ಸಮರ್ ವಾಯು ರಕ್ಷಣಾ ಕ್ಷಿಪಣಿ ಪರೀಕ್ಷೆ 
ದೇಶ

ಭಾರತೀಯ ವಾಯುಪಡೆಯಿಂದ 'ಸಮರ್' ವಾಯು ರಕ್ಷಣಾ ಕ್ಷಿಪಣಿ ಪ್ರಾಯೋಗಿಕ ಪರೀಕ್ಷೆ ಯಶಸ್ವಿ

ಭಾರತೀಯ ವಾಯುಪಡೆಯು ತನ್ನ ಆಂತರಿಕ ವಿನ್ಯಾಸ ಮತ್ತು ಅಭಿವೃದ್ಧಿ ಪ್ರಯತ್ನದಲ್ಲಿ ಭಾರಿ ಯಶಸ್ಸು ಕಂಡಿದ್ದು, ಸಮರ್ ವಾಯು ರಕ್ಷಣಾ ಕ್ಷಿಪಣಿ ಪ್ರಾಯೋಗಿಕ ಪರೀಕ್ಷೆ ಯಶಸ್ವಿಯಾಗಿ ನಡೆದಿದೆ.

ನವದೆಹಲಿ: ಭಾರತೀಯ ವಾಯುಪಡೆಯು ತನ್ನ ಆಂತರಿಕ ವಿನ್ಯಾಸ ಮತ್ತು ಅಭಿವೃದ್ಧಿ ಪ್ರಯತ್ನದಲ್ಲಿ ಭಾರಿ ಯಶಸ್ಸು ಕಂಡಿದ್ದು, ಸಮರ್ ವಾಯು ರಕ್ಷಣಾ ಕ್ಷಿಪಣಿ ಪ್ರಾಯೋಗಿಕ ಪರೀಕ್ಷೆ ಯಶಸ್ವಿಯಾಗಿ ನಡೆದಿದೆ. ಐಎಎಫ್ ತನ್ನ ಹಳೆಯ ರಷ್ಯಾ ಮೂಲದ ಏರ್-ಟು-ಏರ್ ಕ್ಷಿಪಣಿ ವ್ಯವಸ್ಥೆಯನ್ನು ಬಳಸಿಕೊಂಡು ಭರವಸೆಯ ಪ್ರತೀಕಾರದ ವಾಯು ರಕ್ಷಣಾ ಕ್ಷಿಪಣಿ ವ್ಯವಸ್ಥೆಯನ್ನು  ಅಭಿವೃದ್ಧಿಪಡಿಸಿದೆ.

"ಭಾರತೀಯ ವಾಯುಪಡೆಯು ಇತ್ತೀಚಿಗೆ ಸೂರ್ಯಲಂಕಾ ವಾಯುನೆಲೆಯಲ್ಲಿ ನಡೆದ ಅಸ್ಟ್ರಾಶಕ್ತಿ 2023 ಕಸರತ್ತಿನ ಸಂದರ್ಭದಲ್ಲಿ ಆಂತರಿಕವಾಗಿ ವಿನ್ಯಾಸ ಹಾಗೂ ಅಭಿವೃದ್ಧಿಪಡಿಸಿದ ಸಮರ್ ವಾಯು ರಕ್ಷಣಾ ಕ್ಷಿಪಣಿ ವ್ಯವಸ್ಥೆಯ ಯಶಸ್ವಿ ಪ್ರಯೋಗ ನಡೆದಿದೆ. ಇದನ್ನು ಭಾರತೀಯ ವಾಯುಪಡೆಯ ನಿರ್ವಹಣಾ ಕಮಾಂಡ್ ಅಢಿಯಲ್ಲಿನ ಘಟಕವು ಅಭಿವೃದ್ಧಿಪಡಿಸಿದೆ ಎಂದು ಐಎಎಫ್ ಅಧಿಕಾರಿಗಳು ತಿಳಿಸಿದ್ದಾರೆ. 

