ದೇಶ

ಮಧುರೈ ರೈಲಿಗೆ ಬೆಂಕಿ: ಗ್ಯಾಸ್ ಸಿಲಿಂಡರ್ ಸಾಗಿಸುತ್ತಿದ್ದ ಟೂರ್ ಆಪರೇಟರ್ ವಿರುದ್ಧ ಕೇಸ್ ದಾಖಲು

Lingaraj Badiger

ಮಧುರೈ: 9 ಜನರ ಸಜೀವ ದಹನಕ್ಕೆ ಕಾರಣವಾದ ಮಧುರೈ ರೈಲು ಅಗ್ನಿ ಅವಘಡಕ್ಕೆ ಸಂಬಂಧಿಸಿದಂತೆ ಗ್ಯಾಸ್ ಸಿಲಿಂಡರ್ ಅನ್ನು ಅಕ್ರಮವಾಗಿ ಸಾಗಿಸುತ್ತಿದ್ದ ಆರೋಪದ ಮೇಲೆ ಸರ್ಕಾರಿ ರೈಲ್ವೆ ಪೊಲೀಸರು(ಜಿಆರ್‌ಪಿ) ಟೂರ್ ಆಪರೇಟರ್ ವಿರುದ್ಧ ಕ್ರಿಮಿನಲ್ ಕೇಸ್ ದಾಖಲಿಸಿದ್ದಾರೆ.

"ಟೂರಿಸ್ಟ್ ಕೋಚ್‌ನಲ್ಲಿ ಅಡುಗೆ ಅನಿಲ ಸಿಲಿಂಡರ್‌ ಅನ್ನು 'ಅಕ್ರಮವಾಗಿ ಸಾಗಿಸಿದ' ಟೂರ್ ಆಪರೇಟರ್‌ ವಿರುದ್ಧ ಜಿಆರ್‌ಪಿಯು ಐಪಿಸಿ ಮತ್ತು ರೈಲ್ವೆ ಕಾಯ್ದೆಯ ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ಕ್ರಿಮಿನಲ್ ಪ್ರಕರಣ ದಾಖಲಿಸಿದೆ" ಎಂದು ದಕ್ಷಿಣ ರೈಲ್ವೆ ಪ್ರಕಟಣೆಯಲ್ಲಿ ತಿಳಿಸಿದೆ.

ಐಆರ್‌ಸಿಟಿಸಿಯ ಸಹಯೋಗದೊಂದಿಗೆ ದಕ್ಷಿಣ ರೈಲ್ವೆಯು ಬದುಕುಳಿದ ಪ್ರಯಾಣಿಕರನ್ನು ಲಖನೌ ಕಳುಹಿಸಲು ವಿಮಾನ ಪ್ರಯಾಣದ ವ್ಯವಸ್ಥೆ ಮಾಡುತ್ತದೆ ಎಂದು ಪ್ರಕಟಣೆ ಹೇಳಿದೆ.

ಇಂದು ಬೆಳಗಿನ ಜಾವ ತಮಿಳುನಾಡಿನ ಮಧುರೈ ರೈಲು ನಿಲ್ದಾಣದಲ್ಲಿ ಲಖನೌ–ರಾಮೇಶ್ವರಂ ಎಕ್ಸ್‌ಪ್ರೆಸ್‌ ರೈಲಿನಲ್ಲಿ ಬೆಂಕಿ ಅವಘಡ ಸಂಭವಿಸಿ 9 ಪ್ರಯಾಣಿಕರು ಸಾವನ್ನಪ್ಪಿದ್ದಾರೆ ಮತ್ತು 20 ಮಂದಿ ಗಾಯಗೊಂಡಿದ್ದಾರೆ.

SCROLL FOR NEXT