ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದೇಶ

Rape: ಚಲಿಸುತ್ತಿದ್ದ ರೈಲಿನಲ್ಲಿಯೇ 30 ವರ್ಷದ ಯುವತಿ ಮೇಲೆ ಅತ್ಯಾಚಾರ

ಮಧ್ಯಪ್ರದೇಶದಲ್ಲಿ ಚಲಿಸುತ್ತಿದ್ದ ರೈಲಿನಲ್ಲಿಯೇ 30 ವರ್ಷದ ಯುವತಿ ಮೇಲೆ ಅತ್ಯಾಚಾರ ಮಾಡಿರುವ ಘಟನೆ ಮಂಗಳವಾರ ವರದಿಯಾಗಿದೆ.

ಅತ್ಯಾಚಾರ (ಸಾಂದರ್ಭಿಕ ಚಿತ್ರ)
Srinivasa Murthy VN
Updated On : 12 Dec 2023, 12:34 pm

ಸಾತ್ನಾ: ಮಧ್ಯಪ್ರದೇಶದಲ್ಲಿ ಚಲಿಸುತ್ತಿದ್ದ ರೈಲಿನಲ್ಲಿಯೇ 30 ವರ್ಷದ ಯುವತಿ ಮೇಲೆ ಅತ್ಯಾಚಾರ ಮಾಡಿರುವ ಘಟನೆ ಮಂಗಳವಾರ ವರದಿಯಾಗಿದೆ.

ಮಧ್ಯಪ್ರದೇಶದ ಸಾತ್ನಾ ಜಿಲ್ಲೆಯ ಕಟ್ನಿಯಲ್ಲಿ ಈ ಘಟನೆ ನಡೆದಿದ್ದು, ಚಲಿಸುತ್ತದ್ದ ಮೆಮು ರೈಲಿನಲ್ಲಿ 30 ವರ್ಷದ ಯುವತಿ ಮೇಲೆ ಅತ್ಯಾಚಾರ ಎಸಗಲಾಗಿದೆ ಎಂದು ಸರ್ಕಾರಿ ರೈಲ್ವೆ ಪೊಲೀಸ್ (ಜಿಆರ್​ಪಿ ) ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಭಾನುವಾರ ಸಂಜೆ ಸತ್ನಾ ಮತ್ತು ಕಟ್ನಿ ವಿಭಾಗಗಳ ನಡುವಿನ ಪಕಾರಿಯಾ ನಿಲ್ದಾಣದಲ್ಲಿ ಮಹಿಳೆ ಜಬಲ್ಪುರ್-ರೇವಾ ಮೆಮು ರೈಲನ್ನು ಹತ್ತಿದ್ದರು. ಮಾರ್ಗ ಮಧ್ಯದಲ್ಲಿ ಆರೋಪಿಯು ಅತ್ಯಾಚಾರ ಮಾಡಿದ್ದ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಇದನ್ನೂ ಓದಿ: ನಾಗ್ಪುರ: ಮೊಬೈಲ್ ಫೋನ್ ಕೊಡದ್ದಕ್ಕೆ ಆತ್ಮಹತ್ಯೆಗೆ ಶರಣಾದ ಬಾಲಕಿ

Advertisement

Advertisement

ಘಟನೆಗೆ ಸಂಬಂಧಿಸಿದಂತೆ ಬಾಂಡಾ (ಉತ್ತರ ಪ್ರದೇಶ) ನಿವಾಸಿ ಪಂಕಜ್ ಕುಶ್ವಾಹ (23) ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ಸತ್ನಾ ಜಿಆರ್ಪಿ ಠಾಣೆಯ ಉಸ್ತುವಾರಿ ಎಲ್ ಪಿ ಕಶ್ಯಪ್ ಆರೋಪಿಯ ಬಂಧನ ಮಾಹಿತಿ ನೀಡಿದ್ದು, ಪಂಕಜ್​ ಯುವತಿಯನ್ನು ರೈಲಿನ ಶೌಚಾಲಯದಲ್ಲಿ ಅತ್ಯಾಚಾರ ಮಾಡಿದ್ದ. ಅತ್ಯಾಚಾರದ ಬಳಿಕ ತಪ್ಪಿಸಿಕೊಂಡು ಹೊರಗೆ ಬಂದಿದ್ದ ಆಕೆ ಸತ್ನಾ ನಿಲ್ದಾಣದ ಜಿಆರ್​ಪಿಗೆ ಮಾಹಿತಿ ನೀಡಿದ್ದಳು. ನಂತರ ವ್ಯಕ್ತಿಯನ್ನು ಬಂಧಿಸಲು ತಂಡವನ್ನು ಕಳುಹಿಸಲಾಯಿತು ಎಂದು ಅವರು ಹೇಳಿದರು.

