ಚಿದಂಬರಂ 
ದೇಶ

ಜನ ಎಂದಾದರೂ ಮಹಾತ್ಮ ಗಾಂಧಿಯ ಜಾತಿ ಕೇಳಿದ್ದಾರೆಯೇ?: ಧನಕರ್ ವಿರುದ್ಧ ಚಿದಂಬರಂ ವಾಗ್ದಾಳಿ

ಸಂಸತ್ತಿನಲ್ಲಿ ಗಂಭೀರ ಚರ್ಚೆ ನಡೆಯುತ್ತಿರುವ ಸಂದರ್ಭದಲ್ಲಿ ಜಾತಿಯನ್ನು ಪ್ರಸ್ತಾಪಿಸುತ್ತಿರುವುದು ನಿರಾಶಾದಾಯಕ ಎಂದ ಕಾಂಗ್ರೆಸ್‌ನ ಹಿರಿಯ ನಾಯಕ ಪಿ ಚಿದಂಬರಂ ಅವರು, 21ನೇ ಶತಮಾನದಲ್ಲಿ ಈ "ಸಂಕುಚಿತ ಮನೋಭಾವ"ಗಳನ್ನು ಮೀರಿ...

ನವದೆಹಲಿ: ಸಂಸತ್ತಿನಲ್ಲಿ ಗಂಭೀರ ಚರ್ಚೆ ನಡೆಯುತ್ತಿರುವ ಸಂದರ್ಭದಲ್ಲಿ ಜಾತಿಯನ್ನು ಪ್ರಸ್ತಾಪಿಸುತ್ತಿರುವುದು ನಿರಾಶಾದಾಯಕ ಎಂದ ಕಾಂಗ್ರೆಸ್‌ನ ಹಿರಿಯ ನಾಯಕ ಪಿ ಚಿದಂಬರಂ ಅವರು, 21ನೇ ಶತಮಾನದಲ್ಲಿ ಈ "ಸಂಕುಚಿತ ಮನೋಭಾವ"ಗಳನ್ನು ಮೀರಿ ನಡೆಯುವಂತೆ ಜನರಿಗೆ ಕರೆ ನೀಡಿದ್ದಾರೆ.

ಸಂಸದರ ಅಮಾನತು ವಿರೋಧಿಸಿ ಟಿಎಂಸಿ ಸಂಸದ ಕಲ್ಯಾಣ್ ಬ್ಯಾನರ್ಜಿ ಅವರು ತಮ್ಮನ್ನು ಅಪಹಾಸ್ಯ ಮಾಡಿದ ಬಗ್ಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದ ಉಪರಾಷ್ಟ್ರಪತಿ ಜಗದೀಪ್ ಧನಕರ್ ಅವರು, ತಾವು ಜಾಟ್(ಅವರ ಜಾತಿ) ಎಂಬ ಕಾರಣಕ್ಕೆ ಅವಮಾನ ಮಾಡಲಾಗುತ್ತಿದೆ ಎಂದಿದ್ದರು.

ಸಂಸತ್ತಿನಲ್ಲಿ ಮಹತ್ವದ ವಿಷಯದ ಬಗ್ಗೆ ಚರ್ಚೆ ನಡೆಯುತ್ತಿದ್ದ ವೇಳೆ ‘ಜಾತಿ’ಯನ್ನು ಪ್ರಸ್ತಾಪಿಸಿರುವುದು ತೀವ್ರ ನಿರಾಶಾದಾಯಕ. ಮತ್ತೊಬ್ಬ ವ್ಯಕ್ತಿಯನ್ನು ಟೀಕಿಸಲು ತಮ್ಮ ‘ಹುಟ್ಟಿದ ಸ್ಥಳ’ವನ್ನು ಬಳಸಿರುವುದು ಖಂಡನೀಯ ಎಂದು ಚಿದಂಬರಂ ಅವರು  X ನಲ್ಲಿ ಪೋಸ್ಟ್ ಮಾಡಿದ್ದಾರೆ.

"ಮಹಾತ್ಮ ಗಾಂಧಿ ಅಥವಾ ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ ಜಾತಿ ಅಥವಾ ಸಿ.ಎಫ್. ಆಂಡ್ರ್ಯೂಸ್ ಅಥವಾ ಆನಿ ಬೆಸೆಂಟ್ ಅವರ ಜನ್ಮಸ್ಥಳದ ಬಗ್ಗೆ ಯಾರಾದರೂ ಕೇಳಿದರೆ ಬಗ್ಗೆ ನನಗೆ ನೆನಪಿಲ್ಲ. ಈ ಸಂಕುಚಿತ ಮನೋಭಾವವನ್ನು ಮೀರಿ 21ನೇ ಶತಮಾನದಲ್ಲಿ ನಾವು ಮಾನವೀಯತೆಯ ಮಾನದಂಡಗಳು ಮತ್ತು ಮೌಲ್ಯಗಳನ್ನು ಅಳವಡಿಸಿಕೊಳ್ಳಬಹುದೇ? ಎಂದು ಮಾಜಿ ಕೇಂದ್ರ ಸಚಿವ ಟ್ವೀಟ್ ಮಾಡಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

'ಭಯೋತ್ಪಾದನೆಯನ್ನು ಯಾವುದೂ ಸಮರ್ಥಿಸಲು ಸಾಧ್ಯವಿಲ್ಲ, ಭಾರತ ಇಸ್ರೇಲ್ ಜೊತೆ ದೃಢವಾಗಿ ನಿಲ್ಲುತ್ತದೆ': ನೆಸ್ಸೆಟ್‌ನಲ್ಲಿ ಪ್ರಧಾನಿ ಮೋದಿ ಭಾಷಣ

'ನ್ಯಾಯಾಂಗದಲ್ಲಿ ಭ್ರಷ್ಟಾಚಾರ' ಪಾಠ: ಸುಪ್ರೀಂ ಚಾಟಿ ನಂತರ ವೆಬ್‌ಸೈಟ್‌ನಿಂದ ಪಠ್ಯಪುಸ್ತಕ ತೆಗೆದ NCERT

India to Israel: ಪ್ರಧಾನಿ ಮೋದಿ ಪಯಣಿಸಿದ್ದ Air India ವಿಮಾನ ವಿಶ್ವದಲ್ಲೇ ಅತಿ ಹೆಚ್ಚು ಟ್ರ್ಯಾಕ್: Flightradar24

Ranji Trophy final: ಕರ್ನಾಟಕ ವಿರುದ್ಧ ಜಮ್ಮು ಮತ್ತು ಕಾಶ್ಮೀರ ಬೃಹತ್ ಮೊತ್ತ; 527/6

ಮಲ್ಲಿಕಾರ್ಜುನ ಮುತ್ಯಾಗೆ ಮತ್ತೆ ಸಂಕಷ್ಟ: ಮಕ್ಕಳ ಆಯೋಗದಿಂದ ಸ್ವಯಂ ಪ್ರೇರಿತ ದೂರು ದಾಖಲು

SCROLL FOR NEXT