ಸಾಂದರ್ಭಿಕ ಚಿತ್ರ 
ದೇಶ

ಬಿಹಾರ: ದೇವಾಲಯದ ಸಿಬ್ಬಂದಿ ಶವ ಪತ್ತೆಯಾದ ನಂತರ ಉದ್ವಿಗ್ನತೆ

ವಾರದ ಹಿಂದೆ ನಾಪತ್ತೆಯಾಗಿದ್ದ ದೇವಾಲಯವೊಂದರ ಸಿಬ್ಬಂದಿಯ ಶವ ಬಿಹಾರದ ಗೋಪಾಲ್‌ಗಂಜ್ ಜಿಲ್ಲೆಯ ಗ್ರಾಮವೊಂದರ ಹೊರವಲಯದಲ್ಲಿ ವಿಕೃತ ಸ್ಥಿತಿಯಲ್ಲಿ ಪತ್ತೆಯಾದ ನಂತರ ಭಾನುವಾರ ಉದ್ವಿಗ್ನತೆ ಉಂಟಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಗೋಪಾಲ್ ಗಂಜ್: ವಾರದ ಹಿಂದೆ ನಾಪತ್ತೆಯಾಗಿದ್ದ ದೇವಾಲಯವೊಂದರ ಸಿಬ್ಬಂದಿಯ ಶವ ಬಿಹಾರದ ಗೋಪಾಲ್‌ಗಂಜ್ ಜಿಲ್ಲೆಯ ಗ್ರಾಮವೊಂದರ ಹೊರವಲಯದಲ್ಲಿ ವಿಕೃತ ಸ್ಥಿತಿಯಲ್ಲಿ ಪತ್ತೆಯಾದ ನಂತರ ಭಾನುವಾರ ಉದ್ವಿಗ್ನತೆ ಉಂಟಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಮೃತನನ್ನು ಮನೋಜ್ ಕುಮಾರ್ ಸಾಹ್ ಎಂದು ಗುರುತಿಸಲಾಗಿದೆ. ಸೋಮವಾರದಂದು ದಾನಪುರ ಪ್ರದೇಶದ ಮಂಜಾ ಗ್ರಾಮದ ದೇವಸ್ಥಾನದಿಂದ ಹೊರಗೆ ಹೋಗುವಾಗ ಕೊನೆಯದಾಗಿ ಕಾಣಿಸಿಕೊಂಡಿದ್ದ ಈತನ ಶವ ಶನಿವಾರ ಪತ್ತೆಯಾಗಿದೆ ಎಂದು ಗೋಪಾಲಗಂಜ್ ಪೊಲೀಸ್ ವರಿಷ್ಠಾಧಿಕಾರಿ ಸ್ವರ್ಣ್ ಪ್ರಭಾತ್ ತಿಳಿಸಿದ್ದಾರೆ.

ಈತ ದೇವಸ್ಥಾನದ ಅರ್ಚಕ ಎಂಬ ವದಂತಿ ಹರಡುತ್ತಿದೆ. ಈತ ದೇವಸ್ಥಾನದ ಆವರಣದೊಳಗೆ ಮಲಗುತ್ತಿದ್ದ. ಸೋಮವಾರ ರಾತ್ರಿ ದೇವಸ್ಥಾನದ ಗೇಟ್‌ಗೆ ಬೀಗ ಹಾಕಿ ಹೊರಗೆ ಹೋಗುತ್ತಿರುವುದನ್ನು ಕೊನೆಯದಾಗಿ ನೋಡಿದ್ದಾಗಿ ಸ್ಥಳೀಯರು ಹೇಳುತ್ತಾರೆ. ಹೆಚ್ಚಿನ ವಿವರ ತನಿಖೆಯ ನಂತರ ಗೊತ್ತಾಗಿದೆ ಎಂದು ಪ್ರಭಾತ್ ಹೇಳಿದ್ದಾರೆ.

ದೇಹದ ಮೇಲೆ ಗುಂಡಿನ ಗಾಯಗಳು, ಕಣ್ಣುಗಳು ಮಾಯ,  ಖಾಸಗಿ ಭಾಗಗಳ ಮೇಲೆ ಗಾಯಗಳ ವರದಿ ಕುರಿತು ಉತ್ತರಿಸಿದ ಎಸ್ಪಿ, ಮರಣೋತ್ತರ ಪರೀಕ್ಷೆಯ ವರದಿ ನಂತರ ಎಲ್ಲಾವೂ ತಿಳಿದುಬರಲಿದೆ. ಪ್ರಕರಣವನ್ನು ಎಲ್ಲಾ ಆಯಾಮಗಳಿಂದ ತನಿಖೆ ನಡೆಸಲಾಗುತ್ತಿದ್ದು, ಆದಷ್ಟು ಬೇಗ ಆರೋಪಿಗಳನ್ನು ಬಂಧಿಸಲಾಗುವುದು ಎಂದು ಅವರು ಹೇಳಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ರಾಜ್ಯ ಸರ್ಕಾರಕ್ಕೆ 'ಸ್ಟಿಂಗ್ ಆಪರೇಷನ್' ಆತಂಕ: ಟ್ರ್ಯಾಪ್‌ಗೆ ಯತ್ನ ನಡೆಯುತ್ತಿದೆ, ಹುಷಾರಾಗಿರಿ ; 5 ಸಚಿವರಿಗೆ ಡಿಕೆಶಿ ಎಚ್ಚರಿಕೆ ಸಂದೇಶ

‘ವೈಯಕ್ತಿಕ ಮಹತ್ವಾಕಾಂಕ್ಷೆ ಅಲ್ಲ, ಧ್ಯೇಯಕ್ಕಾಗಿ ಬದುಕಿದ್ದೇನೆ, ದೇಶದ ಜನತೆಗೆ ತಲೆಬಾಗುತ್ತೇನೆ’: ಆಡಳಿತದಲ್ಲಿ 25 ವರ್ಷ ಪೂರೈಸಿದ ಪ್ರಧಾನಿ ಮೋದಿ ಮಾತು; Video

ಹಾಸನದ ಹೇಮಾವತಿ ನಾಲೆಯಲ್ಲಿ ಪ್ಲಾಸ್ಟಿಕ್‌ ಚೀಲದಲ್ಲಿ ವೃದ್ಧೆಯ ಶವ ಪತ್ತೆ: ಕೊಲೆ ಶಂಕೆ

ರಷ್ಯಾ ಕರಾವಳಿಯಲ್ಲಿ ಡ್ರೋನ್ ದಾಳಿ: ಹೊತ್ತಿ ಉರಿದ ತೈಲ ಟ್ಯಾಂಕರ್‌, 23 ಭಾರತೀಯ ಸಿಬ್ಬಂದಿ ಪಾರು..!

Lionel Messi: 21 ವರ್ಷಗಳ ಬಳಿಕ ತವರಿನಲ್ಲೇ ಫುಟ್ಬಾಲ್​ ದಿಗ್ಗಜ ಲಿಯೋನೆಲ್ ಮೆಸ್ಸಿ ಭಾವುಕ ವಿದಾಯ; ಹೇಗಿತ್ತು ನೋಡಿ ಅಂತಿಮ ಪಂದ್ಯ; Video