ದೇಶ

ಕೇರಳ, ದೇಶದಲ್ಲಿಯೇ ಅತಿ ಹೆಚ್ಚು ಪಂಚತಾರಾ ಹೋಟೆಲ್‌ಗಳನ್ನು ಹೊಂದಿದೆ

Lingaraj Badiger

ತಿರುವನಂತಪುರಂ: ದೇವರ ನಾಡು ಕೇರಳವು ದೇಶದಲ್ಲೇ ಅತಿ ಹೆಚ್ಚು ಪಂಚತಾರಾ ಹೋಟೆಲ್‌ಗಳನ್ನು ಹೊಂದಿರುವ ರಾಜ್ಯ ಎಂಬ ಹೆಗ್ಗಳಿಕೆಗೆ ಪಾತ್ರವಾಗುವ ಮೂಲಕ ಹೊಸ ಮೈಲಿಗಲ್ಲು ಸಾಧಿಸಿದೆ.

ವಸತಿ ಘಟಕಗಳ ರಾಷ್ಟ್ರೀಯ ಡೇಟಾಬೇಸ್‌ನಲ್ಲಿ ಲಭ್ಯವಿರುವ ಇತ್ತೀಚಿನ ಅಂಕಿ- ಅಂಶಗಳಿಂದ ಇದು ಬಹಿರಂಗವಾಗಿದೆ.

ಪ್ರವಾಸಿಗರ ಆಕರ್ಷಣೆ ಮತ್ತು ಕಾರ್ಪೊರೇಟ್‌ ಸ್ಥಳಗಳಿಗೆ ಜನಪ್ರಿಯವಾಗಿರುವ ಮಹಾರಾಷ್ಟ್ರ, ರಾಜಸ್ಥಾನ ಮತ್ತು ಗೋವಾದಂತಹ ರಾಜ್ಯಗಳನ್ನು ಸಹ ಕೇರಳ ಹಿಂದಿಕ್ಕಿದೆ.

ಶ್ರೇಯಾಂಕದ ಪ್ರಕಾರ, ಮಹಾರಾಷ್ಟ್ರವು ಒಟ್ಟು 35 ಪಂಚತಾರಾ ಹೋಟೆಲ್‌ಗಳೊಂದಿಗೆ ಎರಡನೇ ಸ್ಥಾನ ಪಡೆದುಕೊಂಡಿದೆ. ಗೋವಾ 32 ಪಂಚತಾರಾ ಹೋಟೆಲ್ ಗಳೊಂದಿಗೆ ಮೂರನೇ ಸ್ಥಾನದಲ್ಲಿದೆ ಮತ್ತು ರಾಷ್ಟ್ರ ರಾಜಧಾನಿ ದೆಹಲಿ 27 ಪಂಚತಾರಾ ಹೋಟೆಲ್‌ಗಳೊಂದಿಗೆ ನಂತರದ ಸ್ಥಾನದಲ್ಲಿದೆ.

ಮೂಲಸೌಕರ್ಯ ಮತ್ತು ಸೌಕರ್ಯಗಳನ್ನು ಅಭಿವೃದ್ಧಿಪಡಿಸುವಲ್ಲಿ ಸರ್ಕಾರ ಪ್ರಮುಖ ಪಾತ್ರ ವಹಿಸಿದರೆ, ಖಾಸಗಿಯವರು ಅವರಿಗೆ ಒದಗಿಸಲಾದ ಸೌಕರ್ಯಗಳನ್ನು ಅಭಿವೃದ್ಧಿಪಡಿಸುತ್ತಾರೆ. ಈ ಮೂಲಕ ಕೇರಳಕ್ಕೆ ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಪ್ರವಾಸಿಗರ ಭೇಟಿ ಹೆಚ್ಚಿಸಲು ಸಹಾಯ ಮಾಡುತ್ತಾರೆ ಎಂದು ಕೇರಳ ಪ್ರವಾಸೋದ್ಯಮ ನಿರ್ದೇಶಕ ಪಿ.ಬಿ ನೂಹ್ ಹೇಳಿದ್ದಾರೆ.

SCROLL FOR NEXT