ದೇಶ

ಬಾಲಕ್ ನಾಥ್: ಆದಿತ್ಯನಾಥ್ ಮಾದರಿ ರಾಜಸ್ಥಾನದಲ್ಲಿ ಸದ್ದು ಮಾಡುತ್ತಿರುವ ಮತ್ತೋರ್ವ "ಯೋಗಿ"!

Srinivas Rao BV

ಜೈಪುರ: ಉತ್ತರ ಪ್ರದೇಶದಲ್ಲಿ ಯೋಗಿ ಆದಿತ್ಯನಾಥ್ ರಾಜಕೀಯ ಪ್ರವೇಶಿಸಿ ಚುನಾವಣೆ ಗೆದ್ದ ಮಾದರಿಯಲ್ಲೇ ರಾಜಸ್ಥಾನದಲ್ಲಿ ಮತ್ತೋರ್ವ ಯೋಗಿಯ ಉದಯವಾಗಿದೆ. 

ಅವರ ಹೆಸರು ಮಹಾಂತ್ ಬಾಲಕ್ ನಾಥ್. ಅಲ್ವಾರ್ ನ ಬಿಜೆಪಿ ಲೋಕಸಭಾ ಸಂಸದರಾಗಿರುವ ಬಲಕ್ ನಾಥ್, ಈ ಬಾರಿಯ ವಿಧಾನಸಭಾ ಕ್ಷೇತ್ರದಲ್ಲಿ ಪ್ರತಿಷ್ಠಿತ ತಿಜಾರ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿ ಇಮ್ರಾನ್ ಖಾನ್ ವಿರುದ್ಧ ಸ್ಪರ್ಧಿಸಿ 6,000 ಮತಗಳ ಅಂತರದಿಂದ ಗೆದ್ದಿದ್ದಾರೆ.

ಕಠಿಣ ನಿಲುವುಗಳನ್ನು ಹೊಂದಿರುವ  ಬಾಲಕ್ ನಾಥ್ ತಿಜಾರದಲ್ಲಿ ತಮ್ಮ ಹಾಗೂ ಇಮ್ರಾನ್ ಖಾನ್ ಅವರ ನಡುವಿನ ಸ್ಪರ್ಧೆಯನ್ನು ಭಾರತ-ಪಾಕ್ ಕ್ರಿಕೆಟ್ ಪಂದ್ಯಕ್ಕೆ ಹೋಲಿಕೆ ಮಾಡಿದ್ದರು.
 
ಇಂಡಿಯಾ ಟುಡೆ- ಆಕ್ಸಿಸ್ ಮೈ ಇಂಡಿಯಾ ಚುನಾವಣೋತ್ತರ ಸಮೀಕ್ಷೆಯಲ್ಲಿ ಅಚ್ಚರಿಯ ರೀತಿಯಲ್ಲಿ ಸಿಎಂ ಹುದ್ದೆಗೆ ಜನರ ಆಯ್ಕೆಯ ಜನಪ್ರಿಯ ನಾಯಕರಾಗಿ ಹೊರಹೊಮ್ಮಿದ್ದರು.

ರಾಜಸ್ಥಾನದಲ್ಲಿ ಮುಖ್ಯಮಂತ್ರಿ ಹುದ್ದೆಗೆ ಬಿಜೆಪಿ ಯಾವುದೇ ಅಭ್ಯರ್ಥಿಯನ್ನೂ ಘೋಷಿಸಿರಲಿಲ್ಲ. ಸಮೀಕ್ಷೆಯಲ್ಲಿ ಶೇ.10 ರಷ್ಟು ಮಂದಿ ಬಾಲಕ್ ನಾಥ್ ಅವರನ್ನು ಮುಂದಿನ ರಾಜಸ್ಥಾನದ ಮುಖ್ಯಮಂತ್ರಿಯಾಗಿ ನೋಡಲು ಬಯಸುತ್ತಾರೆ ಎಂದು ಎಕ್ಸಿಟ್ ಪೋಲ್ ಮೂಲಕ ತಿಳಿದುಬಂದಿದೆ. ಶೇ.21 ರಷ್ಟು ಜನರು ಬಿಜೆಪಿಯ ಯಾವುದೇ ನಾಯಕರು ಸಿಎಂ ಆದರೂ ಉತ್ತಮ ಎಂಬ ಅಭಿಪ್ರಾಯ ಹೊಂದಿದ್ದರು.

ಬಾಲಕ್ ನಾಥ್ ಅವರನ್ನು ರಾಜಸ್ಥಾನದ ಯೋಗಿ ಆದಿತ್ಯನಾಥ್ ಎಂದೇ ಹೇಳಲಾಗುತ್ತಿದ್ದು, ಬಾಲಕ್ ನಾಥ್ ನಾಮಪತ್ರ ಸಲ್ಲಿಸುವಾಗ ಯೋಗಿ ಆದಿತ್ಯನಾಥ್ ಸಹ ಸಾಥ್ ನೀಡಿದ್ದರು. 

SCROLL FOR NEXT