ಯುವತಿ ದೂರು ನೀಡುತ್ತಿದ್ದಂತೆ ಬೆದರಿದ ಅರೋಪಿ ರೈಲಿನ ಶೌಚಾಲಯದಲ್ಲಿಯೇ ಬಾಗಿಲು ಹಾಕಿ ಬಚ್ಚಿಟ್ಟುಕೊಂಡಿದ್ದ. ರೈಲು ರೇವಾ ತಲುಪಿದಾಗ ಅಧಿಕಾರಿಗಳು ಶೌಚಾಲಯದ ಬೀಗ ಮುರಿದು ಆತನನ್ನು ಬಂಧಿಸಿದ್ದಾರೆ. ಆರೋಪಿಗಳ ಕ್ರಿಮಿನಲ್ ದಾಖಲೆಯ ಬಗ್ಗೆ ತನಿಖೆ ನಡೆಸಲಾಗುತ್ತಿದೆ ಎಂದು ಉಪ ಪೊಲೀಸ್ ವರಿಷ್ಠಾಧಿಕಾರಿ (ಡಿಎಸ್ಪಿ) ಸಾರಿಕಾ ಪಾಂಡೆ ಹೇಳಿದ್ದಾರೆ.

ಇದನ್ನೂ ಓದಿ: ಮಹಾರಾಷ್ಟ್ರ: ರ‍್ಯಾಗಿಂಗ್ ನಿಂದ ಬೇಸತ್ತು ವೈದ್ಯಕೀಯ ವಿದ್ಯಾರ್ಥಿ ಆತ್ಮಹತ್ಯೆಗೆ ಶರಣು

ಹೇಗಾಯ್ತು ಘಟನೆ 
ಪ್ಯಾಸೆಂಜರ್ ರೈಲಿನಲ್ಲಿ ಪ್ರಯಾಣಿಸುತ್ತಿದ್ದ ಯುವತಿ ಪಕಾರಿಯ ರೈಲು ನಿಲ್ದಾಣದಲ್ಲಿ ಪಕ್ಕದಲ್ಲಿ ನಿಂತಿದ್ದ ವಿಶೇಷ ರೈಲಿನ ಒಳಗೆ ಶೌಚಕ್ಕಾಗಿ ಹೋಗಿದ್ದರು. ಆಕೆಯನ್ನು ಹಿಂಬಾಲಿಸಿಕೊಂಡು ಬಂದ ಕಮಲೇಶ್ ನಿರ್ಜನವಾಗಿದ್ದ ಎಸಿ ಕೋಚ್ ಬಾಗಿಲು ಹಾಕಿ ಅತ್ಯಾಚಾರವೆಸಗಿದ್ದಾನೆ. 40 ಕಿಲೋಮೀಟರ್ ವರೆಗೂ ರೈಲು ಚಲಿಸಿದ್ದು, ಸತ್ನಾ ನಿಲ್ದಾಣದಲ್ಲಿ ನಿಂತಾಗ ಯುವತಿ ರೈಲಿನಿಂದ ಹಾರಿ ರೈಲ್ವೆ ಪೊಲೀಸ್ ಠಾಣೆಗೆ ತೆರಳಿ ವಿಷಯವನ್ನು ವಿವರಿಸಿದ್ದಾರೆ. ಕೂಡಲೇ ರೈಲ್ವೆ ಪೊಲೀಸ್ ಒಬ್ಬರು ವಿಶೇಷ ರೈಲಿನ ಎಸಿ ಕೋಚ್ ಏರಿದ್ದು, ಈ ಸಂದರ್ಭದಲ್ಲಿ ಕಮಲೇಶ್, ಬಾಗಿಲು ಹಾಕಿಕೊಂಡು ಅಡಗಿ ಕುಳಿತಿದ್ದಾನೆ. ಅಷ್ಟರೊಳಗೆ ಇತರೆ ನಿಲ್ದಾಣಗಳ ರೈಲ್ವೆ ಪೊಲೀಸರಿಗೂ ಮಾಹಿತಿ ತಲುಪಿದ್ದು, ಅಂತಿಮವಾಗಿ ಎಸಿ ಕೋಚ್ ಬಾಗಿಲು ಮುರಿದು ಆರೋಪಿಯನ್ನು ಬಂಧಿಸಲಾಗಿದೆ.
 

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement