ದೇಶ

ಸಂಸತ್ ಭದ್ರತಾ ಲೋಪ: ದೆಹಲಿಯಲ್ಲಿ ಮಾಸ್ಟರ್ ಮೈಂಡ್ ಲಲಿತ್ ಝಾ ಬಂಧನ

Lingaraj Badiger

ನವದೆಹಲಿ: ಸಂಸತ್ತಿಗೆ ನುಗ್ಗಿ ಲೋಕಸಭೆ ಕಲಾಪದ ವೇಳೆ ಹೊಗೆ ಬಾಂಬ್ ಸಿಡಿಸಿದ ಪ್ರಕರಣದ ತನಿಖೆ ನಡೆಸುತ್ತಿರುವ ದೆಹಲಿ ಪೊಲೀಸರು ಗುರುವಾರ ತಡರಾತ್ರಿ ಮಾಸ್ಟರ್ ಮೈಂಡ್ ಲಲಿತ್ ಝಾ ನನ್ನು ದೆಹಲಿಯಲ್ಲಿ ಬಂಧಿಸಿದ್ದಾರೆ.

ಲೋಕಸಭೆ ಕಲಾಪದ ವೇಳೆ ಹೊಗೆಬಾಂಬ್ ಸಿಡಿಸುವ ಸಂಚನ್ನು ಲಲಿತ್ ಝಾ ಸೂಚನೆಯಂತೆ ಆರೋಪಿಗಳು ರೂಪಿಸಿದ್ದರೆಂದು ಪ್ರಾಥಮಿಕ ತನಿಖೆಗಳಿಂದ ತಿಳಿದುಬಂದಿದೆ.

ಸಂಸತ್ತಿನ ಒಳಗೆ ಪ್ರವೇಶಿಸಲು ಸಾಧ್ಯವಾಗದ ಲಲಿತ್ ಝಾ ಹಾಗೂ ಇನ್ನಿಬ್ಬರು ಆರೋಪಿಗಳಾದ ನೀಲಂ ಮತ್ತು ಅಮೋಲ್ ಶಿಂಧೆ ಸಂಸತ್‌ ಭವನದ ಹೊರಗೆ ಹೊಗೆಬಾಂಬ್ ಸಿಡಿಸುವುದು ಹಾಗೂ ಘೋಷಣೆಗಳನ್ನು ಕೂಗುವ ದೃಶ್ಯವನ್ನು ಚಿತ್ರೀಕರಿಸಿ ಕೋಲ್ಕತಾ ಮೂಲದ ಎನ್ ಜಿ ಒ ಸಂಸ್ಥಾಪಕರೊಂದಿಗೆ ವೀಡಿಯೊ ಹಂಚಿಕೊಂಡಿದ್ದಾನೆ ಎಂದು ತಿಳಿದುಬಂದಿದೆ.

ಝಾ ಕೋಲ್ಕತ್ತಾದ ನಿವಾಸಿಯಾಗಿದ್ದು, ಅಲ್ಲಿ ಮಕ್ಕಳಿಗೆ ಕೋಚಿಂಗ್ ತರಗತಿಗಳನ್ನು ನಡೆಸಲು ಕೊಠಡಿಯನ್ನು ಬಾಡಿಗೆಗೆ ಪಡೆದಿದ್ದರು.

ಕೋಲ್ಕತ್ತಾದ ಎಲೆಕ್ಟ್ರಿಕಲ್ ಅಂಗಡಿಯೊಂದರಲ್ಲಿ ಕೆಲಸ ಮಾಡುತ್ತಿರುವ ಝಾ ಅವರ ಸಹೋದರ ಸೋನು ಅವರು, ಮೂರು ದಿನಗಳ ಹಿಂದೆ ತಮ್ಮ ಸಹೋದರನೊಂದಿಗೆ ಮಾತನಾಡಿರುವುದಾಗಿ ತಿಳಿಸಿದ್ದರು. "ಅವರು ಘಟನೆಯಲ್ಲಿ ಹೇಗೆ ಭಾಗಿಯಾಗಿದ್ದಾರೆಂದು ನನಗೆ ತಿಳಿದಿಲ್ಲ ಎಂದು ಹೇಳಿದ್ದಾರೆ.

SCROLL FOR NEXT