ಸಾಂದರ್ಭಿಕ ಚಿತ್ರ 
ದೇಶ

ಬಾರ್ಮರ್ ಮಾಜಿ ಶಾಸಕ, ಮತ್ತಿತರ 8 ಮಂದಿಯಿಂದ ಅತ್ಯಾಚಾರ: ಮಹಿಳೆ ಆರೋಪ

ಎರಡು ವರ್ಷಗಳ ಹಿಂದೆ ಬಾರ್ಮರ್‌ನ ಮಾಜಿ ಶಾಸಕ ಮೇವರಂ ಜೈನ್ ಮತ್ತು ಆರ್‌ಪಿಎಸ್ ಅಧಿಕಾರಿ ಆನಂದ್ ಸಿಂಗ್ ರಾಜಪುರೋಹಿತ್ ಸೇರಿದಂತೆ ಒಂಬತ್ತು ಜನರು ತನ್ನ ಮೇಲೆ ಅತ್ಯಾಚಾರ ನಡೆಸಿದ್ದು, ತನ್ನ ಹರೆಯದ ಮಗಳಿಗೆ ಕಿರುಕುಳ ನೀಡಿದ್ದಾರೆ ಎಂದು ಆರೋಪಿಸಿ ಮಹಿಳೆಯೊಬ್ಬರು ಬುಧವಾರ ರಾತ್ರಿ ಪ್ರಕರಣ ದಾಖಲಿಸಿದ್ದಾರೆ.

ರಾಜಸ್ಥಾನ: ಎರಡು ವರ್ಷಗಳ ಹಿಂದೆ ಬಾರ್ಮರ್‌ನ ಮಾಜಿ ಶಾಸಕ ಮೇವರಂ ಜೈನ್ ಮತ್ತು ಆರ್‌ಪಿಎಸ್ ಅಧಿಕಾರಿ ಆನಂದ್ ಸಿಂಗ್ ರಾಜಪುರೋಹಿತ್ ಸೇರಿದಂತೆ ಒಂಬತ್ತು ಜನರು ತನ್ನ ಮೇಲೆ ಅತ್ಯಾಚಾರ ನಡೆಸಿದ್ದು, ತನ್ನ ಹರೆಯದ ಮಗಳಿಗೆ ಕಿರುಕುಳ ನೀಡಿದ್ದಾರೆ ಎಂದು ಆರೋಪಿಸಿ ಮಹಿಳೆಯೊಬ್ಬರು ಬುಧವಾರ ರಾತ್ರಿ ಪ್ರಕರಣ ದಾಖಲಿಸಿದ್ದಾರೆ.

ಜೋಧಪುರದ ರಾಜೀವ್ ಗಾಂಧಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಆರೋಪಿಯು ತನ್ನ ಅಪ್ರಾಪ್ತ ವಯಸ್ಸಿನ ಸ್ನೇಹಿತೆ ಮೇಲೆ ಅತ್ಯಾಚಾರ ಎಸಗಿದ್ದಾನೆ ಮತ್ತು ಇತರ ಹುಡುಗಿಯರನ್ನು ತಮ್ಮ ಬಳಿಗೆ ಕರೆತರುವಂತೆ ತನ್ನ ಮೇಲೆ ಒತ್ತಡ ಹೇರಿದ್ದಾನೆ ಎಂದು ಮಹಿಳೆ ಎಫ್‌ಐಆರ್‌ನಲ್ಲಿ ಆರೋಪಿಸಿದ್ದಾರೆ.

ಆರೋಪಿಗಳಲ್ಲಿ ಇನ್ನಿಬ್ಬರು ಪೊಲೀಸ್ ಅಧಿಕಾರಿಗಳಾದ ಬಾರ್ಮರ್ ಎಸ್‌ಎಚ್‌ಒ ಗಂಗಾರಾಮ್ ಖಾವಾ ಮತ್ತು ಸಬ್ ಇನ್ಸ್‌ಪೆಕ್ಟರ್ ದೌದ್ ಖಾನ್ - ಮತ್ತು ಪ್ರಧಾನ್ ಗಿರ್ಧಾರಿ ಸಿಂಗ್ ಸೋಧಾ ಸೇರಿದ್ದಾರೆ. ಎಫ್‌ಐಆರ್ ನ್ನು ದೃಢೀಕರಿಸಿದ ಎಸ್‌ಎಚ್‌ಒ ಶಕೀಲ್ ಅಹ್ಮದ್, ಜೈನ್ ಮತ್ತು ಇತರ 8 ಜನರ ವಿರುದ್ಧ ಸಾಮೂಹಿಕ ಅತ್ಯಾಚಾರ, ಬೆದರಿಕೆ ಮತ್ತು ಬೆದರಿಕೆ ಆರೋಪದಡಿ ವರದಿಯನ್ನು ದಾಖಲಿಸಲಾಗಿದೆ ಎಂದು ಹೇಳಿದರು.

