ದೇಶ

'ರಾಹುಲ್ ಗಾಂಧಿ ಓರ್ವ ಸಾಮಾನ್ಯ ಕಾಂಗ್ರೆಸ್ ಸಂಸದ, ಅವರನ್ನು ಹೆಚ್ಚು ಹೈಲೈಟ್ ಮಾಡಬೇಡಿ': ದಿಗ್ವಿಜಯ ಸಿಂಗ್ ಸೋದರ

Ramyashree GN

ಭೋಪಾಲ್: ರಾಹುಲ್ ಗಾಂಧಿ ಒಬ್ಬ ಸಾಮಾನ್ಯ ಪಕ್ಷದ ಕಾರ್ಯಕರ್ತ ಮತ್ತು ಸಂಸದರಾಗಿದ್ದು, ಅವರನ್ನು ಅಷ್ಟೊಂದು ಹೈಲೈಟ್ ಮಾಡಬಾರದು ಎಂದು ಕಾಂಗ್ರೆಸ್ ಮಾಜಿ ಸಂಸದ ಲಕ್ಷ್ಮಣ್ ಸಿಂಗ್ ಹೇಳಿದ್ದಾರೆ.

ಕಾಂಗ್ರೆಸ್ ಹಿರಿಯ ನಾಯಕ ದಿಗ್ವಿಜಯ ಸಿಂಗ್ ಅವರ ಕಿರಿಯ ಸಹೋದರರಾದ ಲಕ್ಷ್ಮಣ್ ಸಿಂಗ್ ಅವರು ಮಧ್ಯ ಪ್ರದೇಶದ ಗುಣಾ ನಗರದ ಕಾಂಗ್ರೆಸ್ ಕಚೇರಿಯಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದರು.

ಲೋಕಸಭೆಯಲ್ಲಿ ಹೇಳಿಕೆ ನೀಡುವಾಗ ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಅವರ ಮುಖವನ್ನು ಟಿವಿಯಲ್ಲಿ ತೋರಿಸುವುದು ಕಡಿಮೆ ಎಂಬ ಸುದ್ದಿಗಾರ ಪ್ರಶ್ನೆಗೆ ಉತ್ತರಿಸಿದ ಅವರು, 'ರಾಹುಲ್ ಗಾಂಧಿ ಅವರು ಸಂಸದರಾಗಿದ್ದಾರೆ. ಅವರು (ಪಕ್ಷದ) ಅಧ್ಯಕ್ಷರಲ್ಲ ಮತ್ತು ಕಾಂಗ್ರೆಸ್ ಕಾರ್ಯಕರ್ತರಷ್ಟೆ. ಇದನ್ನೂ ಹೊರತುಪಡಿಸಿ ರಾಹುಲ್ ಗಾಂಧಿ ಏನೂ ಅಲ್ಲ' ಎಂದರು.

'ನೀವು (ಮಾಧ್ಯಮಗಳು) ರಾಹುಲ್ ಗಾಂಧಿಯನ್ನು ಇಷ್ಟು ಹೈಲೈಟ್ ಮಾಡಬಾರದು ಮತ್ತು ನಾವೂ ಕೂಡ ಅವರನ್ನು ಹೈಲೈಟ್ ಮಾಡಬಾರದು. ರಾಹುಲ್ ಗಾಂಧಿ ಕೇವಲ ಸಂಸದರಾಗಿದ್ದು, ಅವರು ಪಕ್ಷದ ಉಳಿದ ಸಂಸದರಂತೆಯೇ ಸಮಾನರು' ಎಂದು ಐದು ಬಾರಿ ಸಂಸದ ಹಾಗೂ ಮೂರು ಬಾರಿ ಶಾಸಕರಾಗಿರುವ ಲಕ್ಷ್ಮಣ್ ಸಿಂಗ್ ಹೇಳಿದ್ದಾರೆ.

'ಯಾವುದೇ ಒಬ್ಬ ವ್ಯಕ್ತಿಯು ಹುಟ್ಟಿನಿಂದ ದೊಡ್ಡವರು ಆಗುವುದಿಲ್ಲ. ರಾಹುಲ್ ಗಾಂಧಿಯನ್ನು ಅಂತಹ ದೊಡ್ಡ ನಾಯಕ ಎಂದು ಪರಿಗಣಿಸಬೇಡಿ. ನಾನು ಹಾಗೆ ಪರಿಗಣಿಸಿಲ್ಲ. ಅವರು ಸಾಮಾನ್ಯ ಸಂಸದ. ನೀವು ಅವರನ್ನು ಹೈಲೈಟ್ ಮಾಡುತ್ತೀರೋ ಇಲ್ಲವೋ ಎಂಬುದು ಮುಖ್ಯವಲ್ಲ' ಎಂದು ಲಕ್ಷ್ಮಣ್ ಸಿಂಗ್ ಹೇಳಿದರು.

ಕಳೆದ ತಿಂಗಳು ನಡೆದ ಮಧ್ಯಪ್ರದೇಶ ಚುನಾವಣೆಯಲ್ಲಿ ಬಿಜೆಪಿಯ ಪ್ರಿಯಾಂಕಾ ಪೆಂಚಿ ಗುನಾ ಜಿಲ್ಲೆಯ ಚಚೌರಾ ವಿಧಾನಸಭಾ ಕ್ಷೇತ್ರದಿಂದ ಲಕ್ಷ್ಮಣ್ ಸಿಂಗ್ ಅವರನ್ನು 61,000 ಕ್ಕೂ ಹೆಚ್ಚು ಮತಗಳಿಂದ ಸೋಲಿಸಿದರು.

SCROLL FOR NEXT