ದೇಶ

ಅರಬ್ಬಿ ಸಮುದ್ರದಲ್ಲಿ ಮಾಲ್ಟಾ ನೌಕೆ ಅಪಹರಣ: ನೆರವಿಗೆ ಭಾರತೀಯ ನೌಕಾಪಡೆಯ ಯುದ್ಧನೌಕೆ ನಿಯೋಜನೆ

Srinivasamurthy VN

ನವದೆಹಲಿ: ಅರಬ್ಬಿ ಸಮುದ್ರದಲ್ಲಿ ಮಾಲ್ಟಾ ನೌಕೆ ಕಡಲ್ಗಳ್ಳರಿಂದ ಅಪಹರಣವಾಗಿದ್ದು, ಅದರ ನೆರವಿಗೆ ಭಾರತೀಯ ನೌಕಾಪಡೆಯ ಯುದ್ಧನೌಕೆಯೊಂದನ್ನು ನಿಯೋಜನೆ ಮಾಡಲಾಗಿದೆ.

ಅರಬ್ಬಿ ಸಮುದ್ರದಲ್ಲಿ ಅಪಹರಣಕ್ಕೊಳಗಾಗಿರುವ ವಾಣಿಜ್ಯ ಮಾಲ್ಟಾ ಹಡಗು ಎಂವಿ ರೂಯೆನ್ ಅನ್ನು ರಕ್ಷಿಸಲು ಭಾರತೀಯ ನೌಕಾಪಡೆ ಮುಂದಾಗಿದೆ. ಮೇಡೇ ಎಚ್ಚರಿಕೆಯನ್ನು ಸ್ವೀಕರಿಸಿದ ನಂತರ, ಭಾರತೀಯ ನೌಕಾಪಡೆಯು ತಕ್ಷಣವೇ ತನ್ನ ಯುದ್ಧನೌಕೆಯನ್ನು ಮಾಲ್ಟಾನೌಕೆ ಎಂವಿ ರೂಯೆನ್ ಸಹಾಯ ಮಾಡಲು ನಿರ್ದೇಶಿಸಿತು. ಗಸ್ತಿಗೆ ನಿಯೋಜಿಸಲಾಗಿದ್ದ ಭಾರತೀಯ ನೌಕಾಪಡೆಯ ಯುದ್ಧನೌಕೆಯನ್ನು ಕಡಲ ಗಸ್ತು ವಿಮಾನ ಮತ್ತು ಕಡಲ್ಗಳ್ಳತನ ನಿಗ್ರಹಕ್ಕೆ ತಕ್ಷಣವೇ ತಿರುಗಿಸಲಾಗಿದೆ.

18 ಸಿಬ್ಬಂದಿಗಳನ್ನು ಹೊಂದಿದ್ದ ಅಪಹರಣಕ್ಕೊಳಗಾದ ಹಡಗಿನಿಂದ ಯುಕೆಎಂಟಿಒ ಪೋರ್ಟಲ್, ಡಿಸೆಂಬರ್ 14 ರಂದು ಮೇಡೇ ಸಂದೇಶವನ್ನು ಕಳುಹಿಸಿತ್ತು. ಹಡಗಿನಲ್ಲಿ ಆರು ಮಂದಿ ಅಪರಿಚಿತ ವ್ಯಕ್ತಿಗಳು ಅನಧಿಕೃತವಾಗಿ ಏರಿದ್ದರು. ಕೂಡಲೇ ಹಡಗಿನಿಂದ ಅಪಹರಣದ ಸಂದೇಶ ಬಂದಿದೆ ಎನ್ನಲಾಗಿದೆ. 

ಮಾಹಿತಿ ಬಂದ ಕೂಡಲೇ ತ್ವರಿತವಾಗಿ ಪ್ರತಿಕ್ರಿಯಿಸಿದ ಭಾರತೀಯ ನೌಕಾಪಡೆಯು ತನ್ನ ನೌಕಾ ಸಾಗರ ಗಸ್ತು ವಿಮಾನವನ್ನು ಕಣ್ಗಾವಲಿಗೆ ನಿಯೋಜಿಸಿದೆ. ಪ್ರದೇಶ ಮತ್ತು ಅದರ ಯುದ್ಧನೌಕೆ ಗಲ್ಫ್ ಅಡೆನ್‌ನಲ್ಲಿ ಆಂಟಿ ಪೈರಸಿ ಗಸ್ತು ತಿರುಗುತ್ತದೆ ಮತ್ತು ಎಂವಿ ರುಯೆನ್ ಅನ್ನು ಪತ್ತೆಹಚ್ಚಲು ಮತ್ತು ಸಹಾಯ ಮಾಡಲು ಭಾರತೀಯ ನೌಕಾಪಡೆ ನೌಕೆ ರವಾನಿಸಿದೆ ಎಂದು ತನ್ನ ಹೇಳಿಕೆಯಲ್ಲಿ ತಿಳಿಸಿದೆ.

SCROLL FOR NEXT