ಧರಂಬೀರ್ ಸಿಂಗ್ 
ದೇಶ

'ಲಿವ್ ಇನ್ ರಿಲೇಶನ್ ಶಿಪ್' ಅಪಾಯಕಾರಿ, ಅದರ ವಿರುದ್ಧ ಕಾನೂನು ಜಾರಿಗೆ ತರಬೇಕು: ಬಿಜೆಪಿ ಸಂಸದ 

ಲಿವ್-ಇನ್ ಸಂಬಂಧ ಅತ್ಯಂತ "ಅಪಾಯಕಾರಿ ಕಾಯಿಲೆ" ಎಂದ ಹರಿಯಾಣದ ಬಿಜೆಪಿ ಸಂಸದ ಧರಂಬೀರ್ ಸಿಂಗ್ ಅವರು, ಅದನ್ನು ಸಮಾಜದಿಂದ ನಿರ್ಮೂಲನೆ ಮಾಡಬೇಕಾಗಿದೆ ಮತ್ತು ಅದರ ವಿರುದ್ಧ ಕಾನೂನು ರೂಪಿಸಬೇಕು ಎಂದು ಗುರುವಾರ...

ನವದೆಹಲಿ: ಲಿವ್-ಇನ್ ಸಂಬಂಧ ಅತ್ಯಂತ "ಅಪಾಯಕಾರಿ ಕಾಯಿಲೆ" ಎಂದ ಹರಿಯಾಣದ ಬಿಜೆಪಿ ಸಂಸದ ಧರಂಬೀರ್ ಸಿಂಗ್ ಅವರು, ಅದನ್ನು ಸಮಾಜದಿಂದ ನಿರ್ಮೂಲನೆ ಮಾಡಬೇಕಾಗಿದೆ ಮತ್ತು ಅದರ ವಿರುದ್ಧ ಕಾನೂನು ರೂಪಿಸಬೇಕು ಎಂದು ಗುರುವಾರ ಕೇಂದ್ರ ಸರ್ಕಾರವನ್ನು ಒತ್ತಾಯಿಸಿದರು.

ಇಂದು ಲೋಕಸಭೆಯಲ್ಲಿ ಶೂನ್ಯವೇಳೆಯಲ್ಲಿ ಈ ವಿಷಯ ಪ್ರಸ್ತಾಪಿಸಿದ ಧರಂಬೀರ್ ಸಿಂಗ್, ಪ್ರೇಮ ವಿವಾಹಗಳಲ್ಲಿ ವಿಚ್ಛೇದನದ ಪ್ರಮಾಣ ಹೆಚ್ಚಿದ್ದು, ಮದುವೆಗೆ ವಧುವರರ ಪೋಷಕರ ಒಪ್ಪಿಗೆಯನ್ನು ಕಡ್ಡಾಯಗೊಳಿಸಬೇಕು ಎಂದರು.

"ನಾನು ಅತ್ಯಂತ ಗಂಭೀರವಾದ ವಿಷಯವನ್ನು ಸರ್ಕಾರ ಮತ್ತು ಸಂಸತ್ತಿನ ಗಮನಕ್ಕೆ ತರಲು ಬಯಸುತ್ತೇನೆ. ಭಾರತೀಯ ಸಂಸ್ಕೃತಿಯು 'ವಸುಧೈವ ಕುಟುಂಬಕಮ್(ಜಗತ್ತು ಒಂದು ಕುಟುಂಬ) ಮತ್ತು ಸಹೋದರತ್ವದ ತತ್ವಶಾಸ್ತ್ರಕ್ಕೆ ಹೆಸರುವಾಸಿಯಾಗಿದೆ. ನಮ್ಮ ಸಾಮಾಜಿಕ ರಚನೆಯು ಪ್ರಪಂಚದ ಇತರರಿಗಿಂತ ಭಿನ್ನವಾಗಿದೆ. ನಮ್ಮ ವೈವಿಧ್ಯತೆಯಲ್ಲಿ ಏಕತೆಯಿಂದ ಇಡೀ ಜಗತ್ತು ಪ್ರಭಾವಿತವಾಗಿದೆ ಎಂದು ಭಿವಾನಿ-ಮಹೇಂದ್ರಗಢ ಸಂಸದ ಹೇಳಿದರು.

