ಮಧ್ಯಪ್ರದೇಶ ಸಂಪುಟ 
ದೇಶ

ಮಧ್ಯಪ್ರದೇಶ ಸಚಿವ ಸಂಪುಟ ವಿಸ್ತರಣೆ: ವಿಜಯವರ್ಗಿಯ, ಪ್ರಹ್ಲಾದ್ ಪಟೇಲ್ ಸೇರಿ 28 ಶಾಸಕರು ಸಚಿವರಾಗಿ ಪ್ರಮಾಣವಚನ

ಮಾಜಿ ಕೇಂದ್ರ ಸಚಿವ ಪ್ರಹ್ಲಾದ್ ಪಟೇಲ್ ಮತ್ತು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಕೈಲಾಶ್ ವಿಜಯವರ್ಗಿಯಾ ಸೇರಿದಂತೆ 28 ಶಾಸಕರು ಇಂದು ಮಧ್ಯಪ್ರದೇಶದ ಮುಖ್ಯಮಂತ್ರಿ ಮೋಹನ್ ಯಾದವ್ ನೇತೃತ್ವದ ಸಂಪುಟಕ್ಕೆ ಸೇರ್ಪಡೆಗೊಂಡಿದ್ದಾರೆ.

ಭೋಪಾಲ್: ಮಾಜಿ ಕೇಂದ್ರ ಸಚಿವ ಪ್ರಹ್ಲಾದ್ ಪಟೇಲ್ ಮತ್ತು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಕೈಲಾಶ್ ವಿಜಯವರ್ಗಿಯಾ ಸೇರಿದಂತೆ 28 ಶಾಸಕರು ಇಂದು ಮಧ್ಯಪ್ರದೇಶದ ಮುಖ್ಯಮಂತ್ರಿ ಮೋಹನ್ ಯಾದವ್ ನೇತೃತ್ವದ ಸಂಪುಟಕ್ಕೆ ಸೇರ್ಪಡೆಗೊಂಡಿದ್ದಾರೆ.

ಸಂಪುಟ ಸಚಿವರಾಗಿ 18 ಶಾಸಕರ ಪ್ರಮಾಣವಚನ
ಸಂಪುಟ ಸಚಿವರ ಪಟ್ಟಿಯಲ್ಲಿ ವಿಜಯ್ ಶಾ, ಕೈಲಾಶ್ ವಿಜಯವರ್ಗಿಯ, ಪ್ರಹ್ಲಾದ್ ಪಟೇಲ್, ರಾಕೇಶ್ ಸಿಂಗ್, ಕರಣ್ ಸಿಂಗ್ ವರ್ಮಾ, ರಾವ್ ಉದಯ್ ಪ್ರತಾಪ್ ಸಿಂಗ್ ಸೇರಿದಂತೆ 18 ಶಾಸಕರು ಇದ್ದಾರೆ. ಇದೇ ವೇಳೆ 6 ಮಂದಿ ನಾಯಕರನ್ನು ರಾಜ್ಯ ಸಚಿವರನ್ನಾಗಿ (ಸ್ವತಂತ್ರ ಉಸ್ತುವಾರಿ) ಹಾಗೂ 4 ಮಂದಿಗೆ ರಾಜ್ಯ ಸಚಿವರನ್ನಾಗಿ ಮಾಡಲಾಗಿದೆ.

ಸಂಪುಟ ಸಚಿವರ ಪ್ರಮಾಣ ವಚನ
ಕೈಲಾಶ್ ವಿಜಯವರ್ಗಿಯ, ಪ್ರಹ್ಲಾದ್ ಸಿಂಗ್ ಪಟೇಲ್, ರಾಕೇಶ್ ಸಿಂಗ್, ಕರಣ್ ಸಿಂಗ್ ವರ್ಮಾ, ರಾವ್ ಉದಯ್ ಪ್ರತಾಪ್ ಸಿಂಗ್, ವಿಜಯ್ ಶಾ, ಸಂಪಾಟಿಯಾ ಯುಕೆ, ತುಳಸಿರಾಮ್ ಸಿಲಾವತ್, ಆಂಡಾಲ್ ಸಿಂಗ್ ಕಂಸನಾ, ನಿರ್ಮಲಾ ಭೂರಿಯಾ, ಗೋವಿಂದ್ ಸಿಂಗ್ ರಜಪೂತ್, ವಿಶ್ವಾಸ್ ಸಾರಂಗ್, ನಾಗರ್ ಸಿಂಗ್ ಚೌಹಾಣ್, ನಾರಾಯಣ ಸಿಂಗ್ ಕುಶ್ವಾಹ, ಪ್ರದ್ಯುಮನ್ ಸಿಂಗ್ ತೋಮರ್, ರಾಕೇಶ್ ಶುಕ್ಲಾ, ಚೇತನ್ ಕಶ್ಯಪ್, ಇಂದರ್ ಸಿಂಗ್ ಪರ್ಮಾರ್.

