ದೇಶ

ಚಂದ್ರನ ಮೇಲೆ ಸಮತಟ್ಟಾದ ಪ್ರದೇಶವನ್ನು ಗುರುತಿಸಿದ ಲ್ಯಾಂಡರ್: ಇತ್ತೀಚಿನ ಫೋಟೋಗಳಲ್ಲಿ ಸೆರೆ!

Srinivas Rao BV

ನವದೆಹಲಿ: ಚಂದ್ರಯಾನ-3 ಮಿಷನ್ ನ ಲ್ಯಾಂಡರ್ ವಿಕ್ರಮ್ ಚಂದ್ರನ ಮೇಲ್ಮೈ ನಲ್ಲಿ ಇಳಿಯುವುದಕ್ಕೆ ಸಮತಟ್ಟಾದ ಪ್ರದೇಶವನ್ನು ಗುರುತಿಸಿದೆ. 

ಲ್ಯಾಂಡರ್ ನ ಕ್ಯಾಮರಾದಲ್ಲಿ ಈ ದೃಶ್ಯಗಳು ಸೆರೆಯಾಗಿವೆ. ಲ್ಯಾಂಡರ್ ಚಂದ್ರನ ಮೇಲ್ಮೈನಲ್ಲಿ ಇಳಿಯುತ್ತಿದ್ದಂತೆಯೇ ಲ್ಯಾಂಡಿಂಗ್ ಪ್ರದೇಶದ ಫೋಟೋವನ್ನು ಸೆರೆ ಹಿಡಿಯಲಾಗಿದೆ. 

ಲ್ಯಾಂಡರ್ ನ ಕಾಲುಗಳು ಈ ಫೋಟೋದಲ್ಲಿ ಸೆರೆಯಾಗಿದ್ದು, ಲ್ಯಾಂಡರ್ ನ ನೆರಳಿನ ಚಿತ್ರವೂ ಕಾಣುತ್ತಿದೆ ಎಂದು ಇಸ್ರೋ ಹೇಳಿದೆ. 

ಲ್ಯಾಂಡರ್ ಹಾಗೂ ಸ್ಪೇಸ್ ಏಜೆನ್ಸಿಯ ಮಿಷನ್ ಆಪರೇಷನ್ ಕಾಂಪ್ಲೆಕ್ಸ್ (ಎಂಒಎಕ್ಸ್) ನಡುವೆ ಸಂಪರ್ಕ ಏರ್ಪಟ್ಟಿದೆ. ಎಂಒಎಕ್ಸ್ ಇಸ್ರೋ ಟೆಲಿಮೆಟ್ರಿ, ಟ್ರ್ಯಾಕಿಂಗ್ ಮತ್ತು ಕಮಾಂಡ್ ನೆಟ್ವರ್ಕ್ ಯಲ್ಲಿದೆ. ಇಸ್ರೋ ಚಂದ್ರನ ಮೇಲ್ಮೈಗೆ ಇಳಿಯುವಾಗ ತೆಗೆದ ಲ್ಯಾಂಡರ್ ಹಾರಿಜಾಂಟಲ್ ವೆಲಾಸಿಟಿ ಕ್ಯಾಮೆರಾದಿಂದ ಚಿತ್ರಗಳನ್ನು ಬಿಡುಗಡೆ ಮಾಡಿದೆ.

ಲ್ಯಾಂಡರ್ ಮತ್ತು ರೋವರ್ ಅನ್ನು ಒಂದು ಚಂದ್ರನ ಹಗಲಿನ ಅವಧಿಯವರೆಗೆ (ಸುಮಾರು 14 ಭೂಮಿಯ ದಿನಗಳು) ಕಾರ್ಯನಿರ್ವಹಿಸಲು ವಿನ್ಯಾಸಗೊಳಿಸಲಾಗಿದೆ.

SCROLL FOR NEXT