ಭಾರತವು ಅರೇಂಜ್ಡ್ ಮ್ಯಾರೇಜ್‌ಗಳ ಸುದೀರ್ಘ ಸಂಪ್ರದಾಯವನ್ನು ಹೊಂದಿದೆ. ಸಮಾಜದ ದೊಡ್ಡ ವರ್ಗವು ಇಂದಿಗೂ ಪೋಷಕರು ಅಥವಾ ಸಂಬಂಧಿಕರು ಏರ್ಪಡಿಸುವ ಮದುವೆಗಳಿಗೆ ಆದ್ಯತೆ ನೀಡುತ್ತದೆ ಎಂದು ಸಿಂಗ್ ಹೇಳಿದರು.

"ಮದುವೆಯು ಏಳು ತಲೆಮಾರುಗಳವರೆಗೆ ಮುಂದುವರಿಯುವ ಪವಿತ್ರ ಸಂಬಂಧವೆಂದು ಪರಿಗಣಿಸಲಾಗಿದೆ. ಭಾರತದಲ್ಲಿ ವಿಚ್ಛೇದನ ಪ್ರಮಾಣ ಸುಮಾರು ಶೇ. 1.1 ರಷ್ಟಿದೆ. ಆದರೆ ಅಮೆರಿಕದಲ್ಲಿ ಶೇಕಡಾ 40 ರಷ್ಟಿದೆ. ಅರೇಂಜ್ಡ್ ಮದುವೆಗಳಲ್ಲಿ ವಿಚ್ಛೇದನದ ಪ್ರಮಾಣ ತುಂಬಾ ಕಡಿಮೆ ಎಂದು ಗಮನಿಸಲಾಗಿದೆ. ಆದರೆ, ಇತ್ತೀಚೆಗೆ ವಿಚ್ಛೇದನದ ಪ್ರಮಾಣ ಸಾಕಷ್ಟು ಹೆಚ್ಚಳವಾಗಿದೆ ಮತ್ತು ಇದಕ್ಕೆ ಮುಖ್ಯ ಕಾರಣ ಪ್ರೇಮ ವಿವಾಹಗಳು" ಎಂದು ಸಿಂಗ್ ಲೋಕಸಭೆಗೆ ತಿಳಿಸಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ನನ್ನ-ಕಾಂಗ್ರೆಸ್ ಮಧ್ಯೆ ಭಕ್ತ- ಭಗವಂತನ ಸಂಬಂಧ ಇದೆ, RSS ಗೀತೆ ಹಾಡಿದ್ದಕ್ಕೆ ನೋವಾಗಿದ್ದರೆ ಕ್ಷಮೆ ಕೇಳುತ್ತೇನೆ: ಡಿಕೆ ಶಿವಕುಮಾರ್

ಭಾರತದ ಮೇಲೆ ಶೇ.50 ರಷ್ಟು ಸುಂಕ ನಾಳೆ ಜಾರಿ: ಕರಡು ಸೂಚನೆ ಹೊರಡಿಸಿದ ಅಮೆರಿಕ

ಪದಕ ಹಾಕಿಸಿಕೊಳ್ಳಲು ನಿರಾಕರಿಸಿದ DMK ಸಚಿವನ ಪುತ್ರ, BJP ನಾಯಕ Annamalai ಹೇಳಿದ್ದೇನು? Video

ಧರ್ಮಸ್ಥಳ ಬುರುಡೆ ಕೇಸು: ಮಹೇಶ್ ತಿಮರೋಡಿ ನಿವಾಸದಲ್ಲಿ ಆರೋಪಿ ಚಿನ್ನಯ್ಯನ ಮೊಬೈಲ್ ಪತ್ತೆ

Gaza Hospital Strike: ಹಮಾಸ್ ಸೋಲಿಸುವುದಷ್ಟೇ ನಮ್ಮ ಗುರಿ, ನಾಗರೀಕರನ್ನು ಗೌರವಿಸುತ್ತೇವೆ; ದಾಳಿ ಕುರಿತು ಮೊದಲ ಬಾರಿಗೆ ಇಸ್ರೇಲ್ ವಿಷಾದ

SCROLL FOR NEXT