ಬಂಧಿತ ಆರೋಪಿ ಆಶಿಕ್ 
ದೇಶ

ಗರ್ಲ್ ಫ್ರೆಂಡ್ ಕೊಂದು, ಡೆಡ್ ಬಾಡಿ ಫೋಟೋ ವಾಟ್ಸಾಪ್ ಸ್ಟೇಟಸ್‌ ಹಾಕಿದ್ದ ಪಾಪಿ ಬಂಧನ

ಸ್ನೇಹಿತೆಯನ್ನು ಹತ್ಯೆ ಮಾಡಿ, ಮೃತದೇಹದ ದೃಶ್ಯವನ್ನು ವಾಟ್ಸ್‌ಆ್ಯಪ್‌ ಸ್ಟೇಟಸ್‌ ಹಾಕಿಕೊಂಡ ಕಿಡಿಗೇಡಿಯನ್ನು ಚೆನ್ನೈ ಪೊಲೀಸರು ಬಂಧಿಸಿದ್ದಾರೆ. ಕೃತ್ಯವೆಸಗಿದಾತನನ್ನು ಆಶಿಕ್‌ ಎಂದು ಗುರುತಿಸಲಾಗಿದೆ.

ಚೆನ್ನೈ: ಸ್ನೇಹಿತೆಯನ್ನು ಹತ್ಯೆ ಮಾಡಿ, ಮೃತದೇಹದ ದೃಶ್ಯವನ್ನು ವಾಟ್ಸ್‌ಆ್ಯಪ್‌ ಸ್ಟೇಟಸ್‌ ಹಾಕಿಕೊಂಡ ಕಿಡಿಗೇಡಿಯನ್ನು ಚೆನ್ನೈ ಪೊಲೀಸರು ಬಂಧಿಸಿದ್ದಾರೆ. ಕೃತ್ಯವೆಸಗಿದಾತನನ್ನು ಆಶಿಕ್‌ ಎಂದು ಗುರುತಿಸ ಲಾಗಿದೆ.

ತಮಿಳುನಾಡಿನಲ್ಲಿ ವ್ಯಕ್ತಿಯೊಬ್ಬ, ತನ್ನ ಪ್ರಿಯತಮೆಯನ್ನು ಕೊಂದು, ಆಕೆಯ ಶವದ ಫೋಟೊವನ್ನು ವಾಟ್ಸ್‌ಆ್ಯಪ್ ಸ್ಟೇಟಸ್‌ಗೆ ಅಪ್‌ಡೇಟ್‌ ಮಾಡುವ ಮೂಲಕ ವಿಕೃತಿ ಮೆರೆದಿದ್ದಾನೆ.

ಮೃತ ಯುವತಿ ಕಾಲೇಜೊಂದರಲ್ಲಿ ನರ್ಸಿಂಗ್‌ ಅಧ್ಯಯನ ಮಾಡುತ್ತಿದ್ದಳು. ಐದು ವರ್ಷಗಳಿಂದ ಇಬ್ಬರು ಸ್ನೇಹಿತರಾಗಿದ್ದರು. ಮೂರು ದಿನಗಳಿಂದ ಯುವತಿ ತರಗತಿಗೆ ಹಾಜರಾಗದೇ ಇದ್ದದ್ದು ಆಕೆಯ ಗೆಳತಿಯರಲ್ಲಿ ಸಂಶಯಕ್ಕೆ ಕಾರಣವಾಯಿತು. ಈ ಬಗ್ಗೆ ಆಶಿಕ್‌ ಬಳಿ ವಿಚಾರಿಸಿದ್ದರು.

ದ್ವಿತೀಯ ವರ್ಷದ ನರ್ಸಿಂಗ್‌ ಅಧ್ಯಯನ ಮಾಡುತ್ತಿರುವ ಯುವತಿ ಹಾಗೂ ಆಶಿಕ್‌ ಕೆಲ ತಿಂಗಳಿಂದ ಪ್ರೀತಿಸುತ್ತಿದ್ದರು. ಕಳೆದ ಮೂರು ದಿನಗಳಿಂದ ಕಾಲೇಜಿಗೆ ಹೋಗದ ಯುವತಿಯು ಆಶಿಕ್‌ ಜತೆ ಹೋಟೆಲ್‌ನಲ್ಲಿ ತಂಗಿದ್ದಳು. ಯುವತಿಯ ಗೆಳತಿಯರು ಗಾಬರಿಗೊಂಡು ಪರಿಶೀಲಿಸಿದಾಗ, ಆಕೆ ಆಶಿಕ್‌ ಜತೆ ಚೆನ್ನೈ ಹೋಟೆಲ್‌ನಲ್ಲಿರುವುದು ಗೊತ್ತಾಗಿತ್ತು.

