ಚೆನ್ನೈ: ಮಿಚಾಂಗ್ ಚಂಡಮಾರುತದಿಂದಾಗಿ ನೆರೆ ಪ್ರವಾಹಕ್ಕೆ ಸಿಲುಕಿರುವ ಚೆನ್ನೈನಲ್ಲಿ ಪರಿಹಾರ ಕಾರ್ಯಗಳಲ್ಲಿ ಸ್ವಯಂಪ್ರೇರಿತವಾಗಿ ಭಾಗವಹಿಸುವ ಎನ್‌ಜಿಒ, ಸ್ವಯಂಸೇವಕರನ್ನು ಸಂಘಟಿಸಲು ಸಹಾಯ ಕೇಂದ್ರವನ್ನು ತಮಿಳುನಾಡು ಸರ್ಕಾರ ಸ್ಥಾಪಿಸಿದೆ.
ಮಳೆಯಿಂದಾಗುತ್ತಿರುವ ರಕ್ಷಣಾ ಮತ್ತು ಪರಿಹಾರ ಕಾರ್ಯಗಳಲ್ಲಿ ತಮ್ಮನ್ನು ತೊಡಗಿಸಿಕೊಳ್ಳಲು ಇಚ್ಛಿಸುವ ಸರ್ಕಾರೇತರ ಸಂಸ್ಥೆಗಳು (ಎನ್‌ಜಿಒ) ಮತ್ತು ಸ್ವಯಂಸೇವಕರನ್ನು ಸಮನ್ವಯಗೊಳಿಸಲು ತಮಿಳುನಾಡು ಸರ್ಕಾರವು ಎಜಿಲಾಗಮ್‌ನಲ್ಲಿರುವ ರಾಜ್ಯ ವಿಪತ್ತು ನಿರ್ವಹಣಾ ನಿಯಂತ್ರಣ ಕೊಠಡಿಯಲ್ಲಿ ವಿಶೇಷ ಸಹಾಯ ಕೇಂದ್ರವನ್ನು ಸ್ಥಾಪಿಸಿದೆ.
ವ್ಯಕ್ತಿಗಳು/ಸ್ವಯಂಸೇವಕ ತಂಡಗಳು/ಸಂಸ್ಥೆಗಳು ತಮ್ಮ ವಿವರಗಳನ್ನು ಹೆಲ್ಪ್ ಡೆಸ್ಕ್‌ನಲ್ಲಿ ನೋಂದಾಯಿಸಿಕೊಳ್ಳಬಹುದು ಎಂದು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಮನವಿ ಮಾಡಿದ್ದಾರೆ.
ಈ ಕೆಳಗಿನ ದೂರವಾಣಿ ಸಂಖ್ಯೆಗಳ ಮೂಲಕ ಅಧಿಕಾರಿಗಳನ್ನು ಸಂಪರ್ಕಿಸಬಹುದು
ಶೇಕ್ ಮನ್ಸೂರ್, ಸಹಾಯಕ ಆಯುಕ್ತ (9791149789); ಬಾಬು, ಸಹಾಯಕ ಆಯುಕ್ತರು (9445461712); ಸುಬ್ಬುರಾಜ್, ಸಹಾಯಕ ಆಯುಕ್ತ (9895440669); ಮತ್ತು ಸಾಮಾನ್ಯ ಸಂಪರ್ಕ ಸಂಖ್ಯೆ (7397766651). ಸರ್ಕಾರದಲ್ಲಿ ನೋಂದಾಯಿಸಿದ ನಂತರ, ಎನ್‌ಜಿಒಗಳು ಮತ್ತು ಸ್ವಯಂಸೇವಕರನ್ನು ಅಗತ್ಯವಿರುವ ಸ್ಥಳಗಳಿಗೆ ನಿಯೋಜಿಸಲಾಗುವುದು.
ಇದನ್ನೂ ಓದಿ: ಮಿಚಾಂಗ್ ಚಂಡಮಾರುತ: ತಮಿಳು ನಾಡಿನಲ್ಲಿ ಮೃತರ ಸಂಖ್ಯೆ 17ಕ್ಕೆ ಏರಿಕೆ; ವಾಯು ಸಮೀಕ್ಷೆ, ತಗ್ಗಿದ ಮಳೆಯ ಅಬ್ಬರ
ಮಿಚಾಂಗ್ ಚಂಡಮಾರುತವು ಚೆನ್ನೈ, ತಿರುವಳ್ಳೂರು, ಕಾಂಚೀಪುರಂ ಮತ್ತು ಚೆಂಗಲ್ಪಟ್ಟು ಜಿಲ್ಲೆಗಳಲ್ಲಿ ರಕ್ಕಸ ಮಳೆಯಾಗಿದ್ದು ನೆರೆ ಪರಿಸ್ಥಿತಿ ನಿರ್ಮಾಣವಾಗಿದೆ. ಅಗತ್ಯವಿರುವವರಿಗೆ ಪರಿಹಾರ ನೆರವು ನೀಡಲು ಸರ್ಕಾರವು ಹಲವು ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ. ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ ಮತ್ತು ರಾಜ್ಯ ವಿಪತ್ತು ನಿರ್ವಹಣಾ ಪಡೆ, ಅಗ್ನಿಶಾಮಕ ಮತ್ತು ರಕ್ಷಣಾ ಸೇವೆಗಳ ಸಿಬ್ಬಂದಿಗಳು ಪರಿಹಾರ ಮತ್ತು ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿದ್ದಾರೆ. ಪ್ರವಾಹದ ನೀರಿನಿಂದ ಆವೃತವಾಗಿರುವ ಪ್ರದೇಶಗಳಲ್ಲಿ ಸಿಲುಕಿರುವ ಜನರನ್ನು ದೋಣಿಗಳು ಮತ್ತು ಇತರ ವಾಹನಗಳ ಮೂಲಕ ರಕ್ಷಿಸಲಾಗುತ್ತಿದೆ.