ್ಲಿದ್ದ ಗುಜರಾತ್‌ ನಿಂದ ಆಗಮಿಸಿದ್ದ ಎರಡು ಟ್ರಾಲರ್‌ಗಳು ಏಳು ಮೀನುಗಾರರನ್ನು ರಕ್ಷಿಸಿದವು ಎಂದು ಅಧಿಕಾರಿ ತಿಳಿಸಿದ್ದಾರೆ.

ಘಟನಾ ಸ್ಥಳಕ್ಕೆ ಕರಾವಳಿ ಕಾವಲು ಪಡೆ ತಲುಪುವಷ್ಟರಲ್ಲಿ ಸಿಬ್ಬಂದಿಯನ್ನು ಸುರಕ್ಷಿತವಾಗಿ ಹೊರಗೆ ತರಲಾಯಿತು. ಆದರೆ, ಮುಳುಗುತ್ತಿದ್ದ ದೋಣಿಯನ್ನು ಆ ದಿನ ರಕ್ಷಿಸಲು ಸಾಧ್ಯವಾಗಲಿಲ್ಲ. ಭಾನುವಾರ ಬೆಳಗ್ಗೆ ದಿವೇಗರ್ ತೀರದಲ್ಲಿ ಕೊಚ್ಚಿ ಹೋದ ದೋಣಿಯ ಅವಶೇಷಗಳು ಪತ್ತೆಯಾಗಿದೆ ಎಂದು ಅಧಿಕಾರಿ ತಿಳಿಸಿದ್ದಾರೆ. 

SCROLL FOR NEXT