ಗೌತಮ್ ನವ್ಲಾಖಾ 
ದೇಶ

ನ್ಯೂಸ್‌ಕ್ಲಿಕ್‌ ಪ್ರಕರಣ: ದೆಹಲಿ ಪೊಲೀಸರಿಂದ ಸಾಮಾಜಿಕ ಹೋರಾಟಗಾರ ಗೌತಮ್ ನವ್ಲಾಖಾ ವಿಚಾರಣೆ

ನ್ಯೂಸ್‌ಕ್ಲಿಕ್‌ನ ವಿದೇಶಿ ಧನಸಹಾಯ ಮತ್ತು ಭಾರತ ವಿರೋಧಿ ಚಟುವಟಿಕೆಗಳ ತನಿಖೆ ಸಂಬಂಧ ದೆಹಲಿ ಪೊಲೀಸರ ತಂಡವು ಸಾಮಾಜಿಕ ಹೋರಾಟಗಾರ ಗೌತಮ್ ನವ್ಲಾಖಾ ಅವರ ವಿಚಾರಣೆ ನಡೆಸಿದೆ  ಎಂದು ಅಧಿಕಾರಿಯೊಬ್ಬರು ಶನಿವಾರ ತಿಳಿಸಿದ್ದಾರೆ.

ನವದೆಹಲಿ: ನ್ಯೂಸ್‌ಕ್ಲಿಕ್‌ನ ವಿದೇಶಿ ಧನಸಹಾಯ ಮತ್ತು ಭಾರತ ವಿರೋಧಿ ಚಟುವಟಿಕೆಗಳ ತನಿಖೆ ಸಂಬಂಧ ದೆಹಲಿ ಪೊಲೀಸರ ತಂಡವು ಸಾಮಾಜಿಕ ಹೋರಾಟಗಾರ ಗೌತಮ್ ನವ್ಲಾಖಾ ಅವರ ವಿಚಾರಣೆ ನಡೆಸಿದೆ  ಎಂದು ಅಧಿಕಾರಿಯೊಬ್ಬರು ಶನಿವಾರ ತಿಳಿಸಿದ್ದಾರೆ.
  
ನವಿ ಮುಂಬೈನ ಅಗ್ರೋಲಿಯಲ್ಲಿರುವ  ನವ್ಲಾಖಾ ಅವರ ಮನೆಯಲ್ಲಿ ಎಸಿಪಿ ಮಟ್ಟದ ಅಧಿಕಾರಿ ನೇತೃತ್ವದ ತಂಡವು ಮೂರು ಗಂಟೆಗಳ ಕಾಲ ವಿಚಾರಣೆ ನಡೆಸಿತು. ನ್ಯೂಸ್ ಪೋರ್ಟಲ್‌ನ ಸಂಸ್ಥಾಪಕ ಮತ್ತು ಪ್ರಧಾನ ಸಂಪಾದಕ ಪ್ರಬೀರ್ ಪುರ್ಕಾಯಸ್ಥ ಅವರೊಂದಿಗಿನ ಸಂಪರ್ಕ ಮತ್ತು ಕಂಪನಿಯಲ್ಲಿ ಅವರ ಪಾಲಿನ ಬಗ್ಗೆ ವಿಚಾರಣೆ ನಡೆಸಲಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಗೃಹಬಂಧನದಲ್ಲಿದ್ದ ನವ್ಲಾಖಾ ಅವರಿಗೆ ಎಲ್ಗರ್ ಪರಿಷತ್-ಮಾವೋವಾದಿ ಸಂಪರ್ಕ ಪ್ರಕರಣದಲ್ಲಿ ಡಿಸೆಂಬರ್ 19 ರಂದು ಜಾಮೀನು ನೀಡಲಾಗಿತ್ತು. ಆಗಸ್ಟ್‌ನಲ್ಲಿ, ವಿಶೇಷ ಘಟಕ ನ್ಯೂಸ್‌ಕ್ಲಿಕ್ ನ್ಯೂಸ್ ಪೋರ್ಟಲ್ ವಿರುದ್ಧ ಕಾನೂನುಬಾಹಿರ ಚಟುವಟಿಕೆ ತಡೆ ಕಾಯ್ದೆಯಡಿ ಎಫ್‌ಐಆರ್ ದಾಖಲಿಸಿದೆ. ದೇಶದ ವಿರುದ್ಧ ಅಸಮಾಧಾನವನ್ನು ಉಂಟುಮಾಡಲು ಚೀನಾದಿಂದ ದೊಡ್ಡ ಪ್ರಮಾಣದ ಹಣ ಬಂದಿದೆ ಎಂದು ಆರೋಪಿಸಿದೆ. 