ಈ ವ್ಯವಸ್ಥೆಯು 2 ರಿಂದ 2.5 ಮ್ಯಾಕ್ ವೇಗದ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸುವ ಕ್ಷಿಪಣಿಗಳೊಂದಿಗೆ ವೈಮಾನಿಕ ಬೆದರಿಕೆಗಳನ್ನು ಎದುರಿಸಬಹುದು. ಸಮಾರ್ ವ್ಯವಸ್ಥೆತಯಲ್ಲಿನ ಅವಳಿ ಟವರ್ ಉಡಾವಣಾ ವೇದಿಕೆ ಒಳಗೊಂಡಿದ್ದು, ಬೆದರಿಕೆ ಸನ್ನಿವೇಶ ಅವಲಂಬಿಸಿ, ಸಿಂಗಲ್ ಮತ್ತು ಸಾಲ್ವೋ ಮೋಡ್‌ನಲ್ಲಿ ಎರಡು ಕ್ಷಿಪಣಿಗಳನ್ನು ಉಡಾವಣೆ ಮಾಡುವ ಸಾಮರ್ಥ್ಯವನ್ನು ಹೊಂದಿದೆ ಎಂದು ಐಎಎಫ್ ಅಧಿಕಾರಿಗಳು ತಿಳಿಸಿದ್ದಾರೆ.

ಕ್ಷಿಪಣಿ ವ್ಯವಸ್ಥೆಯ ಕಾರ್ಯಕ್ಷಮತೆಯನ್ನು ವಾಯುಪಡೆಯ ಮುಖ್ಯಸ್ಥ ಏರ್ ಚೀಫ್ ಮಾರ್ಷಲ್ ವಿ.ಆರ್. ಚೌಧರಿ ಮತ್ತು ವಾಯುಪಡೆಯ ಉಪ ಮುಖ್ಯಸ್ಥ ಏರ್ ಮಾರ್ಷಲ್ ಎ.ಪಿ. ಸಿಂಗ್ ಈಗಾಗಲೇ ವೀಕ್ಷಿಸಿದ್ದಾರೆ. 

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

Iran war: ಬುಶೆಹರ್ ಅಣುಸ್ಥಾವರದ ಮೇಲೆ ಅಮೆರಿಕ-ಇಸ್ರೇಲ್ ಕ್ಷಿಪಣಿ ದಾಳಿ, ಓರ್ವ ಸಾವು

ಜನರು ಗ್ಯಾಸ್‌ಗಾಗಿ ಕ್ಯೂ ನಿಂತರೆ; ಕರ್ನಾಟಕದ ಶಾಸಕರು RCB vs CSK ಪಂದ್ಯದ ಉಚಿತ IPL​ ಟಿಕೆಟ್‌ಗಾಗಿ ಸಾಲುಗಟ್ಟಿ ನಿಂತ್ರು: ಎಲ್ಲರಿಗೂ ಸಿಕ್ತು 3 ಟಿಕೆಟ್!

ತಮಿಳುನಾಡಿನಲ್ಲಿ ಅಧಿಕಾರ ಯಾರಿಗೆ? ಡಿಎಂಕೆ, ಎನ್‌ಡಿಎ ಅಥವಾ ಟಿವಿಕೆ? ಸಮೀಕ್ಷೆಗಳಲ್ಲಿ ಹೊರಬಿತ್ತು ಅಚ್ಚರಿಯ ಮಾಹಿತಿ!

Dhurandhar 2 ಆರ್ಭಟಕ್ಕೆ ಬೆದರಿದ ಮತ್ತೊಂದು ಸಿನಿಮಾ; 'ಡಕಾಯಿತ್' ಬಿಡುಗಡೆ ಮುಂದೂಡಿಕೆ

CM ಸಿದ್ದರಾಮಯ್ಯ ವಿರುದ್ಧ ನಾಲಿಗೆ ಹರಿಬಿಟ್ಟ ಪ್ರತಾಪ್ ಸಿಂಹ; FIR ದಾಖಲಿಸುವಂತೆ ಸುರ್ಜೇವಾಲ ಆಗ್ರಹ

SCROLL FOR NEXT