ಬಂಧಿತ ಆರೋಪಿಗಳು 
ದೇಶ

ಸಂಸತ್ ಭದ್ರತಾ ಲೋಪ: ಆರೋಪಿಗಳ ಶೂ ಮಾರ್ಪಡಿಸಿದ ಚಮ್ಮಾರನ ಪತ್ತೆಗೆ ಯುಪಿ ಪೊಲೀಸರ ಸಹಾಯ ಕೋರಿದ ದೆಹಲಿ ಪೊಲೀಸರು

ಸಂಸತ್ ಭದ್ರತಾ ಲೋಪ ಪ್ರಕರಣದ ಆರೋಪಿ ಸಾಗರ್ ಶರ್ಮಾ ಮತ್ತು ಮನೋರಂಜನ್ ಡಿ ಅವರ ಶೂಗಳನ್ನು ಹೊಗೆ ಡಬ್ಬಿ ಅಳವಡಿಸುವುದಕ್ಕಾಗಿ ಮಾರ್ಪಡಿಸಿದ "ಸೈಕ್ಲಿಸ್ಟ್ ಚಮ್ಮಾರ"ನ ಪತ್ತೆಗೆ ದೆಹಲಿ ಪೊಲೀಸರು, ಉತ್ತರ ಪ್ರದೇಶ ಪೊಲೀಸರ...

ನವದೆಹಲಿ: ಸಂಸತ್ ಭದ್ರತಾ ಲೋಪ ಪ್ರಕರಣದ ಆರೋಪಿ ಸಾಗರ್ ಶರ್ಮಾ ಮತ್ತು ಮನೋರಂಜನ್ ಡಿ ಅವರ ಶೂಗಳನ್ನು ಹೊಗೆ ಡಬ್ಬಿ ಅಳವಡಿಸುವುದಕ್ಕಾಗಿ ಮಾರ್ಪಡಿಸಿದ "ಸೈಕ್ಲಿಸ್ಟ್ ಚಮ್ಮಾರ"ನ ಪತ್ತೆಗೆ ದೆಹಲಿ ಪೊಲೀಸರು, ಉತ್ತರ ಪ್ರದೇಶ ಪೊಲೀಸರ ಸಹಾಯ ಕೋರಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಚಮ್ಮಾರನನ್ನು ಪ್ರಕರಣದಲ್ಲಿ ಸಾಕ್ಷಿಯನ್ನಾಗಿ ಮಾಡಲು ಪೊಲೀಸರು ಬಯಸಿದ್ದಾರೆ ಎಂದು ಅವರು ಹೇಳಿದ್ದಾರೆ.

ಸಾಗರ್ ಅವರು ಮೊದಲು ಶೂಗಳನ್ನು ಮಾರ್ಪಡಿಸಲು ಪ್ರಯತ್ನಿಸಿದರು. ಆದರೆ ಸಾಧ್ಯವಾಗಲಿಲ್ಲ. ನಂತರ ಸೈಕಲ್ ನಲ್ಲಿ ಲಖನೌ ಅಲಂಬಾಗ್‌ಗೆ ಬಂದಿದ್ದ ಚಮ್ಮಾರನನ್ನು ಸಂಪರ್ಕಿಸಿ, ಶೂಗಳನ್ನು ಮಾರ್ಪಡಿಸಲಾಗಿದೆ ಎಂದು ದೆಹಲಿ ಪೊಲೀಸ್ ಮೂಲಗಳು ತಿಳಿಸಿವೆ.

ಈ ತಿಂಗಳ ಆರಂಭದಲ್ಲಿ ಚಮ್ಮಾರನನ್ನು ಹುಡುಕಲು ದೆಹಲಿ ಪೊಲೀಸರ ತಂಡ ಲಖನೌಗೆ ಭೇಟಿ ನೀಡಿತ್ತು.

ಡಿಸೆಂಬರ್ 13 ರಂದು ಲೋಕಸಭೆ ಕಲಾಪ ನಡೆಯುತ್ತಿದ್ದ ವೇಳೆ ಸಾರ್ವಜನಿಕ ಗ್ಯಾಲರಿಯಿಂದ ಕೆಳಗೆ ಜಿಗಿದ ಸಾಗರ್ ಮತ್ತು ಮನೋರಂಜನ್, ತಮ್ಮ ಶೂಗಳಲ್ಲಿದ್ದ ಹೊಗೆ ಡಬ್ಬಿಗಳನ್ನು ತೆಗೆದು ಹಳದಿ ಬಣ್ಣದ ಹೊಗೆ ಬಿಡುಗಡೆ ಮಾಡಿದ್ದರು ಮತ್ತು ಘೋಷಣೆಗಳನ್ನು ಕೂಗಿದ್ದರು.

ಈ ಆರೋಪಿಗಳು ಮೈಸೂರು ಸಂಸದ ಪ್ರತಾಪ್ ಸಿಂಹ ಅವರಿಂದ ಸಂದರ್ಶಕರ ಪಾಸ್‌ಗಳನ್ನು ಪಡೆದು ಸಂಸತ್ ಪ್ರವೇಶ ಮಾಡಿದ್ದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಬೆಂಗಳೂರಲ್ಲಿ ಆಪರೇಷನ್‌ ಫುಟ್‌ಪಾತ್‌: ಇದುವರೆಗೆ 9,878 ಅತಿಕ್ರಮಣ ತೆರವು; CM ಡಿಕೆಶಿ ಸಿಟಿ ರೌಂಡ್ಸ್!

Kumbh Mela viral girl ಮೊನಾಲಿಸಾ 'ನಾಪತ್ತೆ'​: ಪೊಲೀಸ್ ರಕ್ಷಣೆ ಹಿಂಪಡೆದ ಕೇರಳ ಹೈಕೋರ್ಟ್

BJP ಆರೋಪಗಳ ಬೆನ್ನಲ್ಲೇ ಮಂಗಳೂರಿನಲ್ಲಿ 8 ಬಾಂಗ್ಲಾದೇಶಿ ಪ್ರಜೆಗಳ ಬಂಧನ; ಗಡಿಪಾರಿಗೆ ಸಿದ್ಧತೆ

ವಿಜಯಪುರದಲ್ಲಿ ಭೀಕರ ಅಪಘಾತ: ಡಿವೈಡರ್‌ಗೆ ಕಾರು ಡಿಕ್ಕಿ; ಇಬ್ಬರು ಪುತ್ರರ ಜೊತೆ ತಾಯಿ ಸ್ಥಳದಲ್ಲೇ ಸಾವು!

'ಮಮತಾರಂತೆ ನಾನು ದುರ್ಬಲ, ಹೇಡಿ CM ಅಲ್ಲ': ಶಾಸಕ ಹುಮಾಯೂನ್ ಕಬೀರ್​ ಬೆವರಿಳಿಸಿದ ಸುವೇಂದು ಅಧಿಕಾರಿ