ತನಿಖಾ ಸಂಸ್ಥೆಯು ನ್ಯೂಸ್ ಪೋರ್ಟಲ್‌ನ ಸಂಸ್ಥಾಪಕ ಮತ್ತು ಪ್ರಧಾನ ಸಂಪಾದಕ ಪ್ರಬೀರ್ ಪುರ್ಕಾಯಸ್ಥ ಮತ್ತು ಮಾನವ ಸಂಪನ್ಮೂಲ ವಿಭಾಗದ ಮುಖ್ಯಸ್ಥ ಅಮಿತ್ ಚಕ್ರವರ್ತಿ ಅವರನ್ನು ಅಕ್ಟೋಬರ್ 3 ರಂದು ಬಂಧಿಸಿತ್ತು. ಅವರು ಪ್ರಸ್ತುತ ನ್ಯಾಯಾಂಗ ಬಂಧನದಲ್ಲಿದ್ದಾರೆ.

ಚೀನಾದ ವಿದೇಶಿ ಫಂಡ್ ನ್ನು ಸಾಮಾಜಿಕ ಹೋರಾಟಗಾರರಾದ ಗೌತಮ್ ನವ್ಲಾಖಾ ಮತ್ತು ತೀಸ್ತಾ ಸೀತಲ್ವಾಡ್, ಅವರ ಪತಿ ಮತ್ತು ಜಾವೇದ್ ಆನಂದ್ ಮತ್ತು ಪತ್ರಕರ್ತರಾದ ಊರ್ಮಿಲೇಶ್, ಆರಾತ್ರಿಕಾ ಹಲ್ಡರ್, ಪರಂಜಯ್ ಗುಹಾ ಠಾಕುರ್ತಾ ಮತ್ತು ಅಭಿಸಾರ್ ಶರ್ಮಾ ಮತ್ತು ಇತರರಿಗೆ ವಿತರಿಸಲಾಗಿದೆ. ನವ್ಲಾಖಾ  1991 ರಿಂದ ಪುರ್ಖಾಯಸ್ಥರೊಂದಿಗೆ ಸಂಬಂಧ ಹೊಂದಿದ್ದಾರೆ ಮತ್ತು 2018 ರಿಂದ PPK ನ್ಯೂಸ್‌ಕ್ಲಿಕ್ ಸ್ಟುಡಿಯೋ ಪ್ರೈವೇಟ್ ಲಿಮಿಟೆಡ್‌ನ ಷೇರುದಾರರಾಗಿದ್ದಾರೆ ಎಂದು ಎಂದು ಎಫ್‌ಐಆರ್ ನಲ್ಲಿ ಹೇಳಲಾಗಿದೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ದೆಹಲಿಯಲ್ಲಿ ನಾಯಕರ ಬಂಧನ, ಮೆಟ್ರೋ ಸ್ಥಗಿತ ಕುರಿತ ನ್ಯಾಯಾಂಗ ನಿಂದನೆ: ಭಾನುವಾರವೂ 'ಸುಪ್ರೀಂ' ವಿಶೇಷ ಪೀಠದಿಂದ ವಿಚಾರಣೆ!

BBK 13: ಗಾನವಿ ಹೇಳಿಕೆಗೆ ನೊಂದು ಗಗನ್ ತಾಯಿಗೆ ತಾನೇ ಕ್ಷಮೆ ಕೇಳಿ ಕಣ್ಣೀರು ಹಾಕಿದ ಸುದೀಪ್

ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಭಾರತ, ಆಫ್ರಿಕಾಗೆ ಸೂಕ್ತ ಪ್ರಾತಿನಿಧ್ಯ ಸಿಗಲೇಬೇಕು: ಜೈಶಂಕರ್ ಆಗ್ರಹ

ಪ್ರತಿಭಟನೆಗಳ ನಡುವೆಯೇ ಚು. ಆಯೋಗ ಮಹತ್ವದ ನಡೆ, ಹೊಸ ಉಪಾಯುಕ್ತರ ನೇಮಕ, 27 ಅಧಿಕಾರಿಗಳಿಗೆ ಹೊಸ ಹೊಣೆ!

ಮಣಿಪುರದಲ್ಲಿ ಮತ್ತೆ ಭುಗಿಲೆದ್ದ ಹಿಂಸಾಚಾರ: 30 ಮನೆ-ಅಂಗಡಿಗಳಿಗೆ ಬೆಂಕಿ, ಕನಿಷ್ಠ 5 ಸಾವು!