ನವದೆಹಲಿ: 4 ರಾಜ್ಯಗಳ ಚುನಾವಣಾ ಫಲಿತಾಂಶ ಪ್ರಕಟವಾಗಿದ್ದು ಕಾಂಗ್ರೆಸ್ 3 ರಾಜ್ಯಗಳಲ್ಲಿ ಸೋಲು ಕಂಡಿದೆ.
ಈ ಫಲಿತಾಂಶ ಲೋಕಸಭಾ ಚುನಾವಣೆ-2024 ರ ದೃಷ್ಟಿಯಿಂದ ಬಿಜೆಪಿ ವಿರೋಧಿ INDIA ಮೈತ್ರಿಕೂಟದ ಮೇಲೆ ಪರಿಣಾಮ ಉಂಟುಮಾಡಿದ್ದು, ಕಾಂಗ್ರೆಸ್ ನ ಕಳಪೆ ಪ್ರದರ್ಶನದ ಬಗ್ಗೆ ಮೈತ್ರಿಕೂಟದಲ್ಲೇ ಟೀಕೆ ವ್ಯಕ್ತವಾಗತೊಡಗಿದೆ.
ಹಿಂದಿ ಭಾಷಿಕ ಪ್ರದೇಶಗಳಲ್ಲಿ ಕಾಂಗ್ರೆಸ್ ನ ಸೋಲು ಸೆಕ್ಯುಲರ್ ಡೆಮಾಕ್ರೆಟಿಕ್ ಪಕ್ಷಗಳಿಗೆ ಪಾಠ ಎಂದು ಹೇಳಿರುವ ಎಡಪಕ್ಷಗಳು ವಿಪಕ್ಷಗಳನ್ನು ಒಗ್ಗೂಡೀಸುವ ನಿಟ್ಟಿನಲ್ಲಿನ ಪ್ರಯತ್ನಗಳು ಇನ್ನಷ್ಟು ತೀವ್ರಗೊಳ್ಳಬೇಕೆಂದು ಹೇಳಿವೆ.
ಸಿಪಿಐ ನ ಪ್ರಧಾನ ಕಾರ್ಯದರ್ಶಿ ಡಿ ರಾಜ ಈ ಬಗ್ಗೆ ಮಾತನಾಡಿದ್ದು, ಬಿಜೆಪಿಯನ್ನು ಸೋಲಿಸುವುದಕ್ಕೆ ಒಗ್ಗಟ್ಟಿನಿಂದ ಇರುವುದೊಂದೇ ದಾರಿ, ಈ ಹಿನ್ನೆಲೆಯಲ್ಲಿ ಕಾಂಗ್ರೆಸ್ ಹೊಂದಿಕೊಳ್ಳಬೇಕು ಎಂದು ಹೇಳಿದ್ದಾರೆ.
ಇದನ್ನೂ ಓದಿ: ಮೂರು ರಾಜ್ಯಗಳಲ್ಲಿ ಕಾಂಗ್ರೆಸ್ ನ ಹೀನಾಯ ಸೋಲು ಸನಾತನದ ಶಾಪ: ಸ್ವಂತ ಪಕ್ಷದ ವಿರುದ್ಧ ಪ್ರಮೋದ್ ಕೃಷ್ಣಂ ಆಕ್ರೋಶ
ಸಿಪಿಐ-ಮಾರ್ಕ್ಸ್‌ವಾದಿ (ಸಿಪಿಐ-ಎಂ) ಪ್ರಧಾನ ಕಾರ್ಯದರ್ಶಿ ಸೀತಾರಾಂ ಯೆಚೂರಿ ಮಾತನಾಡಿ ಚುನಾವಣಾ ಫಲಿತಾಂಶಗಳು ಜನರ ಜೀವನೋಪಾಯ ಮತ್ತು ಭಾರತೀಯ ಗಣರಾಜ್ಯದ ಜಾತ್ಯತೀತ ಪ್ರಜಾಸತ್ತಾತ್ಮಕ ಸ್ವರೂಪದ ರಕ್ಷಣೆಯಲ್ಲಿ ತಮ್ಮ ಪ್ರಯತ್ನಗಳನ್ನು ದ್ವಿಗುಣಗೊಳಿಸುವ ಜಾತ್ಯತೀತ ಶಕ್ತಿಗಳ ಅಗತ್ಯವನ್ನು ಒತ್ತಿಹೇಳುತ್ತವೆ ಎಂದು ಹೇಳಿದ್ದಾರೆ.
INDIA ಮೈತ್ರಿಕೂಟದ ನೇತೃತ್ವ ವಹಿಸುವ ಮಾತನ್ನಾಡಿದ ಟಿಎಂಸಿ
ಇತ್ತ ಪಶ್ಚಿಮ ಬಂಗಾಳದ ಟಿಎಂಸಿ, ಕಾಂಗ್ರೆಸ್ ಸೋಲಿನ ಹಿನ್ನೆಲೆಯಲ್ಲಿ INDIA ಮೈತ್ರಿಕೂಟದ ನೇತೃತ್ವವನ್ನು ವಹಿಸಲು ಸಿದ್ಧವಿರುವುದಾಗಿ ಹೇಳಿಕೆ ನೀಡಿದೆ.