"2021 ರಿಂದ ಜೈನ್ ತನ್ನ ಮೇಲೆ ಅತ್ಯಾಚಾರ ಮಾಡುತ್ತಿದ್ದಾನೆಎಂದು ಆಕೆ ಆರೋಪಿಸಿದ್ದಾರೆ, ಆದರೆ ಜೈನ್ ಅವರನ್ನು ಪರಿಚಯಿಸಿದ ರಾಮ್ ಸ್ವರೂಪ್ ಐದು ವರ್ಷಗಳಿಂದ ತನ್ನ ಮೇಲೆ ಅತ್ಯಾಚಾರ ಮಾಡುತ್ತಿದ್ದಾನೆ ಎಂದು  ಆರೋಪಿಸಿದ್ದು, ಈ ಬಗ್ಗೆ ತನಿಖೆಯನ್ನು ಪ್ರಾರಂಭಿಸಲಾಗಿದೆ ಎಂದು ಅಧಿಕಾರಿ ತಿಳಿಸಿದ್ದಾರೆ.

ತನ್ನ ತಂದೆಯ ಅನಾರೋಗ್ಯದ ಕಾರಣ, ಐದು ವರ್ಷಗಳ ಹಿಂದೆ ಬಾರ್ಮರ್‌ನಿಂದ ರಾಮ್ ಸ್ವರೂಪ್ ಅವರ ಸಂಪರ್ಕಕ್ಕೆ ಬಂದಿದ್ದೇನೆ ಮತ್ತು ಅವರು ತನಗೆ ಸಹಾಯ ಮಾಡುವುದಾಗಿ ಭರವಸೆ ನೀಡಿದರು. ಆದರೆ ಆಕೆಯ ದುರ್ಬಲತೆಯ ಲಾಭ ಪಡೆದುಕೊಂಡು ಅತ್ಯಾಚಾರವೆಸಗಿದ್ದು, ಅದನ್ನು ವಿಡಿಯೋ ರೆಕಾರ್ಡ್ ಮಾಡಿಕೊಳ್ಳುವ ಮೂಲಕ ಲೈಂಗಿಕವಾಗಿ ಬಳಸಿಕೊಳ್ಳುವುದನ್ನು ಮುಂದುವರೆಸಿದ್ದನು ಎಂದು ಪೊಲೀಸರು ತಿಳಿಸಿದ್ದಾರೆ. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಬ್ಯಾಂಕ್‌ಗೆ ನಕಲಿ ಗ್ಯಾರಂಟಿ: ರಿಲಯನ್ಸ್‌ ಪವರ್‌ನ ಮುಖ್ಯ ಹಣಕಾಸು ಅಧಿಕಾರಿ ಅಶೋಕ್ ಪಾಲ್ ಬಂಧನ

CM ಆಗುವ ಕಾಲ ಹತ್ತಿರ ಬಂದಿದೆ ಎಂದು ನಾನು ಹೇಳಿಲ್ಲ: ಸುದ್ದಿ ತಿರುಚಿ ಪ್ರಸಾರ ಮಾಡಿದರೆ ಮಾನನಷ್ಟ ಮೊಕದ್ದಮೆ ಅನಿವಾರ್ಯ; ಡಿ ಕೆ ಶಿವಕುಮಾರ್

ಸಮಸ್ತ ಜನರಿಗೆ ಸುಗಮ ಆಡಳಿತ, ಶುದ್ಧ ನೀರಿನ ಪೂರೈಕೆ: ಸ್ವಚ್ಚತೆ- ಸಂಚಾರ ವ್ಯವಸ್ಥೆಗೆ ಸಿಎಂ ಸಿದ್ದರಾಮಯ್ಯ ಕಟ್ಟಪ್ಪಣೆ

ಸಿದ್ದರಾಮಯ್ಯ ಮೇಲೆ ತೂಗುಗತ್ತಿ: ಅಧಿಕಾರದಲ್ಲಿ ಉಳಿಯಲು ಸಂಪುಟ ಪುನಾರಚನೆ ಕಸರತ್ತು; ಬಿಹಾರ-ಕೇರಳ ಚುನಾವಣೆಯತ್ತ ಡಿಕೆಶಿ ಚಿತ್ತ!

ವೀರೇಂದ್ರ ಪಪ್ಪಿ ಕರ್ಮಕಾಂಡ ನೋಡುತ್ತಿದ್ದರೆ CM- DCM ಇನ್ಯಾವ ಪರಿ ಲೂಟಿ ಮಾಡಿ ಹೈಕಮಾಂಡ್ ಗೆ ಕಪ್ಪ ನೀಡುತ್ತಿರಬೇಡಾ?

SCROLL FOR NEXT