ದೇಶ

'ನ್ಯೂಸ್‌ಕ್ಲಿಕ್' ಬ್ಯಾಂಕ್ ಖಾತೆಗಳನ್ನು ಸ್ಥಗಿತಗೊಳಿಸಿದ ಐಟಿ ಇಲಾಖೆ; ಪತ್ರಕರ್ತ ಸಂಘಟನೆಗಳಿಂದ ಖಂಡನೆ

Vishwanath S

ನವದೆಹಲಿ: ಸುದ್ದಿ ಪೋರ್ಟಲ್ 'ನ್ಯೂಸ್‌ಕ್ಲಿಕ್' ನ ಬ್ಯಾಂಕ್ ಖಾತೆಗಳ ವಹಿವಾಟುಗಳನ್ನು ಆದಾಯ ತೆರಿಗೆ ಇಲಾಖೆ ನಿಷೇಧಿಸಿರುವುದನ್ನು ಬುಧವಾರ ಪ್ರಮುಖ ಪತ್ರಕರ್ತ ಸಂಘಟನೆಗಳು ಖಂಡಿಸಿವೆ. ಈ ಕ್ರಮವು ಕಾನೂನನ್ನು ಉಲ್ಲಂಘಿಸುತ್ತದೆ. ಅವರ ಕುಟುಂಬಗಳು ತಮ್ಮ ಸ್ಥಿರ ಆದಾಯದ ಮೂಲದಿಂದ ವಂಚಿತವಾಗಿವೆ ಎಂದು ಆರೋಪಿಸಿವೆ.

ಆದಾಯ ತೆರಿಗೆ ಇಲಾಖೆಯು ತನ್ನ ಬ್ಯಾಂಕ್ ಖಾತೆಗಳನ್ನು ಸ್ಥಗಿತಗೊಳಿಸಿದೆ. ಈ 'ಅನ್ಯಾಯ ಮತ್ತು ಕಠಿಣ' ಕ್ರಮದ ವಿರುದ್ಧ ಕಾನೂನು ಹೋರಾಟಕ್ಕೆ ಮುಂದಾಗುತ್ತೇವೆ ಎಂದು ಆನ್‌ಲೈನ್ ಸುದ್ದಿ ಪೋರ್ಟಲ್ 'ನ್ಯೂಸ್ಕ್ಲಿಕ್' ಮಂಗಳವಾರ ಹೇಳಿಕೊಂಡಿದೆ.

ವೆಬ್ ನ್ಯೂಸ್ ಪೋರ್ಟಲ್ 'ನ್ಯೂಸ್ಕ್ಲಿಕ್' ಖಾತೆಗಳನ್ನು ನಿರ್ಬಂಧಿಸುವುದನ್ನು ಪತ್ರಕರ್ತ ಸಂಸ್ಥೆಗಳು ಹಾಗೂ ನಾವು ಬಲವಾಗಿ ಖಂಡಿಸುತ್ತೇವೆ. ಯಾವುದೇ ಎಚ್ಚರಿಕೆ ನೀಡದೆ ಈ ಕ್ರಮ ಕೈಗೊಂಡಿರುವ ಆದಾಯ ತೆರಿಗೆ ಇಲಾಖೆ ಒಂದೇ ಏಟಿಗೆ ಸುಮಾರು ನೂರು ಮಾಧ್ಯಮ ಪ್ರತಿನಿಧಿಗಳು ಮತ್ತು ಅವರ ಕುಟುಂಬಗಳಿಗೆ ಸ್ಥಿರ ಆದಾಯದ ಮೂಲದಿಂದ ವಂಚಿತವಾಗುವಂತೆ ಮಾಡಿದೆ ಎಂದು ಜಂಟಿ ಹೇಳಿಕೆ ನೀಡಿವೆ.

ಈ ಹೇಳಿಕೆಯನ್ನು ಪ್ರೆಸ್ ಅಸೋಸಿಯೇಷನ್, ಪ್ರೆಸ್ ಕ್ಲಬ್ ಆಫ್ ಇಂಡಿಯಾ, ಇಂಡಿಯನ್ ವುಮೆನ್ ಪ್ರೆಸ್ ಕಾರ್ಪ್ಸ್, ದೆಹಲಿ ಯೂನಿಯನ್ ಆಫ್ ಜರ್ನಲಿಸ್ಟ್ಸ್, ಕೇರಳ ಯೂನಿಯನ್ ಆಫ್ ವರ್ಕಿಂಗ್ ಜರ್ನಲಿಸ್ಟ್ಸ್ ಮತ್ತು ವರ್ಕಿಂಗ್ ನ್ಯೂಸ್ ಕ್ಯಾಮರಾಮೆನ್ಸ್ ಅಸೋಸಿಯೇಷನ್ ​​(WNCA) ಜಂಟಿಯಾಗಿ ಬಿಡುಗಡೆ ಮಾಡಿದೆ.

ನ್ಯೂಸ್‌ಕ್ಲಿಕ್ ಸಂಸ್ಥಾಪಕ ಪ್ರಬೀರ್ ಪುರ್ಕಾಯಸ್ಥ ಮತ್ತು ಆಡಳಿತಾಧಿಕಾರಿ ಅಮಿತ್ ಚಕ್ರವರ್ತಿ ವಿರುದ್ಧ 'ಕಟ್ಟುನಿಟ್ಟಿನ ಸೆಕ್ಷನ್'ಗಳ ಅಡಿಯಲ್ಲಿ ಪ್ರಕರಣವನ್ನು ದಾಖಲಿಸಲಾಗಿದೆ. ಅಂತಹ ಮಾಧ್ಯಮದ ವ್ಯಕ್ತಿಗಳ ಬಂಧನಗಳು 'ಅಪವಾದಕ್ಕಿಂತ ಹೆಚ್ಚಾಗಿ ರೂಢಿಯಾಗಿದೆ' ಎಂದು ಗಮನಿಸಲಾಗಿದೆ ಎಂದು ಹೇಳಿಕೆ ತಿಳಿಸಿದೆ.

ತನಿಖೆಯ ಹೆಸರಿನಲ್ಲಿ ಮೊಬೈಲ್ ಫೋನ್‌ಗಳು ಮತ್ತು ಕಂಪ್ಯೂಟರ್‌ಗಳಂತಹ ಎಲೆಕ್ಟ್ರಾನಿಕ್ ಸಾಧನಗಳನ್ನು 'ವಿವೇಚನಾರಹಿತ' ವಶಪಡಿಸಿಕೊಳ್ಳುವ ಬಗ್ಗೆ ಪತ್ರಕರ್ತ ಸಂಘಟನೆಗಳು ಕಳವಳ ವ್ಯಕ್ತಪಡಿಸಿವೆ.

SCROLL FOR NEXT