ರಾಜ್ಯ ಖಾತೆ ಸಚಿವರಾಗಿ ಪ್ರಮಾಣ ವಚನ
ರಾಧಾ ಸಿಂಗ್, ಪ್ರತಿಮಾ ಬಗ್ರಿ, ದಿಲೀಪ್ ಅಹಿರ್ವಾರ್, ನರೇಂದ್ರ ಶಿವಾಜಿ ಪಟೇಲ್

ಸ್ವತಂತ್ರ ಉಸ್ತುವಾರಿ ಸಚಿವರು
ದಿಲೀಪ್ ಜೈಸ್ವಾಲ್, ಗೌತಮ್ ತೇಟ್ವಾಲ್, ಲಖನ್ ಪಟೇಲ್, ಕೃಷ್ಣ ಗೌರ್, ಧರ್ಮೇಂದ್ರ ಲೋಧಿ, ನಾರಾಯಣ ಸಿಂಗ್ ಪವಾರ್

ಮೊದಲ ಬಾರಿಗೆ ಗೆದ್ದು ಸಚಿವರಾದ 6 ಶಾಸಕರು
ಪ್ರಹ್ಲಾದ್ ಸಿಂಗ್ ಪಟೇಲ್, ರಾಕೇಶ್ ಸಿಂಗ್, ಸಂಪಾಟಿಯಾ ಯುಕೆ, ನರೇಂದ್ರ ಪಟೇಲ್, ಪ್ರತಿಮಾ ಬಗ್ರಿ, ರಾಧಾ ಸಿಂಗ್.

ಸಿಂಧಿಯಾ ಬೆಂಬಲಿಗ 3 ಶಾಸಕರು ಸಚಿವರಾದರು
ತುಳಸಿ ಸಿಲಾವತ್, ಗೋವಿಂದ್ ಸಿಂಗ್ ರಜಪೂತ್, ಪ್ರದ್ಯುಮನ್ ಸಿಂಗ್ ತೋಮರ್.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ಮತಗಳ್ಳತನ' ನಡೆದಿರುವುದನ್ನು ರಾಷ್ಟ್ರಪತಿ ದ್ರೌಪದಿ ಮುರ್ಮು ನಿರಾಕರಿಸಲಿಲ್ಲ, ನನಗೆ ಆಶ್ಚರ್ಯವಾಯಿತು: ರಾಹುಲ್ ಗಾಂಧಿ

ಬೆಂಗಳೂರು: ನಮ್ಮ ಮೆಟ್ರೋದಲ್ಲಿ Alt News ಸಹ ಸ್ಥಾಪಕ ಮೊಹಮ್ಮದ್ ಜುಬೈರ್ ಗೆ ಹಿಗ್ಗಾಮುಗ್ಗ ಥಳಿತ?, Video Viral

19ನೇ ಓವರ್‌ನಲ್ಲೇ 250 ರನ್ ಚೇಸ್: ಟಿ20 ಕ್ರಿಕೆಟ್‌ನಲ್ಲಿ ಭಾರತವನ್ನು ಸೋಲಿಸಿ ದಾಖಲೆ ಬರೆದ ವಿಂಡೀಸ್

CJP Protest: ಭಾರತದ ಯುವಕರು ದೆಹಲಿಗೆ ತಲುಪುವುದನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ: ಚಿರಾಗ್ ಪಾಸ್ವಾನ್

24 ಗಂಟೆ ಇಂಟರ್ನೆಟ್ ಕಟ್, 57 ಮೆಟ್ರೋ ನಿಲ್ದಾಣ ಬಂದ್: ಸಿಜೆಪಿ ಪ್ರತಿಭಟನೆಗೂ ಮುನ್ನ ದೆಹಲಿ ಹೈ ಅಲರ್ಟ್