ದೇಶ

ಜಮ್ಮು ಕಾಶ್ಮೀರ ಪೊಲೀಸ್ ಮೇಲೆ ದಾಳಿ, ಮೂವರು 'ಹೈಬ್ರಿಡ್' ಉಗ್ರರ ಬಂಧನ- ಡಿಜಿಪಿ

Nagaraja AB

ಶ್ರೀನಗರ: ಜಮ್ಮು- ಮತ್ತು ಕಾಶ್ಮೀರದ ಬೆಮಿನಾ ಪ್ರದೇಶದಲ್ಲಿ ಕಳೆದ ವಾರ ಪೊಲೀಸರೊಬ್ಬರ ಮೇಲೆ ನಡೆದ ದಾಳಿಯಲ್ಲಿ ಭಾಗಿಯಾಗಿದ್ದ ಮೂವರು 'ಹೈಬ್ರಿಡ್' ಭಯೋತ್ಪಾದಕರನ್ನು ಬಂಧಿಸಲಾಗಿದೆ ಎಂದು ಜಮ್ಮು ಮತ್ತು ಕಾಶ್ಮೀರದ ಪೊಲೀಸ್ ಮಹಾನಿರ್ದೇಶಕ ಆರ್‌ಆರ್ ಸ್ವೈನ್ ಭಾನುವಾರ ತಿಳಿಸಿದ್ದಾರೆ.

ಕಾನ್‌ಸ್ಟೆಬಲ್ ಮೊಹಮ್ಮದ್ ಹಫೀಜ್ ಚಾಕ್ಅವರು  ಡಿಸೆಂಬರ್ 9 ರಂದು ಮನೆಗೆ ಮರಳುತ್ತಿದ್ದಾಗ ಅವರ ದಾಳಿ ನಡೆದಿತ್ತು. ಪಾಕಿಸ್ತಾನ ಮೂಲದ ಭಯೋತ್ಪಾದಕ ಅರ್ಜುಮಂಡ್ ಅಲಿಯಾಸ್ ಹಮ್ಜಾ ಬುರ್ಹಾನ್ ಅವರು ದಾಳಿ ನಡೆಸಲು ಸ್ಥಳೀಯ ಮಾಸ್ಟರ್ ಮೈಂಡ್ ಡ್ಯಾನಿಶ್ ಅಹ್ಮದ್ ಮಲ್ಲಾ ಅವರೊಂದಿಗೆ ಸಂಪರ್ಕ ಸಾಧಿಸಿ ಈ ಸಂಚು ರೂಪಿಸಿದ್ದರು ಎಂದು ಡಿಜಿಪಿ ಹೇಳಿದರು.

ದಾಳಿಯಲ್ಲಿ ಭಾಗಿಯಾದ ಹೈಬ್ರಿಡ್ ಭಯೋತ್ಪಾದಕರನ್ನು ಬಂಧಿಸಲಾಗಿದೆ. "ಕಾನ್‌ಸ್ಟೆಬಲ್ ಮೊಹಮ್ಮದ್ ಹಫೀಜ್ ಚಾಕ್ ಅದೃಷ್ಟವಶಾತ್ ದಾಳಿಯಿಂದ ಬದುಕುಳಿದಿದ್ದಾರೆ. ಅವರು ಮರಳಿ ಬರಲಿ ಎಂದು ನಾವು ಭಾವಿಸುತ್ತೇವೆ ಮತ್ತು ಪ್ರಾರ್ಥಿಸುತ್ತೇವೆ ಎಂದು ಅವರು ತಿಳಿಸಿದರು. 

ಭಯೋತ್ಪಾದಕರು ತಮ್ಮ ಕೆಲಸ ಮಾಡಿದ್ದು, ಆರು ಗುಂಡುಗಳನ್ನು ಹಾರಿಸಿದ್ದಾರೆ. ಇದರಲ್ಲಿ ಮೂರು ಗುಂಡುಗಳಿಗೆ ಪೋಲೀಸರಿಗೆ ತಗುಲಿದ್ದರೆ ಉಳಿದ ಮೂರು ಗುಂಡುಗಳು ಗುರಿಯಿಂದ ತಪ್ಪಿವೆ ಎಂದು ಅವರು ಮಾಹಿತಿ ನೀಡಿದರು. 

SCROLL FOR NEXT