ದೇಶ

ಹಿಜಾಬ್ ತೆಗೆಯುವಂತೆ ವಿದ್ಯಾರ್ಥಿನಿಯರಿಗೆ ಕೇಳಿದ ಶಾಲೆಗೆ ಬೆದರಿಕೆ! 

Srinivas Rao BV

ಪಾಟ್ನ: ಹಿಜಾಬ್ ತೆಗೆಯುವಂತೆ ವಿದ್ಯಾರ್ಥಿನಿಯರಿಗೆ ಕೇಳಿದ ಬಿಹಾರದ ಶಾಲೆಗೆ ಬೆದರಿಕೆ ಹಾಕಲಾಗಿದೆ.

ವಿದ್ಯಾರ್ಥಿನಿಯರಿಗೆ ತರಗತಿಯ ಒಳಗೆ ಹಿಜಾಬ್ ನ್ನು ತೆಗೆಯುವಂತೆ ಶಿಕ್ಷಕರು ಸೂಚಿಸಿದ್ದರು.  ಈ ಹಿನ್ನೆಲೆಯಲ್ಲಿ ಶಾಲೆಗೆ ಬೆದರಿಕೆ ಬಂದಿರುವ ಬಗ್ಗೆ ಶೇಖ್ ಪುರ ಜಿಲ್ಲಾ ಶಿಕ್ಷಣಾಧಿಕಾರಿಗೆ ಈ ಬಗ್ಗೆ ಶಾಲೆಯ ಪ್ರಾಂಶುಪಾಲರು ದೂರು ದಾಖಲಿಸಿದ್ದಾರೆ. 

ಪ್ರಾಂಶುಪಾಲ ಸತ್ಯೇಂದ್ರ ಕುಮಾರ್ ಚೌಧರಿಯವರ ಲಿಖಿತ ದೂರಿನ ಪ್ರಕಾರ, ಧಾರ್ಮಿಕ ಗುಂಪಿಗೆ ಸೇರಿದ ಹುಡುಗಿಯರ ಹಲವಾರು ಕುಟುಂಬ ಸದಸ್ಯರು ನವೆಂಬರ್ 29 ರಂದು ಶಾಲೆಗೆ ನುಗ್ಗಿದ್ದರು.

"ತರಗತಿಯೊಳಗೆ ಹಿಜಾಬ್ ತೆಗೆಯುವಂತೆ ಬೋಧಕ ಸಿಬ್ಬಂದಿ ವಿದ್ಯಾರ್ಥಿನಿಯರನ್ನು ಕೇಳಿದಾಗ ಅವರು ಕೋಪಗೊಂಡರು. ಅವರು ತಮ್ಮ ಸಂಪ್ರದಾಯಗಳನ್ನು ಅನುಸರಿಸಲು ಅವಕಾಶ ನೀಡದಿದ್ದರೆ ಶಾಲೆಯನ್ನು ನಡೆಸಲು ಬಿಡುವುದಿಲ್ಲ ಎಂದು ಅವರು ಪ್ರಾಂಶುಪಾಲರಿಗೆ ಹೇಳಿದ್ದಾರೆಂದು ಡಿಇಒ ಆರೋಪಿಸಿದ್ದಾರೆ.

ಈ ಕುರಿತು ಇಲಾಖಾ ಮಟ್ಟದಲ್ಲಿ ತನಿಖೆ ನಡೆಸಲಾಗುತ್ತಿದ್ದು, ಶಾಲೆಗೆ ಭೇಟಿ ನೀಡಿ ವಿಚಾರಣೆ ನಡೆಸಿ ವರದಿ ಸಲ್ಲಿಸುವಂತೆ ಬ್ಲಾಕ್ ಶಿಕ್ಷಣಾಧಿಕಾರಿಗೆ ಸೂಚಿಸಲಾಗಿದೆ ಎಂದು ಸಿಂಗ್ ಹೇಳಿದರು.
 

SCROLL FOR NEXT