ಬಾಯ್‌ಫ್ರೆಂಡ್‌ ಜತೆ ಇದ್ದಾಳೆ ಎಂದು ಅವರೂ ಸುಮ್ಮನಾಗಿದ್ದರು. ಆದರೆ, ಆಶಿಕ್‌ ಹೋಟೆಲ್‌ನಲ್ಲಿ ಯುವತಿಯನ್ನು ಕೊಲೆ ಮಾಡಿದ್ದಾನೆ. ಯಾವಾಗ ಯುವತಿಯ ಶವದ ಫೋಟೊ ವಾಟ್ಸ್‌ಆ್ಯಪ್ ಸ್ಟೇಟಸ್‌ನಲ್ಲಿ ಕಾಣಿಸಿತೋ, ಯುವತಿಯರು ಗಾಬರಿಗೊಂಡಿದ್ದಾರೆ.

ಹೋಟೆಲ್‌ನಲ್ಲಿ ಯುವತಿ ಜತೆ ಜಗಳ ನಡೆದಿದ್ದು, ಕೋಪದಲ್ಲಿ ಕೊಲೆ ಮಾಡಿದೆ ಎಂಬುದಾಗಿ ಬಂಧಿತ ಆಶಿಕ್‌ ತಪ್ಪೊಪ್ಪಿಕೊಂಡಿದ್ದಾನೆ ಎಂದು ಪೊಲೀಸ್‌ ಮೂಲಗಳು ತಿಳಿಸಿವೆ. ನಾನು ಬೇರೊಂದು ಯುವತಿ ಜತೆ ಸಂಬಂಧ ಇಟ್ಟುಕೊಂಡಿದ್ದೇನೆ ಎಂದು ಆಕೆ ಆರೋಪಿಸಿದಳು. ಇದೇ ವೇಳೆ ಇಬ್ಬರ ಮಧ್ಯೆ ಜಗಳ ನಡೆಯಿತು. ಆಗ ನಾನು ಟಿ ಶರ್ಟ್‌ನಿಂದ ಆಕೆಯ ಕತ್ತು ಹಿಸುಕಿದೆ” ಎಂಬುದಾಗಿ ತಿಳಿಸಿದ್ದಾನೆ ಎಂದು ಮೂಲಗಳು ತಿಳಿಸಿವೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

TMCಗೆ ಸೆಡ್ಡು ಹೊಡೆದ ಬಂಡಾಯ ಸಂಸದರಿಗೆ ಶಾಕ್‌: 20 ಮಂದಿಗೆ ಲೋಕಸಭಾ ಸಚಿವಾಲಯ ನೋಟಿಸ್‌, 7 ದಿನಗಳೊಳಗೆ ಉತ್ತರಿಸುವಂತೆ ಸೂಚನೆ..!

ಬಿಜೆಪಿ ಸಂಸದೀಯ ಮಂಡಳಿಯಲ್ಲಿ ಮಹತ್ತರ ಬದಲಾವಣೆ ಸಾಧ್ಯತೆ; ನಾಲ್ವರು ಮುಖ್ಯಮಂತ್ರಿಗಳಿಗೆ ಸ್ಥಾನ?

ಇರಾನ್‌ ತೈಲ ವಹಿವಾಟಿಗೆ ಅಮೆರಿಕಾ ಬ್ರೇಕ್: ಭಾರತದ 4 ಕಂಪನಿಗಳು ಕಪ್ಪುಪಟ್ಟಿಗೆ, 3 ಪ್ರಜೆಗಳ ಮೇಲೂ ನಿರ್ಬಂಧ..!

"ಮದುವೆ ಅಂದ್ರೆ ಗುಲಾಮಗಿರಿಯಲ್ಲ, ಮನೆಗೆಲಸ ಮಾಡು-ಅತ್ತೆ-ಮಾವನ ನೋಡ್ಕೋ ಅನ್ನೋಕೆ ಗಂಡನಿಗೆ ಹಕ್ಕಿಲ್ಲ": ಹೈಕೋರ್ಟ್ ಮಹತ್ವದ ತೀರ್ಪು..!

ಬಿಡದಿ ಟೌನ್‌ಶಿಪ್‌ ಯೋಜನೆ: ರೈತರ ಭೂಮಿ ಕಸಿಯಲ್ಲ, denotification ಮಾಡಲ್ಲ- ಸಿಎಂ ಡಿಕೆ. ಶಿವಕುಮಾರ್ ಸ್ಪಷ್ಟನೆ